Site icon Vistara News

ವಿಸ್ತಾರ TOP 10 NEWS: ಬೆಂಗಳೂರಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿಯಿಂದ, ಬಿಜೆಪಿಗೆ ಹತ್ತಿರವಾದ ಜೆಡಿಎಸ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news usa to establish consulate office in Bengaluru to JDS getting closer to bjp and more news

#image_title

1. PM Modi US visit : ಮೋದಿ ಅಮೆರಿಕ ಪ್ರವಾಸ, ಭಾರತಕ್ಕೆ ಹೂಡಿಕೆಯ ಪ್ರವಾಹ
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಸುಮ್ಮನೇ ಕೈಗೊಳ್ಳುತ್ತಿಲ್ಲ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಷ್ಟಕ್ಕೇ ಅದು ಸೀಮಿತವಲ್ಲ. ಜಗತ್ತಿನ ನಂ. ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಸೇರಿದಂತೆ ಹಲವಾರು ಜಾಗತಿಕ ಉದ್ಯಮಿಗಳನ್ನೂ, ಹೂಡಿಕೆದಾರರನ್ನೂ ಪ್ರಧಾನಿ ಭೇಟಿಯಾಗುತ್ತಿದ್ದಾರೆ. ಇದರ ಪರಿಣಾಮ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ಪ್ರವಾಹ ಹೆಚ್ಚುವ ನಿರೀಕ್ಷೆಯೂ ಉಂಟಾಗಿದೆ. (PM Modi US visit) ಜತೆಗೆ ಅತ್ಯಂತ ಸಕಾಲದಲ್ಲಿ ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಮಿಲಿಟರಿ ಮತ್ತು ಟೆಕ್ನಾಲಜಿ ಸಹಭಾಗಿತ್ವದ ಒಪ್ಪಂದವನ್ನು ಉಭಯ ದೇಶಗಳು ಕೈಗೊಳ್ಳಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. PM Modi US Visit: ಅಮೆರಿಕಕ್ಕೆ ತೆರಳಿ ಕನ್ನಡಿಗರ ಬಹುದಿನಗಳ ಆಸೆ ಈಡೇರಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು (PM Modi US Visit), ಭಾರತಕ್ಕೆ ನೆರವಾಗುವ ದಿಸೆಯಲ್ಲಿ ಹಲವು ರೀತಿ ನೆರವಾಗುತ್ತಿದೆ. ಈಗಾಗಲೇ, ಭಾರತೀಯರಿಗೆ ಎಚ್‌-1B ವೀಸಾ ನೀಡುವುದು, ವೀಸಾ ನಿಯಮ ಸಡಿಲಿಸುವುದು, ಸ್ಟ್ರೈಕರ್‌ ಶಸ್ತ್ರಸಜ್ಜಿತ ವಾಹನಗಳು, ಹೌವಿಟ್ಜರ್‌ ಗನ್‌ಗಳನ್ನು ನೀಡುವ ಕುರಿತು ಒಪ್ಪಂದಗಳಿಗೆ ಮೋದಿ ಸಹಿ ಹಾಕಲಿದ್ದಾರೆ. ಇದರ ಬೆನ್ನಲ್ಲೇ, ಕರ್ನಾಟಕದ ಬೆಂಗಳೂರು ಹಾಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಕಾನ್ಸುಲೇಟ್ ಕಚೇರಿಗಳನ್ನು ತೆರೆಯಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Congress Guarantee: ಹೋದ ದಾರಿಗೆ ಸುಂಕವಿಲ್ಲ ಸಿದ್ದರಾಮಯ್ಯ!: ಅಕ್ಕಿಗಾಗಿ ತುಳಿದ ಸಂಘರ್ಷದ ಮಾರ್ಗವೇ ಮುಳುವಾಯಿತೇ?
ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲೊಂದಾದ ಅನ್ನ ಭಾಗ್ಯ ಯೋಜನೆಯು ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ ಎಫ್‌ಸಿಐಗೆ ಕೇಂದ್ರ ಸರ್ಕಾರ ಬರೆದ ಪತ್ರವು ಯೋಜನೆಗೆ ಸಂಕಷ್ಟ ತಂದೊಡ್ಡಿದೆ. ಇದೇ ವೇಳೆ ರಾಜ್ಯ ಸರ್ಕಾರವು ಅನುಸರಿಸಿದ ಸಂಘರ್ಷದ ಮಾರ್ಗದಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತೇ ಎಂಬ ಮಾತುಗಳು ಕೇಳಿಬರುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Kempegowda Jayanti: ಕೆಂಪೇಗೌಡ ಜಯಂತಿಗೆ ರಾಜ್ಯಮಟ್ಟದ 2 ಕಾರ್ಯಕ್ರಮ: ಹಾಸನದಲ್ಲೊಂದು, ಬೆಂಗಳೂರಲ್ಲೊಂದು
ಈಗಾಗಲೆ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದಂತೆ ಹಾಸನದಲ್ಲಿ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೂ ಒಂದು ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Congress Guarantee: ಗೃಹಜ್ಯೋತಿಯಲ್ಲ ಇದು ಸುಡುಜ್ಯೋತಿ: ವಿದ್ಯುತ್‌ ದರ ಅರ್ಧ ಕಡಿಮೆ ಮಾಡಿ ಎಂದ ಎಚ್‌.ಡಿ. ಕುಮಾರಸ್ವಾಮಿ
ವಿದ್ಯುತ್ ಮೇಲೆ ವಿಧಿಸಿರುವ ಶೇ.9ರಷ್ಟು ತೆರಿಗೆಯಲ್ಲಿ ಶೇ.3ರಿಂದ 4ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು. ಅಪರಿಮಿತವಾಗಿ ಹೆಚ್ಚಳವಾಗಿರುವ ವಿದ್ಯುತ್ ದರದ ಬಗ್ಗೆ ಬಿಕ್ಕಟ್ಟಿಗೆ ಸಿಲುಕಿರುವ ಐಟಿ ಹಾಗೂ ಇಎಸ್‌ಡಿಎಂ ವಲಯಗಳ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. HD Devegowda: ನಿತೀಶ್‌ ಸಭೆಯಿಂದ ಜೆಡಿಎಸ್‌ ದೂರ; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಹೀನಾಯವಾಗಿ ಸೋಲು ಕಂಡಿರುವ ಜಾತ್ಯತೀತ ಜನತಾದಳ (Janatadal Secular) ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Parilament Election) ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ. ದೇವೇಗೌಡ (HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ಮಾತಿನಿಂದ ಸ್ಪಷ್ಟವಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Opposition Meet: ಪಾಟ್ನಾದಲ್ಲಿ ನಾಳೆ ಪ್ರತಿಪಕ್ಷಗಳ ಸಭೆ; ಮೋದಿ ವಿರುದ್ಧ ತೊಡೆ ತಟ್ಟಿದ ನಾಯಕರು!
2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಪ್ರಬಲ ಪ್ರತಿಪಕ್ಷ ಕೂಟವನ್ನು (Opposition Meet) ರಚಿಸುವ ತೆರೆಮರೆಯ ಪ್ರಯತ್ನಗಳು ಜೂ.23, ಶುಕ್ರವಾರ ಬಹಿರಂಗವಾಗಲಿವೆ. ಕಳೆದ ಕೆಲವು ತಿಂಗಳಿಂದ ಬಿಹಾರ ಸಿಎಂ ನಿತೀಶ್ ಕುಮಾರ್ (CM Nitish Kumar) ಅವರು ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಆರಂಭಿಸಿದ್ದರು. ಹೀಗಾಗಿ ಶುಕ್ರವಾರ ಈ ಸಂಬಂಧ ಪಾಟ್ನಾದಲ್ಲಿ (Patna) ಪ್ರತಿಪಕ್ಷಗಳ ಸಭೆ ನಡೆಯಲಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಸುಮಾರು 20 ಪಕ್ಷಗಳು ಪಾಲ್ಗೊಳ್ಳುತ್ತಿವೆ. ಆದರೆ, ಉತ್ತರ ಪ್ರದೇಶದ ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Health News: ನಗರದಲ್ಲೂ ಗ್ರಾಮೀಣ ವೈದ್ಯರ ಸೇವೆ ಬಳಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌
ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್‌ ವೈದ್ಯರನ್ನ ನಗರ ಪ್ರದೇಶಗಳಿಗೂ ಬಳಸಿಕೊಳ್ಳಲು ಈ ಬಾರಿಯ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್‌ಗಳನ್ನ ಈಗಾಗಲೇ ಕೆ.ಸಿ ಜನರಲ್ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ತಾಲೂಕು ಮಟ್ಟದ ಪ್ರಮುಖ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ
ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನವೇ ಅನುಮಾನಾಸ್ಪದ ರೀತಿಯಲ್ಲಿ ಮಾಲೀಕ ಮೃತಪಟ್ಟಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿ (Kadaba News) ಗುರುವಾರ ನಡೆದಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಅಪಘಾತದಲ್ಲಿ ಯುವಕ ಮೃತಪಟ್ಟಿರುವಂತೆ ಕಂಡುಬಂದಿದ್ದರೂ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Free Bus Service: ಸೀಟಿಲ್ಲ ಎಂದು ಬಸ್‌ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್‌ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ
ರಾಜ್ಯ ಸರ್ಕಾರದ ಶಕ್ತಿ ಯೋಜನೆ (Free Bus Service) ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರ ಸಂಚಾರ ಹೆಚ್ಚಳವಾಗಿದೆ. ಈ ನಡುವೆ ಸಾಕಷ್ಟು ಅವಾಂತರಗಳೂ ಇದರಿಂದ ನಡೆಯುತ್ತಿದೆ. ಇದೇ ವೇಳೆ ದಾಬಸ್‌ಪೇಟೆಯಲ್ಲಿ ಸೀಟಿಲ್ಲ ಎಂಬ ಕಾರಣ ನೀಡಿ ಮಹಿಳೆಯೊಬ್ಬರಿಗೆ ನಿರ್ವಾಹಕ (Bus Conductor) ಬಸ್‌ ನಿಲ್ಲಿಸದೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಇದ್ದಕ್ಕೆ ಆಕ್ರೋಶಗೊಂಡಿದ್ದ ಮಹಿಳೆಯೊಬ್ಬಳು ಮರುದಿನ ಸಂಬಂಧಿಕರ ಜತೆಗೆ ಬಂದು ಚಳ್ಳಕೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ತಡೆದಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಚಳ್ಳಕೆರೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version