Site icon Vistara News

ವಿಸ್ತಾರ TOP 10 NEWS: ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಮುನ್ಸೂಚನೆಯಿಂದ, ಐಫೋನ್‌ ಉತ್ಪಾದಕ ಫಾಕ್ಸ್‌ಕಾನ್‌ ಸ್ಪಷ್ಟನೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-vistara akhada mega survey to foxconn letter and more news

#image_title

1. Pulse of Karnataka: ಸಮಸ್ತ ಕರ್ನಾಟಕ: ವಿಸ್ತಾರ-ಅಖಾಡ ಸಮೀಕ್ಷೆ: ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ಬಲಾಬಲ ಇಲ್ಲಿದೆ; ನಾಯಕತ್ವ ಯಾರಿಗೆ?
ಪೂರ್ಣ ಪ್ರಮಾಣದಲ್ಲಿ ಬಹುಮತವಿರುವ ಸರ್ಕಾರವೊಂದು ರಚನೆಯಾಗಿ ಪೂರ್ಣ ಐದು ವರ್ಷ ಅಧಿಕಾರ ನಡೆಸುವುದು ಈ ಬಾರಿಯೂ ಸಾಧ್ಯವಿಲ್ಲವೇ? ಮೈತ್ರಿ ಸರ್ಕಾರ, ಆಪರೇಷನ್‌ನಂತಹ ಹಗ್ಗಜಗ್ಗಾಟಕ್ಕೆ ಕರ್ನಾಟಕ ಈ ಬಾರಿಯೂ ಸಾಕ್ಷಿಯಾಗುತ್ತದೆಯೇ? ಇಂತಹದ್ದೊಂದು ಅನುಮಾನವನ್ನು ಕರ್ನಾಟಕದ ಅತಿ ದೊಡ್ಡ ಸಮೀಕ್ಷೆ ವ್ಯಕ್ತಪಡಿಸಿದೆ. ವಿಸ್ತಾರ ನ್ಯೂಸ್‌ ಹಾಗೂ ಅಖಾಡ ನಡೆಸಿದ ಮೆಗಾ ಸರ್ವೇಯ ಮೂಲಕ ರಾಜ್ಯದ ಎಲ್ಲ ಪಕ್ಷಗಳ ಬಲಾಬಲವನ್ನು ಮತದಾರರು ಹೊರಗೆಡವಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. H3N2 Influenza: ರಾಜ್ಯದಲ್ಲಿ 26 H3N2 ಕೇಸ್‌ ಪತ್ತೆ; ಬಿಸಿಲಿಗೆ ಬರಬೇಡಿ, ಬೇಕಾಬಿಟ್ಟಿ ಮಾತ್ರೆ ತಗೋಬೇಡಿ
ಎಚ್‌3ಎನ್‌2 (H3N2 Influenza) ಎಂಬುದು ಶೀತಜ್ವರದ ಹೊಸ ರೂಪಾಂತರಿಯಾಗಿದ್ದು, ರಾಜ್ಯದಲ್ಲಿ ಈವರೆಗೆ 26 ಕೇಸ್‌ಗಳು ಪತ್ತೆ ಆಗಿದ್ದು, ಬೆಂಗಳೂರಿನ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ಬೆಂಗಳೂರಲ್ಲಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Foxconn project : ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌, ರಾಜ್ಯ ಸರ್ಕಾರಕ್ಕೆ ಐಫೋನ್ ಉತ್ಪಾದಕ ಫಾಕ್ಸ್‌ಕಾನ್‌ ಅಧಿಕೃತ ಪತ್ರ
ಐಫೋನ್‌ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಫಾಕ್ಸ್‌ಕಾನ್‌, ಬೆಂಗಳೂರಿನಲ್ಲಿ ತನ್ನ ಮುಂಬರುವ ಪ್ರಾಜೆಕ್ಟ್‌ ಎಲಿಫೆಂಟ್‌ (Project Elephant) ಹೂಡಿಕೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಖಚಿತಪಡಿಸಿದೆ. ಇದರೊಂದಿಗೆ ಘಟಕದ ಸ್ಥಾಪನೆಯ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ (Foxconn Project in Bangaluru) ತೆರೆ ಎಳೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. V. Somanna: ಅಶೋಕ್‌ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?
ವಿಜಯ ಸಂಕಲ್ಪ ಯಾತ್ರೆಯ ರಥ ಅರ್ಧ ದಾರಿಯಲ್ಲಿರುವಾಗಲೇ ಸಚಿವ ಆರ್.‌ ಅಶೊಕ್‌ ಜತೆಗೆ ಮುನಿಸಿಕೊಂಡ ಸಚಿವ ವಿ. ಸೋಮಣ್ಣ (V. Somanna) ರಥ ಇಳಿದು ಹೋಗಿದ್ದು, ಪಕ್ಷ ಬಿಡುವ ಮಾತುಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Vijay Sankalpa Yatre: ಸೋಮಣ್ಣ ಇಡೀ ಕರ್ನಾಟಕದ ಫಿಗರ್: ಎರಡು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ ಎಂದ ಆರ್‌. ಅಶೋಕ್

5. Axis My India Survey: ದೇಶದಲ್ಲಿ ಮೋದಿಯೇ ಅತ್ಯಂತ ಪ್ರಭಾವಶಾಲಿ, ಸಮೀಕ್ಷೆಯಲ್ಲಿ ಶೇ.72ರಷ್ಟು ಜನ ಪ್ರಧಾನಿ ಪರ
ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ಜಾಗತಿಕವಾಗಿ ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ, ಬ್ರಿಟನ್‌ ಪ್ರಧಾನಿ ಸೇರಿ ವಿಶ್ವದ ನಾಯಕರ ಮಧ್ಯೆಯೂ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. ಮೋದಿ ಅವರು ಜಾಗತಿಕವಾಗಿ ಜನಪ್ರಿಯ ನಾಯಕ ಎನಿಸಿದರೆ, ಭಾರತದಲ್ಲಿ ಶೇ.72ರಷ್ಟು ಜನ ನರೇಂದ್ರ ಮೋದಿ ಅವರೇ ಅತ್ಯಂತ ಪ್ರಭಾವಶಾಲಿ ನಾಯಕ ಎಂಬುದಾಗಿ ನಂಬುತ್ತಾರೆ ಎಂದು ಸಮೀಕ್ಷಾ (Axis My India Survey) ವರದಿಯೊಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Helicopter landing: ಬಿ.ಎಸ್‌. ಯಡಿಯೂರಪ್ಪ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಭದ್ರತಾ ವೈಫಲ್ಯ; ಕಾಪ್ಟರ್‌ನತ್ತ ತೂರಿಬಂದವು ಪ್ಲಾಸ್ಟಿಕ್‌ ಚೀಲಗಳು!
ಕಲಬುರಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಹೆಲಿಕಾಪ್ಟರ್‌ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದಲ್ಲಿ ಲ್ಯಾಂಡ್‌ ಆಗದೆ, ಕೆಲಕಾಲ ಹಾರಾಟ ನಡೆಸುತ್ತಲೇ ಇತ್ತು. ಹೆಲಿಪ್ಯಾಡ್‌ನಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಲ್ಯಾಂಡಿಂಗ್‌ ವೇಳೆ ಹೆಲಿಕಾಪ್ಟರ್‌ನತ್ತ ಚೀಲಗಳು ತೂರಿಬಂದಿವೆ. ಈ ಹಿನ್ನೆಲೆಯಲ್ಲಿ ಪೈಲೆಟ್‌ ಲ್ಯಾಂಡ್‌ (Helicopter landing) ಮಾಡದೇ ಹಾರಾಟ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಂಗಳೂರು ಸ್ಫೋಟ : ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಶಾರಿಕ್‌ ಪೂರ್ಣ ಚೇತರಿಕೆ; ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಮತ್ತೆ 10 ದಿನ NIA ಕಸ್ಟಡಿಗೆ
ನವೆಂಬರ್‌ 19ರಂದು ಸಂಜೆ 4.29ಕ್ಕೆ ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ (ಮಂಗಳೂರು ಸ್ಫೋಟ) ಪ್ರಧಾನ ಆರೋಪಿ ಶಂಕಿತ ಉಗ್ರ ಮೊಹಮ್ಮದ್‌ ಶಾರಿಕ್‌ನನ್ನು ಮತ್ತೆ 1೦ ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Amitabh Bachchan: ‘ಪ್ರಾಜೆಕ್ಟ್ ಕೆ’ ಶೂಟಿಂಗ್‌ ವೇಳೆ ಅಮಿತಾಭ್‌ಗೆ ಗಾಯ: ಬ್ಲಾಗ್‌ನಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟ
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್‌ ಬಚ್ಚನ್‌ (Amitabh Bachchan) ತಮ್ಮ ಮುಂಬರುವ ಚಿತ್ರ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಹೈದರಾಬಾದ್‌ನಲ್ಲಿ ಗಾಯಗೊಂಡಿದ್ದಾರೆ. ನಟ ತಮ್ಮ ಬ್ಲಾಗ್‌ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WPL 2023 : ಡಬ್ಲ್ಯುಪಿಎಲ್​ನಂತೆ ಐಪಿಎಲ್​ನಲ್ಲೂ ವೈಡ್​ ಬಾಲ್, ನೋ ಬಾಲ್​​ ಪರೀಕ್ಷೆಗೆ ಡಿಆರ್​ಎಸ್​ ಬಳಕೆ?
ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ (WPL 2023) ವೈಡ್​ ಬಾಲ್​ ವೀಕ್ಷಣೆಗೂ ಡಿಆರ್​ಎಸ್​ (ಅಂಪೈರ್​ ತೀರ್ಪು ಮರುಪರಿಶೀಲನೆ) ಬಳಸಲಾಗುತ್ತಿದೆ. ಟೂರ್ನಿಯಲ್ಲಿ ಈಗಾಗಲೇ ಮುಕ್ತಾಯಗೊಂಡಿರುವ ಮೂರು ಪಂದ್ಯಗಳಲ್ಲಿ ಇಂಥ ದೃಶ್ಯಗಳನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇದೇ ನಿಯಮ ಮುಂಬರುವ ಐಪಿಎಲ್​ಗೂ ಅನ್ವಯವಾಗಲಿದೆ ಎಂದು ವರದಿಯಾಗಿದೆ. ಮಹಿಳೆಯರ ಐಪಿಎಲ್​ನಲ್ಲಿ ನೋ ಬಾಲ್​ ಹಾಗೂ ವೈಡ್​ ಪರಿಶೀಲನೆ ಮಾಡಲು ಡಿಆರ್​ಎಸ್​ ಬಳಸಲು ತಂಡದ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಅದೇ ಅವಕಾಶ ಪುರುಷ ಕ್ರಿಕೆಟಿಗರಿಗೂ ಲಭ್ಯವಾಗಲಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮಕ್ಕಳಿದ್ದರೂ ತನ್ನ ಆಸ್ತಿಯನ್ನೆಲ್ಲ ಉತ್ತರ ಪ್ರದೇಶ ರಾಜ್ಯಪಾಲರಿಗೆ ನೀಡಿದ 80ರ ವೃದ್ಧ; ಅಂತ್ಯಕ್ರಿಯೆಗೂ ಬರದಿರಲು ತಾಕೀತು
ಉತ್ತರ ಪ್ರದೇಶದಲ್ಲಿ 80 ವರ್ಷದ ವೃದ್ಧನೊಬ್ಬ ತಮ್ಮ 1.5 ಕೋಟಿ ರೂಪಾಯಿ ಆಸ್ತಿಯನ್ನು ಅಲ್ಲಿನ ರಾಜ್ಯಪಾಲರ ಹೆಸರಿಗೆ ಬರೆದಿದ್ದಾರೆ. ಐವರು ಮಕ್ಕಳಿದ್ದರೂ, ತಮ್ಮ ಆಸ್ತಿಯನ್ನೆಲ್ಲ ಅವರು ರಾಜ್ಯಪಾಲರಿಗೆ ಬರೆದುಕೊಟ್ಟು, ಸರ್ಕಾರದ ವತಿಯಿಂದ ಶಾಲೆಯನ್ನೋ, ಆಸ್ಪತ್ರೆಯನ್ನೋ ನಿರ್ಮಾಣ ಮಾಡಿ ಎಂದು ಹೇಳಿದ್ದಾರೆ. ತಮ್ಮ ಮಕ್ಕಳ ಬಗ್ಗೆ ತೀವ್ರವಾಗಿ ನೊಂದುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Lokayukta Raid : ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವಿರೂಪಾಕ್ಷಪ್ಪ ಮಾಡಾಳ್‌, ನಾಳೆಗೆ ಲಿಸ್ಟಿಂಗ್‌
  2. Siddaramaiah: ನಾನು ಸಾಯುವವರೆಗೂ ಆರ್‌ಎಸ್‌ಎಸ್ ವಿರೋಧಿ; ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಜಾರಿ ಹುನ್ನಾರ: ಸಿದ್ದರಾಮಯ್ಯ
  3. Blast In Afghanistan | ಆಫ್ಘನ್‌ ವಿದೇಶಾಂಗ ಸಚಿವಾಲಯದ ಬಳಿ ಆತ್ಮಾಹುತಿ ದಾಳಿ, 20ಕ್ಕೂ ಅಧಿಕ ಮಂದಿ ಸಾವು
  4. Coffee-Tea Scam: ಸಿದ್ದರಾಮಯ್ಯ ಮನೆಯಲ್ಲಿ ಕಾಫಿ-ಟೀ-ತಿಂಡಿಗೆ 200 ಕೋಟಿ ರೂ. ವೆಚ್ಚ: ಬಿಜೆಪಿ ನಾಯಕ ಎನ್‌.ಆರ್‌. ರಮೇಶ್‌ ಆರೋಪ
  5. Coffee-Tea Scam : ನನ್ನ ಅವಧಿಯ ಕಾಫಿ-ತಿಂಡಿ ಖರ್ಚು 200 ಕೋಟಿ ಎಂಬುದು ಸುಳ್ಳು, ಕೇವಲ 3.26 ಕೋಟಿ ರೂ: ಸಿದ್ದರಾಮಯ್ಯ ತಿರುಗೇಟು
  6. Prayagraj Encounter: ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯ ಎನ್‌ಕೌಂಟರ್‌
  7. WhatsApp New Feature : ವಾಟ್ಸಾಪ್‌ಗೆ ಶೀಘ್ರವೇ ಹೊಸ ಫೀಚರ್, ಇನ್ನು ಸ್ಪ್ಯಾಮ್ ಕಾಲ್‌ಗಳ ಕಿರಿಕಿರಿ ಇಲ್ಲ!
Exit mobile version