Site icon Vistara News

ವಿಸ್ತಾರ TOP 10 NEWS | ಮತದಾರರ ಹೆಸರು ಡಿಲೀಟ್‌ನಿಂದ ವಿಕ್ರಮ್‌ ರಾಕೆಟ್‌ ಉಡಾವಣೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news voter data theft allegation to jds pancharatna

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮತದಾರರ ಪಟ್ಟಿಯನ್ನು ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಶುಕ್ರವಾರವೂ ಮುಂದುವರಿದಿದೆ. ಅನೇಕ ಬಾರಿ ಮುಂದೂಡಿಕೆಯಾಗಿದ್ದ ʼಪಂಚರತ್ನʼ ಯಾತ್ರೆಗೆ ಜೆಡಿಎಸ್‌ ಚಾಲನೆ ನೀಡಿದೆ. ಭಾರತದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್‌ ಎಸ್‌ ಯಶಸ್ವಿಯಾಗಿ ಉಡಾವಣೆಯಾಗಿದೆ. ಒಂದು ವರ್ಷದ ಗಂಡು ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಬೆಂಗಳೂರಿನ ಅಪರಾಧಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Voter Data | 6 ಲಕ್ಷ ಮತದಾರರ ಹೆಸರು ಡಿಲೀಟ್‌ ಹಿಂದೆ ʼಚಿಲುಮೆʼ ಕೈವಾಡ?: ಮೂಡಿದ ಅನುಮಾನ
ಅಕ್ರಮವಾಗಿ ಮತದಾರರ ಗೌಪ್ಯ ಮಾಹಿತಿ (Voter Data) ಸಂಗ್ರಹ ಆರೋಪದಲ್ಲಿ ಈಗಾಗಲೆ ಚಿಲುಮೆ ಸಂಸ್ಥೆ ವಿರುದ್ಧ ದೂರು ದಾಖಲಾಗಿದ್ದು, ಇದೀಗ ಚುನಾವಣಾ ಆಯೋಗದಿಂದ ಇತ್ತೀಚೆಗೆ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಈ ಸಂಸ್ಥೆಯ ಹಸ್ತಕ್ಷೇಪ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.
ಇತ್ತೀಚೆಗಷ್ಟೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದು, ಅದರಲ್ಲಿ 3.07 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ, 57,517 ಮತದಾರರ ವಿವರಗಳನ್ನು ಬದಲಾವಣೆ ಮಾಡಲಾಗಿದೆ ಹಾಗೂ 6.69 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ಕಳೆದ ವಾರ ಚುನಾವಣಾ ಆಯೋಗ ಮಾಹಿತಿ ಬಿಡುಗಡೆ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. JDS Pancharatna | ಜೆಡಿಎಸ್‌ ಪಂಚರತ್ನ ರಥ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ದೇವೇಗೌಡ, ಕುಮಾರಸ್ವಾಮಿ
ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಪಂಚರತ್ನ ರಥಯಾತ್ರೆಯಲ್ಲಿ (JDS Pancharatna) ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭಾಗವಹಿಸಿ ಮಾತನಾಡಿದರು. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ಈ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿ ನೀವುಗಳೇ ಮನೆ ಮನೆಗೆ ಮುಟ್ಟಿಸಬೇಕು. ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಿಂದ ಕಾರ್ಯಕರ್ತರವರೆಗೂ ಪ್ರತಿಯೊಬ್ಬರಿಗೂ ಶಕ್ತಿಯಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಬಹುಮತ ಪಡೆದು ಸರ್ಕಾರ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು. . ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Love Jihad| ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪತಿಯಿಂದ ಚಿತ್ರಹಿಂಸೆ; ಪೊಲೀಸ್‌ ಮೊರೆ ಹೋದ ಹಿಂದು ಮಹಿಳೆ; ಮುಸ್ಲಿಂ ವ್ಯಕ್ತಿಯೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಮರಳಿ ಮನೆಗೆ
ಚಿತ್ರದುರ್ಗದಲ್ಲಿ, ಅನ್ಯ ಧರ್ಮಿಯರಾದ ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಮುಂದೆ ಪ್ರತಿನಿತ್ಯ ಪತ್ನಿಗೆ ಆತ ಚಿತ್ರಹಿಂಸೆ ಕೊಡಲು ಶುರು ಮಾಡಿದ. ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ಹಿಂದೆಯೂ ಲವ್‌ ಜಿಹಾದ್‌ (Love Jihad) ಸಂಚಿದೆಯೇ ಎಂಬ ಬಗ್ಗೆಯೂ ಈಗ ಚರ್ಚೆ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Love jihad | 7 ವರ್ಷದ ಮಗುವನ್ನೂ ತೊರೆದು ನಾಪತ್ತೆ ಆಗಿದ್ದ ಶಿಕ್ಷಕಿ ಮಂತ್ರಾಲಯದಲ್ಲಿ ಪತ್ತೆ, ಆಕೆ ಹೇಳಿದ್ದೇನು?

4. Teacher Recruitment 2022 | 15 ಸಾವಿರ ಶಿಕ್ಷಕರ ಹುದ್ದೆಗಳ ಪೈಕಿ 13,363 ಹುದ್ದೆಗಳಿಗಷ್ಟೇ ನೇಮಕ
15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 13,363 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Vikram S Rocket | ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್ ಉಡಾವಣೆ ಸಕ್ಸೆಸ್! ಹೊಸ ಇತಿಹಾಸ ಸೃಷ್ಟಿ
ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಉದ್ದೇಶದಂತೆ ಶುಕ್ರವಾರ (ನವೆಂಬರ್‌ 18) ದೇಶದ ಮೊದಲ ಖಾಸಗಿ ರಾಕೆಟ್‌ ಉಡಾವಣೆಯಾಯಿತು. ತೆಲಂಗಾಣ ಮೂಲದ ಸ್ಕೈರೂಟ್‌ ಏರೋಸ್ಪೇಸ್‌‌ (Skyroot Aerospace) ಎಂಬ ಕಂಪನಿಯು ರಾಕೆಟ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ವಿಕ್ರಮ್‌ ಎಸ್‌ (Vikram S Rocket) ಎಂದು ನಾಮಕರಣ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿತು. ಹಾಗೆಯೇ ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ)ಯ ಕೀರ್ತಿಗೆ ಮತ್ತೊಂದು ಗರಿ ಸೇರಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Election 2023 | ಸಿಎಂ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಪೈಪೋಟಿ; ಡಜನ್‌ ಮೀರಿದ ಅರ್ಜಿ !
ವಿಧಾನಸಭೆ ಚುನಾವಣೆಯಲ್ಲಿ ( Election 2023) ಕಾಂಗ್ರೆಸ್‌ ಟಿಕೆಟ್‌ ಪಡೆಯಬೇಕೆಂಬ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡುತ್ತಿದ್ದು, ಅಚ್ಚರಿಯೆಂದರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ಪರ್ಧಿಸಲು ನಾಮುಂದು ತಾಮುಂದು ಎನ್ನುವಂತೆ ಕಾಂಗ್ರೆಸಿಗರು ಮುಗಿಬೀಳುತ್ತಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಒಂದು ಡಜನ್‌ಗೂ ಹೆಚ್ಚು ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Bangla Murder | ಶ್ರದ್ಧಾ ಕೇಸ್‌ ರೀತಿಯೇ ಬಾಂಗ್ಲಾದಲ್ಲೂ ಹಿಂದು ಯುವತಿಯ ದೇಹ ತುಂಡರಿಸಿದ ಮುಸ್ಲಿಂ ಪ್ರೇಮಿ
ದೆಹಲಿಯಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಳ್ಕರ್‌ಳನ್ನು (Shraddha Murder Case) ಆಕೆಯ ಪ್ರಿಯತಮನೇ 35 ಭಾಗಗಳಾಗಿ ಕತ್ತರಿಸಿ, ರಾಷ್ಟ್ರ ರಾಜಧಾನಿಯ ಹಲವೆಡೆ ಆಕೆಯ ದೇಹದ ಭಾಗಗಳನ್ನು ಎಸೆದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲೂ (Bangla Murder) ಹಿಂದು ಯುವತಿಯೊಬ್ಬಳನ್ನು ಪ್ರಿಯತಮನೇ (Abu Bakr) ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಹತ್ಯೆಗೈದಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Unnatural sex and murder | 1 ವರ್ಷದ ಮಗುವಿನ ಮೇಲೆ ಸಲಿಂಗ ದೌರ್ಜನ್ಯ ನಡೆಸಿ ಕೊಂದ ಕಿರಾತಕನಿಗೆ ಮರಣದಂಡನೆ
ಬೆಂಗಳೂರಿನಲ್ಲಿ ಒಂದು ವರ್ಷದ ಪುಟ್ಟ ಮಗುವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೆ, ಮುಗ್ಧ ಮಗುವನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಟನೊಬ್ಬನಿಗೆ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IND VS NZ | ನ್ಯೂಜಿಲೆಂಡ್​ ಮತ್ತು ಭಾರತ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
ಪ್ರವಾಸಿ ಟೀಮ್​ ಇಂಡಿಯಾ ಮತ್ತು ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಟಾಸ್​ ವಿಳಂಬಗೊಂಡಿದೆ. ಮಳೆ ನಿಂತ ಬಳಿಕ ಪಂದ್ಯ ಆರಂಭಗೊಳ್ಳುವ ನಿರೀಕ್ಷೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Kantara Movie | 50 ದಿನ ಪೂರೈಸಿ ಮುನ್ನುಗ್ಗುತ್ತಿರುವ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಚಿತ್ರ ʻಕಾಂತಾರʼ
ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ಕಾಂತಾರ ಸಿನಿಮಾ (Kantara Movie) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆಪ್ಟೆಂಬರ್‌ 30ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತಾರ’, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Narendra Modi | ಕೆಲವು ರಾಷ್ಟ್ರಗಳಿಂದ ಉಗ್ರರಿಗೆ ಆರ್ಥಿಕ ನೆರವು! ಪಾಕ್ ಹೆಸರೆತ್ತದೆ ಮೋದಿ ಆಕ್ರೋಶ
  2. TRAI Rules | ಮೊಬೈಲ್‌ನಲ್ಲಿನ್ನು ಕಾಣಿಸಲಿದೆ ಕರೆ ಮಾಡಿದ ಅಪರಿಚಿತರ ಹೆಸರು! ಟ್ರೂ ಕಾಲರ್ ಅಂತ್ಯ ಸಮೀಪಿಸಿತೇ?
  3. Kaveri water | ದುಬಾರಿಯಾಗಲಿದೆ ಬೆಂಗಳೂರಿಗರಿಗೆ ನೀರು | ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ರಸ್ತಾವನೆ
  4. Namma Metro | ನಮ್ಮ ಮೆಟ್ರೊ 2025ರ ಜೂನ್‌ ವೇಳೆಗೆ 175 ಕಿ.ಮೀ.ಗೆ ವಿಸ್ತರಣೆ
Exit mobile version