1. ವಿಸ್ತಾರ ನ್ಯೂಸ್‌ನ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಭಿಯಾನ: ಶಿಕ್ಷಣ ಇಲಾಖೆ ಜತೆ ಮಹತ್ವದ ಒಡಂಬಡಿಕೆ
ವಿಸ್ತಾರ ನ್ಯೂಸ್ ಆರಂಭಿಸಿರುವ ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಸರ್ಕಾರಿ ಶಾಲಾ ದತ್ತು ಅಭಿಯಾನವನ್ನು (Vistara Campaign) ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಸ್ತಾರ ನ್ಯೂಸ್ ಮತ್ತು ಬಾಲ ಉತ್ಸವ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.
ವಿಧಾನಸೌಧದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಮತ್ತು ವಿಸ್ತಾರ ನ್ಯೂಸ್ ಹಾಗೂ ಬಾಲ ಉತ್ಸವ ಸಂಸ್ಥೆಯ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದ ಪತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಮತ್ತು ಬಾಲ ಉತ್ಸವ ಸಂಸ್ಥೆಯ ಮುಖ್ಯಸ್ಥ ರಮೇಶ್ ಬಾಲಸುಂದರಂ ಹಸ್ತಾಂತರಿಸಿಕೊಂಡರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Oscars 2023 Nominations: ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ, ಮಹತ್ವದ ಮನ್ನಣೆ
ಇತ್ತೀಚೆಗಷ್ಟೇ ಜಾಗತಿಕ ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದಿದ್ದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಈಗ ಆಸ್ಕರ್‌ನ (Oscars 2023 Nominations) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಗೆ ನಾಮ ನಿರ್ದೇಶನಗೊಂಡಿದೆ. ಆ ಮೂಲಕ ಭಾರತದ ಚಿತ್ರವೊಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಚಿತ್ರವನ್ನು ಎಸ್.ಎಸ್.ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Oscars 2023 Nominations: ಭಾರತದ ಎರಡು ಡಾಕ್ಯುಮೆಂಟರಿ ಚಿತ್ರಗಳೂ ಆಸ್ಕರ್‌ಗೆ ನಾಮನಿರ್ದೇಶನ
3. KR Market Flyover: ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈಓವರ್ ಮೇಲಿಂದ ದುಡ್ಡಿನ ಸುರಿಮಳೆ; ಗರಿ ಗರಿ ನೋಟಿಗೆ ಮುಗಿಬಿದ್ದ ಜನ!
ಕೆ.ಆರ್. ಮಾರ್ಕೆಟ್ ಫ್ಲೈಓವರ್ ಕೆಳಗೆ ನಿಂತಿದ್ದ ಜನರಿಗೆ ಖುಷಿಯೋ ಖುಷಿ. ಬಸ್ಸಿಗಾಗಿ ಕಾದು ನಿಂತಿದ್ದ ಜನರ ತಲೆ ಮೇಲೆ ಗರಿ ಗರಿ ನೋಟುಗಳ ಸುರಿಮಳೆಯೇ ಬಿದ್ದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಫ್ಲೈಓವರ್ ಮೇಲಿಂದ ದುಡ್ಡು ಬಿಸಾಡಿದ್ದು, ಪಕ್ಕಾ ಸಿನಿಮೀಯ ಮಾದರಿಯಲ್ಲಿ ಎಲ್ಲ ಪ್ರಸಂಗವೂ ನಡೆದಿತ್ತು. ದುಡ್ಡನ್ನು ಎಸೆಯುತ್ತಿದ್ದಂತೆ ಜನರಿಗೆ ಒಮ್ಮೆ ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ನೋಡಿದರೆ ದುಡ್ಡು ತಮ್ಮ ತಲೆ ಮೇಲೆ ಬೀಳುತ್ತಿತ್ತು. ಫ್ಲೈಓವರ್‌ನ ಅಕ್ಕಪಕ್ಕ ಇದ್ದವರೆಲ್ಲರೂ ಆ ದುಡ್ಡನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: KR Market Flyover : ಕೆ.ಆರ್. ಮಾರ್ಕೆಟ್ ಬಳಿ ದುಡ್ಡಿನ ಮಳೆಗರೆದ ಅರುಣ್ ಯಾರು?; ಇಲ್ಲಿದೆ ಅವನ ಫುಲ್ ಡಿಟೇಲ್ಸ್!
4. Surgical Strike | ಸೇನೆ ಸಾಕ್ಷ್ಯ ಕೊಡಬೇಕಿಲ್ಲ, ಸ್ವಪಕ್ಷದ ದಿಗ್ವಿಜಯ್ ಸಿಂಗ್‌ಗೆ ರಾಹುಲ್ ಗಾಂಧಿ ತಿರುಗೇಟು
2016ರಲ್ಲಿ ಪಾಕಿಸ್ತಾನ ಉಗ್ರರ ಮೇಲೆ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ (Surgical Strike) ಬಗ್ಗೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ. “ದಿಗ್ವಿಜಯ್ ಹೇಳಿಕೆಗೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ” ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಸ್ವಪಕ್ಷದ ನಾಯಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Prajadhwani : ಘೋಷಣೆ ಈಡೇರಿಸದಿದ್ದರೆ ರಾಜಕಾರಣದಿಂದ ನಿವೃತ್ತಿ : ಡಿ.ಕೆ. ಶಿವಕುಮಾರ್ ಶಪಥ
ಕಾಂಗ್ರೆಸ್ ಎಂದಿಗೂ ನುಡಿದಂತೆ ನಡೆದಿದೆ. ಹಾಗೊಂದು ವೇಳೆ ನುಡಿದಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Republic Day Tableau : ಯಾವ ಪಕ್ಷದ ಅವಧಿಯಲ್ಲಿ ಹೆಚ್ಚು ಸ್ತಬ್ಧಚಿತ್ರಗಳು ತಿರಸ್ಕೃತ ಆಗಿದ್ದವು? ಇಲ್ಲಿದೆ ಮಾಹಿತಿ
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರ (Republic Day Tableau) ಆಯ್ಕೆ ಹಾಗೂ ತಿರಸ್ಕಾರದ ಕುರಿತು ಕರ್ನಾಟಕದಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಈ ವರ್ಷ ಕರ್ನಾಟಕದ ಪ್ರಸ್ತಾವನೆ ತಿರಸ್ಕಾರವಾಗಿತ್ತಾದರೂ ಮತ್ತೆ ಪ್ರಯತ್ನಿಸಿದ ಪರಿಣಾಮವಾಗಿ ಒಪ್ಪಿಗೆ ಪಡೆದಿದೆ. 2000ನೇ ಇಸವಿಯಿಂದ 202೨ರವರೆಗೆ 2೩ ವರ್ಷದಲ್ಲಿ ಕರ್ನಾಟಕ 19 ಬಾರಿ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದೆ. ಇದೀಗ 20ನೇ ಬಾರಿ ಕರ್ನಾಟಕ ಭಾಗವಹಿಸುತ್ತಿದೆ. ಒಟ್ಟು ನಾಲ್ಕು ಬಾರಿ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕೃತವಾಗಿದೆ. ಆ ಸಮಯದಲ್ಲಿ ಯಾವ ಸರ್ಕಾರಗಳು ಇದ್ದವು ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Republic Day: ಈ ಬಾರಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗೆ ಸಿಗಲಿದೆ ಸ್ವದೇಶಿ ಕುಶಾಲ ತೋಪು ಗೌರವ; ಇದು ಹೇಗೆ?
7. ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?
ಇತ್ತೀಚೆಗೆ ಕೆಲವು ದಿನಗಳಿಂದ ಮಾಹಿತಿ ತಂತ್ರಜ್ಞಾನ ಹಾಗೂ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರಂಗಳಲ್ಲಿ ChatGPT ಕುರಿತು ತುಂಬಾ ಮಾತುಕತೆಗಳು ಕೇಳಿಬರುತ್ತಿವೆ. ಇದು ನೀಡುವ ಮಾಹಿತಿ, ನಿಖರತೆ, ಚಾಟ್ ಮಾಡುವ ಸಾಮರ್ಥ್ಯ, ಇತ್ಯಾದಿಗಳ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಜತೆಜತೆಗೇ, ಮುಂದಿನ ದಿನಗಳಲ್ಲಿ ಇದು ಲಕ್ಷಾಂತರ ಮನುಷ್ಯರ ಉದ್ಯೋಗವನ್ನೂ ಕಿತ್ತುಕೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಏನಿದು ChatGPT? ಏನಿದರ ಕೆಲಸ, ಪ್ರಯೋಜನ? ಇದರ ಸಾಮರ್ಥ್ಯ, ಮಿತಿಯೇನು? ನಿಜಕ್ಕೂ ಆತಂಕವಿದೆಯಾ? ನೋಡೋಣ ಬನ್ನಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ವಿಸ್ತಾರ Explainer: ಬಿಬಿಸಿಯ ಗುಜರಾತ್ ದಂಗೆ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಕೇಂದ್ರ ಬಳಸಿದ ಅಧಿಕಾರ ಯಾವುದು? ಕಾನೂನು ಏನು ಹೇಳುತ್ತದೆ?
ದೇಶದ ಹಿತಾಸಕ್ತಿ ವಿರುದ್ಧ ಕಂಟೆಂಟ್ ಹೊಂದಿರುವ ಯುಟ್ಯೂಬ್(YouTube), ಟ್ವಿಟರ್ (Twitter) ಖಾತೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂಬಂಥ ಸುದ್ದಿಗಳನ್ನು ಆಗಾಗ ಕೇಳಿರುತ್ತೀರಿ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಲಭವಾಗಿ ದಮನ ಮಾಡಲು ಆಗುವುದಿಲ್ಲ. ಹಾಗಾದರೆ, ಯಾವ ಅಧಿಕಾರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಆನ್‌ಲೈನ್ ಕಂಟೆಂಟ್‌ಗಳ ಮೇಲೆ ನಿಷೇಧ ಹೇರುತ್ತದೆ ಎಂಬಂಥ ಪ್ರಶ್ನೆ ಸಹಜ. ಇದಕ್ಕೆ ಉತ್ತರ- ಕೇಂದ್ರ ಸರ್ಕಾರಕ್ಕೆ ತುರ್ತು ಪರಿಸ್ಥಿತಿಯ ಅಧಿಕಾರಗಳಿವೆ. ಈ ಅಧಿಕಾರಗಳನ್ನು ಬಳಸಿಕೊಂಡೇ ಅದು ನಿಷೇಧ ಹೇರುತ್ತದೆ. ಈ ಸಾಲಿಗೆ ಹೊಸ ಸೇರ್ಪಡೆ, 2002ರ ಗುಜರಾತ್ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ (BBC) ರೂಪಿಸಿರುವ ಡಾಕ್ಯುಮೆಂಟರಿ(BBC Documentary on Modi). ಈ ವಿಷಯ ಕುರಿತಾದ ವಿಸ್ತಾರ Explainer. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. IND VS NZ: ಶಿಖರ್ ಧವನ್ ದಾಖಲೆ ಮುರಿದ ಶುಭಮನ್ ಗಿಲ್
ಟೀಮ್ ಇಂಡಿಯಾದ ನ್ಯೂ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್ ಆಡಿದ ಪ್ರತಿ ಪಂದ್ಯದಲ್ಲಿಯೂ ದಾಖಲೆಗಳನ್ನು ನಿರ್ಮಿಸುತ್ತ ಮುನ್ನುಗುತ್ತಿದ್ದಾರೆ. ಇದೀಗ ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತನ್ನದೇ ದೇಶದ ಕ್ರಿಕೆಟಿಗ ಶಿಖರ್ ಧವನ್ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಇಂದೋರ್ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್(112) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದರು. ಇದೇ ವೇಳೆ ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಕಡಿಮೆ ಇನಿಂಗ್ಸ್ನಲ್ಲಿ 4 ಶತಕ ಬಾರಿಸಿದ ವಿಶ್ವದ ನಾಲ್ಕನೇ ಮತ್ತು ಭಾರತದ ಮೊದಲ ಆಟಗಾರನಾಗಿ ಮೂಡಿಬಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಅಮ್ಮ 2 ದಶಕಗಳಿಂದ ಬಳಸುತ್ತಿದ್ದ ಪುಟ್ಟ ಪ್ಲೇಟಿನ ಗುಟ್ಟು ತಿಳಿದ ಮಗ ಭಾವುಕ; ತಾಯಿ ತೀರಿ ಹೋದ ಬಳಿಕ ಸೋದರಿ ಹೇಳಿದ ಸತ್ಯ
20 ವರ್ಷಗಳಿಂದ ಅಮ್ಮ ಯಾಕೆ ಒಂದು ಚಿಕ್ಕ ಸ್ಟೀಲ್ ಪ್ಲೇಟ್ನಲ್ಲೇ ಊಟ ಮಾಡುತ್ತಿದ್ದಳು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ಮಗ ಆ ವಿಷಯವನ್ನೀಗ ತಮ್ಮ ಟ್ವಿಟರ್ (Twitter)ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಿಂಡಿ ತಿನ್ನಲು, ಊಟ ಮಾಡಲು ಅಮ್ಮ ಪ್ರತಿದಿನವೂ ಸಣ್ಣ ಪ್ಲೇಟ್ನ್ನೇ ತೆಗೆದುಕೊಂಡರೂ, ಆಕೆ ಆ ಬಟ್ಟಲನ್ನು ಬೇರೆ ಯಾರಿಗೂ ಬಳಸಲು ಬಿಡದೆ ಇದ್ದರೂ ಒಂದಿನನೂ ಆತ ಪ್ರಶ್ನೆ ಮಾಡಿರಲಿಲ್ಲ. ಅದೇನೂ ದೊಡ್ಡ ವಿಷಯ ಎಂದು ಅವನಿಗೆ ಅನ್ನಿಸಿರಲೂ ಇಲ್ಲ. ಆದರೆ ಅಮ್ಮ ತೀರಿಕೊಂಡ ಮೇಲೆ ಆ ಪ್ಲೇಟ್ನ ಗುಟ್ಟು ರಟ್ಟಾಗಿದೆ. ವಿಷಯ ತಿಳಿದ ಮಗ ಅತ್ಯಂತ ಭಾವನಾತ್ಮಕವಾಗಿ ಟ್ವೀಟ್ ಮಾಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Pathaan Movie : ಬಿಡುಗಡೆಗೂ ಮೊದಲೇ 58 ಕೋಟಿ ರೂ. ಬಾಚಿಕೊಂಡ ʼಪಠಾಣ್ʼ; 100 ದೇಶಗಳಲ್ಲಿ ಸಿನಿಮಾ ಬಿಡುಗಡೆ
- BharOS: ಏನಿದು ದೇಶಿ ಆಪರೇಟಿಂಗ್ ಸಿಸ್ಟಮ್ ಭರೋಸ್? ಪರೀಕ್ಷೆಯಲ್ಲಿ ಪಾಸಾಯ್ತಾ?
- Delhi Earthquake: ನೇಪಾಳದ ಗಡಿಯಲ್ಲಿ ಭೂಕಂಪ, ದಿಲ್ಲಿಯಲ್ಲಿ ನಡುಗಿದ ಭೂಮಿ
- Video: ಪೆಪ್ಸಿಗೆ ಐ ಲವ್ ಯೂ ಎಂದು ಮುತ್ತಿಟ್ಟ ರಾಕಿಂಗ್ ಸ್ಟಾರ್ ಯಶ್; ಪ್ರಸಿದ್ಧ ಪಾನೀಯ ಕಂಪನಿಗೆ ರಾಯಭಾರಿ