Site icon Vistara News

ವಿಸ್ತಾರ TOP 10 NEWS: 68 ಕಾಂಗ್ರೆಸ್‌ ಟಿಕೆಟ್‌ಗೆ ಮಹಾಸಭಾ ಡಿಮ್ಯಾಂಡ್‌ನಿಂದ, ಅರುಣಾಚಲದಲ್ಲಿ ಚೀನಾ ಕಿರಿಕ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news veerashaiva lingayath community demands congress tecket to arunachal pradesh issue and more news

#image_title

1. Veerashaiva Lingayath: ಕಾಂಗ್ರೆಸ್‌ನಲ್ಲಿ 50-55 ವೀರಶೈವ ಲಿಂಗಾಯತರಿಗೆ ಟಿಕೆಟ್‌: ಶ್ಯಾಮನೂರು ಶಿವಶಂಕರಪ್ಪ
ವೀರಶೈವ ಲಿಂಗಾಯತ ಸಮುದಾಯಕ್ಕೆ (Veerashaiva Lingayath) ಸಮುದಾಯಕ್ಕೆ 68 ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರಲ್ಲಿ ಬೇಡಿಕೆ ಇಟ್ಟಿದ್ದೇವೆ, 50-55 ಜನರಿಗೆ ನೀಡುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Inside Story: ನಕಲಿ ಅಭ್ಯರ್ಥಿ ಪಟ್ಟಿಗೆ ಬಿಜೆಪಿ ಸಭೆ ಗಲಿಬಿಲಿ: ಘಟಾನುಘಟಿಗಳಿಗೇ ಶಾಕ್‌ ನೀಡಿದ ಕಿಲಾಡಿಗಳು

2. SC ST Reservation: ಮೀಸಲಾತಿ ಲಾಭ ಪಡೆಯಲು ಬಿಜೆಪಿ ಸಿದ್ಧತೆ: ಹುಬ್ಬಳ್ಳಿಯಲ್ಲಿ ಅಭಿನಂದನಾ ಸಮಾವೇಶ
ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ನಿರ್ಧಾರಗಳನ್ನು ಮತಗಳನ್ನಾಗಿ ಪರಿವರ್ತಿಸಲು ಬಿಜೆಪಿ ಮುಂದಾಗಿದೆ. ಈ ಸಂಬಂಧ ಏಪ್ರಿಲ್ 6ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇದಕ್ಕೆ ಕಾರಣರಾದವರನ್ನು ರಾಜ್ಯ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟದ ಮೂಲಕ ಅಭಿನಂದಿಸಲು ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Inside Story : ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಯಡಿಯೂರಪ್ಪರನ್ನೇ ಕೆಣಕಿದ ಸಾಹುಕಾರ್‌!
ಬೆಳಗಾವಿ ಬಿಜೆಪಿಯ ಕತೆ ಮುರಿದು ಬಿದ್ದ ಮನೆಯಂತಾಗಿದೆ. ಚುನಾವಣೆಯ ಹೊತ್ತಿಗಾದರೂ ಮನೆ ದುರಸ್ತಿ ಮಾಡೋಣ ಎಂದು ರಾಜ್ಯ ನಾಯಕರು ಪ್ರಯತ್ನಿಸಲು ಹೋದರೆ ಜಾರಕಿಹೊಳಿ ಬ್ರದರ್ಸ್‌ ʻಎಲ್ಲ ಕೆಲಸ ನಾವು ಹೇಳಿದ ಹಾಗೇ ಮಾಡ್ಬೇಕುʼ ಎಂದು ಹುಕುಂ ಹೊರಡಿಸುತ್ತಿದ್ದಾರೆ! (Karnataka Election Inside Story) ಇದು ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ವಾಸ್ತವ ಬದಲಿಸಲು ನಿಮ್ಮಿಂದ ಸಾಧ್ಯವೇ ಇಲ್ಲ; ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳ ಹೆಸರು ಬದಲಿಸಿದ ಚೀನಾಕ್ಕೆ ಭಾರತದ ತಿರುಗೇಟು​
ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳಿಗೆ ಮರುನಾಮಕರಣ ಮಾಡಿ, ಈ 11 ಸ್ಥಳಗಳನ್ನು ಒಳಗೊಂಡ ಒಟ್ಟಾರೆ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸಿದ ಚೀನಾಕ್ಕೆ ಭಾರತ ಖಡಕ್ ತಿರುಗೇಟು ಕೊಟ್ಟಿದೆ. ‘ನೀವು ಹೀಗೆಲ್ಲ ಏಕಪಕ್ಷೀಯವಾಗಿ ಏನೇನೋ ನಿರ್ಧಾರ ತೆಗೆದುಕೊಂಡು, ಸ್ಥಳಗಳ ಹೆಸರು ಬದಲು ಮಾಡಿದಾಕ್ಷಣ ಏನೂ ಪ್ರಯೋಜನವಿಲ್ಲ. ಅರುಣಾಚಲ ಪ್ರದೇಶ (Arunachal Pradesh)ದ ಪ್ರತಿಪ್ರದೇಶವೂ ಭಾರತದ್ದೇ, ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು ಎಂಬ ವಾಸ್ತವವನ್ನು ಬದಲಿಸಲು ನಿಮ್ಮಿಂದ ಸಾಧ್ಯವೇ ಇಲ್ಲ’ ಎಂದು ಚೀನಾಕ್ಕೆ ಖಡಕ್​ ಪ್ರತಿಕ್ರಿಯೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. World Bank : ಭಾರತದ ಜಿಡಿಪಿ ಮುನ್ನೋಟವನ್ನು 6.6%ರಿಂದ 6.3%ಕ್ಕೆ ಇಳಿಸಿದ ವಿಶ್ವಬ್ಯಾಂಕ್
ವಿಶ್ವ ಬ್ಯಾಂಕ್‌ (world Bank) 2023-24ರ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 6.6% ರಿಂದ 6.4%ಕ್ಕೆ ಇಳಿಸಿದೆ. ಹಣದುಬ್ಬರವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ಕಳೆದ ಮೇಯಿಂದ ಬಡ್ಡಿ ದರದಲ್ಲಿ 2.50% ಏರಿಸಿದೆ. ಇದರ ಪರಿಣಾಮ ಸಾಲದ ಬಡ್ಡಿ ದರಗಳು ಏರಿಕೆಯಾಗಿದೆ. ಇದು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Karnataka: ಜನರಿಗೆ ಕಾನೂನು ಸೇವೆ; ದೇಶದಲ್ಲೇ ಕರ್ನಾಟಕ ನಂ.1, ಟಾಪ್‌ 5 ಪಟ್ಟಿಯಲ್ಲಿ ದಕ್ಷಿಣ ಭಾರತದ 4 ರಾಜ್ಯಗಳು
ಜನರಿಗೆ ಕಾನೂನು ಸೇವೆ ಒದಗಿಸುವುದರಲ್ಲಿ (Access To Justice) ದೇಶದಲ್ಲೇ ಕರ್ನಾಟಕ (Karnataka) ಅಗ್ರಸ್ಥಾನಿಯಾಗಿದೆ. ಜತೆಗೆ, ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿವೆ ಎಂದು ಇಂಡಿಯಾ ಜಸ್ಟೀಸ್ ರಿಪೋರ್ಟ್ 2022 (IJR) ಹೇಳಿದೆ. ಮಂಗಳವಾರ ಐಜೆಆರ್ ರಿಪೋರ್ಟ್ ಬಿಡುಗಡೆ ಮಾಡಲಾಗಿದ್ದು, ದಿಲ್ಲಿ ಮತ್ತು ಚಂಡೀಗಢ ಹೊರತುಪಡಿಸಿ ಬೇರೆ ಯಾವುದೇ ರಾಜ್ಯವಾಗಲೀ, ಕೇಂದ್ರಾಡಳಿತ ಪ್ರದೇಶವಾಗಲೀ ತಮ್ಮ ವಾರ್ಷಿಕ ವೆಚ್ಚದಲ್ಲಿ ಶೇ.1ರಷ್ಟನ್ನೂ ನ್ಯಾಯಾಂಗದ ಮೇಲೆ ವೆಚ್ಚ ಮಾಡುವುದಿಲ್ಲ. ಹಾಗಾಗಿ, ಹೈಕೋರ್ಟ್‌ಗಳಲ್ಲಿ ಜಡ್ಜ್ ಖಾಲಿ ಹುದ್ದೆಗಳು ಶೇ.30ರಷ್ಟಿದೆ ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Migrants Workers: ಬೆಂಗಳೂರಿಂದ ಒಡಿಶಾಗೆ ನಡೆದುಕೊಂಡೇ ಹೋದ ಮೂವರು ಕಾರ್ಮಿಕರು! ಕಾರಣವೇನು?
ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮೂವರು ಕಾರ್ಮಿಕರ ಕಣ್ಣೀರಿನ ಕಥೆ ಇದು. ದೂರದ ಒಡಿಶಾದಿಂದ ತುತ್ತು ಅನ್ನಕ್ಕಾಗಿ ಬಂದಿದ್ದ ಅವರಿಗೆ, ಬೆಂಗಳೂರಿನಲ್ಲಿ ಕೆಲಸ ಮಾಡಿಸಿಕೊಂಡವರು ಸರಿಯಾಗಿ ವೇತನವನ್ನು ಕೊಡಲಿಲ್ಲ. ದುಡ್ಡು ಕೇಳಿದರೆ ಚಿತ್ರಹಿಂಸೆಯೇ ಉತ್ತರವಾಗಿತ್ತು. ಇದರಿಂದ ಬೇಸತ್ತು ಕೊನೆಗೂ ಆ ಮೂವರು ನಡೆದುಕೊಂಡೇ 1000 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಹೋಗಿದ್ದಾರೆ!(Migrants Workers). ಇದು ನಂಬಲು ಕಷ್ಟ ಆದರೂ ಇದು ನಿಜ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IPL 2023 : ಐಪಿಎಲ್​ನಿಂದ ಶ್ರೇಯಸ್​ ಅಯ್ಯರ್​ ಔಟ್​, ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೂ ಅಲಭ್ಯ
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಸರ್ಜರಿಗೆ ಒಳಗಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಅವರು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಆಡುವುದು ಸಾಧ್ಯವಿಲ್ಲ. ಇದರಿಂದಾಗಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: 48 ಗಂಟೆಯಲ್ಲಿ ಈ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಸಂಜೆ ಮಳೆ ಕಾಟ
ದಕ್ಷಿಣ ಒಳನಾಡಿನ (south Interior Karnataka) ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಮುಂದಿನ 48 ಗಂಟೆಯಲ್ಲಿ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka rain) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Video Viral: ದಿಲ್ಲಿ ಮೆಟ್ರೋದಲ್ಲಿ ಬಿಕಿನಿ ರೀತಿ ಬಟ್ಟೆ ತೊಟ್ಟ ಯುವತಿಯ ವಿಡಿಯೋ ವೈರಲ್! ಡಿಎಂಆರ್‌‌ಸಿ ಹೇಳಿದ್ದೇನು?
ದಿಲ್ಲಿ ಮೆಟ್ರೋ (Delhi Metro) ರೈಲಿನಲ್ಲಿ ಬಿಕಿನಿ ರೀತಿ ಬಟ್ಟೆ ಧರಿಸಿ ಪ್ರಯಾಣಿಸುತ್ತಿದ್ದ ಯುವತಿಯ ವಿಡಿಯೋ ವೈರಲ್ ಆಗಿದೆ. ಯುವತಿಯೊಬ್ಬಳು ತನ್ನ ಸೀಟ್‌ನಿಂದ ಎದ್ದು ಕೋಚ್‌ನಿಂದ ಇಳಿಯುವಾಗ, ಆಕೆ ಧರಿಸಿದ ಬಿಕಿನಿ ರೀತಿಯ ಬಟ್ಟೆಯು ಕಾಣತ್ತಿದೆ. ಈ ವಿಡಿಯೋ ಯಾವಾಗ ಚಿತ್ರಿಕರಿಸಿದ್ದು ಎಂಬುದರ ಮಾಹಿತಿ ಇಲ್ಲ. ಆದರೆ, ಇಂಟರ್ನೆಟ್‌ನಲ್ಲಿ ಯುವತಿಯ ಬಟ್ಟೆ ಬಗೆಗೆ ಪರ ಮತ್ತು ವಿರೋಧ ಚರ್ಚೆಗಳು ಜೋರಾಗಿವೆ. ಏತನ್ಮಧ್ಯೆ, ಪ್ರಯಾಣಿಕರು ಸಾಮಾಜಿಕ ಶಿಷ್ಟಾಚಾರಗಳನ್ನು ಪಾಲಿಸಬೇಕೆಂದು ದಿಲ್ಲಿ ಮೆಟ್ರೋ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Cow slaughter : ಗೋಸಾಗಾಟಗಾರ ಹತ್ಯೆ ಪ್ರಕರಣದ ಆರೋಪಿ ಪುನೀತ್‌ ಕೆರೆಹಳ್ಳಿ ವಿಡಿಯೊ ಮೂಲಕ ಪ್ರತ್ಯಕ್ಷ, ಪೊಲೀಸರಿಂದ ಹುಡುಕಾಟ
  2. Sikkim Avalanche: ಸಿಕ್ಕಿಂ ಹಿಮಕುಸಿತಕ್ಕೆ 6 ಜನ ಬಲಿ, ಹಿಮದಲ್ಲಿ ಸಿಲುಕಿದ್ದಾರೆ ಇನ್ನೂ 150ಕ್ಕೂ ಅಧಿಕ ಪ್ರವಾಸಿಗರು!
  3. Gold rate : ಬಂಗಾರದ ದರದಲ್ಲಿ 660 ರೂ. ಹೆಚ್ಚಳ, ಬೆಳ್ಳಿ 700 ರೂ. ತುಟ್ಟಿ
  4. 7th Pay commission : ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ; ರಾಜ್ಯ ನೌಕರರ ಸಂಘದಿಂದ ಹೆಚ್ಚಳಕ್ಕೆ ಮನವಿ
Exit mobile version