1. Budget 2023: ಸಂಸತ್ತಿನಲ್ಲಿ ಬುಧವಾರ ಕೇಂದ್ರ ಬಜೆಟ್ ಮಂಡನೆ, ಜನಪರ ಘೋಷಣೆ ನಿರೀಕ್ಷೆ
ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಬಹು ನಿರೀಕ್ಷಿತ 2023-24ರ ಸಾಲಿನ ಕೇಂದ್ರ ಬಜೆಟ್ ಅನ್ನು ಬುಧವಾರ ಮಂಡಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ಮುಂಗಡಪತ್ರ ಮಂಡಿಸಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಜನಪರ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Budget 2023: ಬಜೆಟ್ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ, ಬಸವಣ್ಣನ ‘ಕಾಯಕವೇ ಕೈಲಾಸ’ ಸ್ಮರಿಸಿದ ರಾಷ್ಟ್ರಪತಿ
ಹೆಚ್ಚಿನ ಓದಿಗಾಗಿ: Budget 2023: ಜನ ಸಾಮಾನ್ಯರ ಪರ ಬಜೆಟ್: ಪ್ರಧಾನಿ ನರೇಂದ್ರ ಮೋದಿ ಭರವಸೆ
2. IMF Report : ಭಾರತ 2023ರಲ್ಲಿ ಪ್ರಬಲ ಆರ್ಥಿಕತೆಯಾಗಲಿದೆ: ಐಎಂಎಫ್ ಭವಿಷ್ಯ
ಭಾರತ ಮತ್ತು ಚೀನಾ 2023ರಲ್ಲಿ ಪ್ರಬಲ ಆರ್ಥಿಕತೆಗಳಾಗಿ ನಿರ್ಣಾಯಕ ಪಾತ್ರ ವಹಿಸಲಿದೆ. ಜಾಗತಿಕ ಬೆಳವಣಿಗೆಯಲ್ಲಿ 50% ಪಾಲನ್ನು ವಹಿಸಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (IMF) ತನ್ನ ವರದಿಯಲ್ಲಿ ತಿಳಿಸಿದೆ. ಅಮೆರಿಕ ಮತ್ತು ಯುರೋಪ್ ಕೇವಲ 10ರಲ್ಲಿ ಒಂದು ಭಾಗವನ್ನು ಮಾತ್ರ ವಹಿಸಲಿವೆ ಎಂದಿರುವುದು ಗಮನಾರ್ಹ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Economic Survey 2023: ಜಿಡಿಪಿ ಪ್ರಗತಿ 2023-24ರಲ್ಲಿ 6%ರಿಂದ 6.8% ಸಂಭವ: ಆರ್ಥಿಕ ಸಮೀಕ್ಷೆ ಬಹಿರಂಗ
3. BBC Documentary: ‘ಸ್ವತಂತ್ರ ನೀತಿ ವಿರುದ್ಧ ಮಾಹಿತಿ ಸಮರ’, ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ರಷ್ಯಾ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್ (India: The Modi Question) ಡಾಕ್ಯುಮೆಂಟರಿ (BBC Documentary) ಕುರಿತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಕೂಡ ಸಾಕ್ಷ್ಯಚಿತ್ರದ ವಿರುದ್ಧ ಮಾತನಾಡಿದ್ದು, “ಸ್ವತಂತ್ರ ನೀತಿ ಹೊಂದಿರುವ ರಾಷ್ಟ್ರಗಳ ವಿರುದ್ಧ ಬಿಬಿಸಿ ಮಾಹಿತಿ ಸಮರ ಸಾರಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Ramesh Jarkiholi : ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುತ್ತಾರ ಸಿಎಂ?: ರಮೇಶ್ ಜಾರಕಿಹೊಳಿ ಭೇಟಿ ಕುತೂಹಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪದ ನಂತರ ಪ್ರಕರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಿಬಿಐಗೆ ವಹಿಸುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಆಗಮಿಸಿದ ರಮೇಶ್ ಜಾರಕಿಹೊಳಿ ಸಾಕಷ್ಟು ಹೊತ್ತು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. KS Eshwarappa : ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸಲ್ಲ, ಹೆಣಾನ ನಾಯಿ ಕೂಡ ಮೂಸಲ್ಲ ಎಂದ ಈಶ್ವರಪ್ಪ
ʻಸತ್ರೂ ಬಿಜೆಪಿ ಸೇರಲ್ಲʼ ಎಂಬ ಹೇಳಿಕೆಗೆ ಪ್ರತಿಯಾಗಿ ಕಮಲ ಪಕ್ಷದ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಸೋಮವಾರ ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದರೆ, ಮಂಗಳವಾರ ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದ್ದಾರೆ. ʻʻಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸ್ಕೊಳ್ಳೊಲ್ಲ. ಇನ್ನು ಅವರ ಹೆಣ ತಗೊಂಡು ಏನು ಮಾಡೋದು? ಅವರ ಹೆಣಾನ ನಾಯಿ ಕೂಡ ಮೂಸಲ್ಲʼʼ ಎಂದು ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Gautam Adani : ವಿಶ್ವದ ಟಾಪ್ 10 ಬಿಲಿಯನೇರ್ ಪಟ್ಟಿಯಿಂದ ಹೊರ ಬಿದ್ದ ಗೌತಮ್ ಅದಾನಿ, ರ‍್ಯಾಂಕ್ 11ಕ್ಕೆ ಕುಸಿತ
ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಬಿಲಿಯನೇರ್‌ಗಳ ಪಟ್ಟಿಯಿಂದ ಗೌತಮ್ ಅದಾನಿ (Gautam Adani) ಹೊರಬಿದ್ದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಕುಸಿದ ಬಳಿಕ ಅದಾನಿಯವರ ನಿವ್ವಳ ಸಂಪತ್ತಿನಲ್ಲೂ ಇಳಿಕೆಯಾಗಿದೆ. ಇದರ ಪರಿಣಾಮ ಮೂರನೇ ಸ್ಥಾನದಲ್ಲಿದ್ದ ಅದಾನಿ ಈಗ 11ಕ್ಕೆ ಕುಸಿದಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Indira Gandhi: ಬಿಂದ್ರನ್‌ವಾಲೆ ಉಗ್ರನಾಗಲು ಇಂದಿರಾ ಗಾಂಧಿ ಕಾರಣ, ನಿವೃತ್ತ ಲೆ.ಜ. ಕೆ.ಎಸ್. ಬ್ರಾರ್ ಹೇಳಿಕೆ
1984ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿದ್ದ ಖಲಿಸ್ತಾನಿ ಉಗ್ರರನ್ನು ಸದೆಬಡಿಯಲು ನಡೆಸಿದ ಆಪರೇಷನ್ ಬ್ಲ್ಯೂ ಸ್ಟಾರ್‌ನಲ್ಲಿ ಹತನಾದ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಕುರಿತು ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕುಲದೀಪ್ ಸಿಂಗ್ ಬ್ರಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಬಿಂದ್ರನ್‌ವಾಲೆಯು ಉಗ್ರಗಾಮಿಯಾಗಿ ಬೆಳೆಯಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi)” ಅವರೇ ಕಾರಣ” ಎಂದು ಎಎನ್‌ಐ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Janardhana Reddy : ಬಳ್ಳಾರಿಯ ಕಣದಲ್ಲಿ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ V/S ಸೋಮಶೇಖರ್ ರೆಡ್ಡಿ; ಜನಾರ್ದನ ರೆಡ್ಡಿ ಘೋಷಣೆ
ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಚುನಾವಣೆಯನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ್ದು, ಸ್ವತಃ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾಲಕ್ಷ್ಮಿ ಅವರೇ ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಈ ವಿಚಾರವನ್ನು ಜನಾರ್ದನ ರೆಡ್ಡಿ (Janardhana Reddy) ಅವರೇ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಲ್ಯಾಣ ರಥ ಯಾತ್ರೆಯಲ್ಲಿ ರೆಡ್ಡಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಬಳ್ಳಾರಿ ನಗರದಲ್ಲಿ ಈಗ ರೆಡ್ಡಿ ಅವರ ಸೋದರ ಸೋಮಶೇಖರ ರೆಡ್ಡಿ ಬಿಜೆಪಿ ಶಾಸಕರಾಗಿದ್ದಾರೆ. ಇದರೊಂದಿಗೆ ಬಳ್ಳಾರಿ ನಗರ ಕೌಟುಂಬಿಕ ಹೋರಾಟಕ್ಕೆ ಅಣಿಯಾಗಬೇಕಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. LIC WhatsApp Services: ವಾಟ್ಸಾಪ್‌ನಲ್ಲೇ ನಿಮ್ಮ ಎಲ್ಐಸಿ ಪ್ರೀಮಿಯಂ ಮಾಹಿತಿ ತಿಳಿದುಕೊಳ್ಳಿ! ನೋಂದಣಿ ಹೇಗೆ?
ಜೀವ ವಿಮಾನ ನಿಗಮ(Life Insurance Corporation Of India-LIC) ವಿಮೆಗೆ ಸಂಬಂಧಿಸಿದ ಸೇವೆಗಳನ್ನು ನೀವು ಪಡೆಯಬೇಕಿದ್ದರೆ, ಹತ್ತಿರದ ವಿಮಾ ಶಾಖೆ ಕಚೇರಿಗೆ ಹೋಗಬೇಕಿತ್ತು. ಇಲ್ಲವೇ ಇಂಟರ್ನೆಟ್‌ನಲ್ಲಿ ಸೇವೆಗಳನ್ನು ಪಡೆಯಬೇಕಿತ್ತು. ಈಗ ಎಲ್ಐಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಾಟ್ಸಾಪ್‌ನಲ್ಲಿ ಹಲವು ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಹಲವು ಸೇವೆಗಳನ್ನು ಒದಗಿಸುತ್ತಿವೆ. ಈ ಸಾಲಿಗೆ ಈಗ ಎಲ್ಐಸಿ ಕೂಡ ಸೇರ್ಪಡೆಯಾದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Brahmin cookies: ಬಿಸ್ಕಿಟ್ ಮೇಲೆ ಬ್ರಾಹ್ಮಣ ವಟುವನ್ನು ಚಿತ್ರಿಸಿದ ಬೇಕರಿ; ಜಾತಿ ಇಲ್ಲೂ ಬಂತಾ ಎಂದು ನೆಟ್ಟಿಗರ ಅಸಮಾಧಾನ
ವಿಶೇಷ ಬಿಸ್ಕಿಟ್ಗಳ ತಯಾರಿಕೆಗೇ ಹೆಸರಾದ ಫ್ರೆಡ್ಡಿ ಬೇಕಿಂಗ್ ಎಂಬ ಬೇಕರಿ ಈಗ ಒಂದು ವಿವಾದ ಹುಟ್ಟುಹಾಕಿದೆ. ಬ್ರಾಹ್ಮಣ ಕುಟುಂಬವೊಂದು ಮನೆ ಮಗನ ಉಪನಯನಕ್ಕಾಗಿ ಬಿಸ್ಕಿಟ್ ತಯಾರು ಮಾಡಿಕೊಡುವಂತೆ ಬೇಕರಿಗೆ ಆರ್ಡರ್ ಕೊಟ್ಟಿತ್ತು. ಅದರಂತೆ ಫ್ರೆಡ್ಡಿ ಬೇಕಿಂಗ್ ಬಿಸ್ಕಿಟ್ ತಯಾರು ಮಾಡಿ, ಅವರಿಗೆ ಕೊಟ್ಟಿದೆ. ಆದರೆ ಈ ಬಿಸ್ಕಿಟ್ಗಳಲ್ಲಿ ಮೂಡಿದ್ದ ಚಿತ್ರ ಅನೇಕರ ಕಣ್ಣುಕೆಂಪಾಗಿಸಿವೆ. ಅದು ಉಪನಯನಕ್ಕೆ ಬೇಕಾದ ಬಿಸ್ಕಿಟ್ ಆಗಿದ್ದರಿಂದ ಅದರ ಮೇಲೆ ‘ಬ್ರಾಹ್ಮಣ ವಟು’ ವಿನ ಚಿತ್ರ ರೂಪಿಸಿದ್ದರು. ಬ್ರಾಹ್ಮಣ ಕುಕ್ಕೀಸ್ ಎಂದೇ ಅದನ್ನು ಹೆಸರಿಸಿದ್ದರು. ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Asaram Bapu: ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ, ಜತೆಗೆ 50 ಸಾವಿರ ರೂ. ದಂಡ
- ಆಂಧ್ರಪ್ರದೇಶದ ಹೊಸ ರಾಜಧಾನಿ ವಿಶಾಖಪಟ್ಟಣಂ; ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ
- Social Media: ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಯಾವ ವಯಸ್ಸಿನಿಂದ ಸೂಕ್ತ?
- Video blackmail : ಬೆತ್ತಲೆ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್; ಹಣ ಹೊಂದಿಸಲಾಗದೆ ಯುವಕ ಆತ್ಮಹತ್ಯೆ
- Social Media: ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಯಾವ ವಯಸ್ಸಿನಿಂದ ಸೂಕ್ತ?
- ದಶಮುಖ ಅಂಕಣ: ಅದಲು ಬದಲು ಕಂಚಿ ಕದಲು