1.ಮೊದಲ ದಿನವೇ ಪಲ್ಟಿ ಹೊಡೆದು ಅನ್ನಭಾಗ್ಯ- ಅಕ್ಕಿಯೂ ಸಿಗಲಿಲ್ಲ, ಹಣವನ್ನೂ ಕೊಡಲಿಲ್ಲ
ರಾಜ್ಯದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಅನ್ನ ಭಾಗ್ಯ (Anna Bhagya scheme) ಜುಲೈ ಒಂದರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ. ಹಾಗಂತ, ತಕ್ಷಣವೇ ಒಂದನೇ ತಾರೀಖಿಗೇ ಈಗ ನಿಗದಿಯಾಗಿರುವ ಐದು ಕೆಜಿ ಅಕ್ಕಿ ಸಿಗುವುದಿಲ್ಲ. ಜತೆಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಹೆಚ್ಚುವರಿ ಅಕ್ಕಿ ಬದಲು ನೀಡಲು ಉದ್ದೇಶಿಸಿರುವ ಹಣವೂ ಜಮೆಯಾಗುವುದಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. 3ನೇ ಗ್ಯಾರಂಟಿ ಗೃಹಜ್ಯೋತಿಗೆ ಚಾಲನೆ- ಉಚಿತ ವಿದ್ಯುತ್‌ಗೆ ಬೇಗ ಅರ್ಜಿ ಹಾಕಿ ಎಂದ ಜಾರ್ಜ್
ಜೂನ್ ತಿಂಗಳ ಕರೆಂಟ್ ಬಿಲ್ ಅನ್ನು ಎಲ್ಲರೂ ಕಟ್ಟಬೇಕು. ಆದರೆ, ಜುಲೈ 1ರಿಂದ ಬಳಕೆ ಮಾಡುವ ವಿದ್ಯುತ್ ನಿಗದಿತ ನೀತಿಯಂತೆ ಬಳಸಲ್ಪಟ್ಟಿದ್ದರೆ ಅದು ಉಚಿತ. ಸದ್ಯಕ್ಕೆ ಗೃಹ ಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ಡೆಡ್‌ಲೈನ್ ನೀಡಿಲ್ಲ. ಆದರೆ, ಎಲ್ಲವನ್ನೂ ನೋಡಿಕೊಂಡು ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡುತ್ತೇವೆ. ಆಗಲೂ ಅರ್ಜಿ ಸಲ್ಲಿಸದಿದ್ದರೆ ಅಂಥವರಿಗೆ ಯೋಜನೆಯನ್ನು ಸ್ಟಾಪ್ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕರುನಾಡಿಗೆ ಮುಂಗಾರು ಆಘಾತ: ಜುಲೈನಲ್ಲೂ ಮಳೆ ಕೊರತೆ ನಿಶ್ಚಿತ, ಜಲಾಶಯಗಳು ಖಾಲಿ ಖಾಲಿ
ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಪೂರ್ತಿ ಆವರಿಸಿತು ಎನ್ನುವಾಗಲೇ ಇದೀಗ ನಿರಾಸೆ ಮೂಡಿಸಿದೆ. ವಾಡಿಕೆಯ ಮಳೆಯಾಗುತ್ತದೆ ಎಂದು ಈ ಹಿಂದೆ ತಜ್ಞರು ಅಂದಾಜಿಸಿದ್ದರೂ, ಆದರೆ ಮಳೆಗಾಲದ ಮೊದಲ ತಿಂಗಳು ಜೂನ್‌ನಲ್ಲಿ ವಾಡಿಕೆಯ ಮಳೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮುಂಗಾರು ಮಂಕಾಗಿದ್ದು, ಜು. 2ರಂದು ಹತ್ತು ಜಿಲ್ಲೆಗಳಿಗೆ ಮಾತ್ರ ಮಳೆ ಅಲರ್ಟ್ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಯಾರಾಗುತ್ತಾರೆ ವಿಧಾನಸಭಾ ವಿಪಕ್ಷ ನಾಯಕ; ಬೊಮ್ಮಾಯಿಗೇ ಒಲಿಯುತ್ತಾ ಲಕ್?
ರಾಜ್ಯದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿ ಮೇ 20ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಟ್ಟಾರೆ 50 ದಿನಗಳೇ ಕಳೆದರೂ ಪ್ರಧಾನ ಪ್ರತಿಪಕ್ಷವಾಗಿರುವ ಬಿಜೆಪಿ ವಿಧಾನಸಭೆಯಲ್ಲಿ ತನ್ನ ನಾಯಕ ಯಾರಾಗಬೇಕು ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಜುಲೈ 3ರಂದು ವಿಧಾನಮಂಡಲ ಅಧಿವೇಶನ ಆರಂಭವಾಗುವುದರಿಂದ ಭಾನುವಾರವೇ ಆಯ್ಕೆ ಆಗಬೇಕಾಗಿದೆ. ಬಸವರಾಜ ಬೊಮ್ಮಾಯಿ ಫ್ರಂಟ್ ರನ್ನರ್ ಆಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: BSYಗೆ ವಯಸ್ಸಾಯ್ತು ಅಂತ ಕಿತ್ತಾಕಿದ್ರಲ್ವಾ, ಈಗ ರಾಜ್ಯ ಸುತ್ತಲು ಬೇಕಾ; ಮತ್ತೆ ರೇಣುಕಾ ಗುಡುಗು
5. ಜನಾಕ್ರೋಶದ ನಡುವೆಯೇ ದಶಪಥದ 2ನೇ ಟೋಲ್ ಕಾರ್ಯಾರಂಭ, ಚಡ್ಡಿ ಪ್ರತಿಭಟನೆ
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಜುಲೈ 1ರಿಂದ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ನಲ್ಲೂ ಹಣ ಸಂಗ್ರಹ ಕಾರ್ಯ ಆರಂಭವಾಗಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಜನರು ಚಡ್ಡಿ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಬೆಳ್ಳಂಬೆಳಗ್ಗೆ ಮಹಾಪಘಾತ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 26 ಪ್ರಯಾಣಿಕರು ಸಜೀವ ದಹನ
ಬುಲ್ಧಾನ/ಹೊಸದಿಲ್ಲಿ: ಶನಿವಾರ ಮುಂಜಾನೆ ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಭೀಕರ ಅಗ್ನಿಕಾಂಡದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 2೬ ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ಕನಿಷ್ಠ ಎಂಟು ಜನ ಗಾಯಗೊಂಡಿದ್ದಾರೆ.
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಜುಲೈ 20ರಿಂದ ಸಂಸತ್‌ನ ಮುಂಗಾರು ಅಧಿವೇಶನ- ನೂತನ ಸಂಸತ್ ಭವನದಲ್ಲಿ ಪ್ರಥಮ ಸಂಭ್ರಮ
ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ಜುಲೈ 20ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ಅಧಿವೇಶನದ ಒಂದು ಭಾಗ ಹೊಸ ಸಂಸತ್ ಭವನದಲ್ಲಿ ನಡೆಯಲಿರುವುದು ವಿಶೇಷ. ಪೂರ್ಣ ವರದಿಗೆ ಕ್ಲಿಕ್ ಮಾಡಿ
8. Tomato Challenge: ‘ಟೊಮ್ಯಾಟೊ ಬೆಲೆ ಇಳಿಸಲು ಐಡಿಯಾ ಕೊಡಿ’ ಅಭಿಯಾನ; ನೀವೂ ಭಾಗವಹಿಸಿ
ದೇಶದ ಬಹುತೇಕ ಭಾಗಗಳಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಹೆಚ್ಚಿನ ಭಾಗಗಳಲ್ಲಿ ಒಂದು ಕೆ.ಜಿ ಟೊಮ್ಯಾಟೊ ಬೆಲೆ ಸೇಬು ಹಣ್ಣಗಿಂತ ಜಾಸ್ತಿ ಅಂದರೆ, 100 ರೂಪಾಯಿ ದಾಟಿದೆ. ಇದರಿಂದ ಜನ ಟೊಮ್ಯಾಟೊ ಖರೀದಿಸಲು ಆಗದೆ, ಅದನ್ನು ಬಿಡಲೂ ಆಗದೆ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಟೊಮ್ಯಾಟೊ ಬೆಲೆ ಇಳಿಕೆ ಮಾಡಲು ಜನರಿಂದ ಕ್ರಿಯೇಟಿವ್ ಉಪಾಯಗಳನ್ನು ಕೊಡಿ ಎಂದು ಅಭಿಯಾನ ಆರಂಭಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ವಿಸ್ತಾರ ಅಂಕಣ: ರಾಜಕೀಯ ಕಲಿಸಲು ಶಾಲೆಯಲ್ಲ, ಬೇಕಿರುವುದು ಶಾಲಾ ದಿನಗಳಿಂದಲೇ ರಾಜಕೀಯ
ವಿದ್ಯಾರ್ಥಿ ನಾಯಕತ್ವ, ಯುವ ನಾಯಕತ್ವ ಹಾಗೂ ಸಾಮಾಜಿಕ ನಾಯಕತ್ವವನ್ನು ಮೆಟ್ಟಿ ನಿಂತು, ರಾಜಕಾರಣಕ್ಕೆ ಯೋಗ್ಯರು ಆಗಮಿಸುತ್ತಿಲ್ಲ ಎಂದು ಆಳುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿ ಚುನಾವಣೆ, ಸಾಮಾಜಿಕ ಆಂದೋಲನಗಳನ್ನು ಹತ್ತಿಕ್ಕುವ ಬದಲು ಪ್ರಜಾತಾಂತ್ರಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಾದ, ಚರ್ಚೆಗಳನ್ನು ನಡೆಸುವುದನ್ನು ರೂಢಿಸಿಕೊಂಡರೆ ಕರ್ನಾಟಕದಲ್ಲಿ ನಾಯಕತ್ವಕ್ಕೆ ಕೊರತೆ ಆಗುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಕ್ಲಿಕ್ ಮಾಡಿ
10. 200 ಕಿಮೀ ವೇಗದಲ್ಲಿ ಕಾರು ಓಡಿಸಬಲ್ಲ ಅಜಿತ್ ರೈ; ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ರೆಡಿಯಾಗಿದ್ದ!
ಲೋಕಾಯುಕ್ತ ಪೊಲೀಸ್ ಕಸ್ಟಡಿಯಲ್ಲಿರುವ ಕೆ.ಆರ್ ಪುರದ ಈ ಹಿಂದಿನ ತಹಸೀಲ್ದಾರ್ ಅಜಿತ್ ರೈ ಅಕ್ರಮ ಆಸ್ತಿ ಬಗೆದಷ್ಟೂ ಮುಗಿಯುತ್ತಿಲ್ಲ. ಅದರ ಜತೆಗೆ ಆತನ ಶೋಕಿಗಳಿಗೂ ಬರವಿಲ್ಲ. ಕಾರುಗಳನ್ನು 200 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಓಡಿಸುತ್ತಿದ್ದ ಆತನಿಗೆ ಫಾರ್ಮುಲಾ 1 ರೇಸ್ (Formula 1 race) ಮೇಲೂ ಕ್ರೇಜ್ ಇತ್ತು. ರಾಜ್ಯದಲ್ಲೊಂದು ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲೂ ರೆಡಿಯಾಗಿದ್ದ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಅಜಿತ್ ರೈಯ 1368 ನಂಬರ್ ರಹಸ್ಯ ಬಯಲು; ಅವನ ಅಕ್ರಮಗಳ ಹಿಂದಿರುವ ಶಕ್ತಿ ಯಾವುದು?