Site icon Vistara News

ವಿಸ್ತಾರ TOP 10 NEWS: ಯಾಸೀನ್‌ ಭಟ್ಕಳ್‌ ʼಸ್ಫೋಟಕʼ ಸಂಚಿನಿಂದ, ರಾಹುಲ್‌ ಗಾಂಧಿ ಜೈಲು ಶಿಕ್ಷೆಗೆ ತಡೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news yasin bhatkal conspiracy to relief for Rahul gandhi and more news

#image_title

1. Yasin Bhatkal: ಪರಮಾಣು ಬಾಂಬ್‌‌ಗಿಂತ ಮುಂಚೆ ಸೂರತ್‌ ಮುಸ್ಲಿಮರ ಸ್ಥಳಾಂತರಕ್ಕೆ ಮುಂದಾಗಿದ್ದ ಉಗ್ರ ಯಾಸೀನ್ ಭಟ್ಕಳ್!
ಇಂಡಿಯನ್ ಮುಜಾಹಿದ್ದೀನ್ (Indian Mujahideen) ಉಗ್ರ ಯಾಸೀನ್ ಭಟ್ಕಳ್ (Yasin Bhatkal) ಮತ್ತು ಇತರ 10 ಜನರ ವಿರುದ್ಧ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್, ಯುಎಪಿಎ (UAPA) ಅಡಿ ಭಾರತದ ವಿರುದ್ಧ ಯುದ್ಧ ಸಾರಲು ಭಯೋತ್ಪಾದಕ ಸಂಚು ರೂಪಿಸಿ ಮತ್ತು ಕಾರ್ಯಗತಗೊಳಿಸಿದ ಆರೋಪಗಳನ್ನು ಹೊರಿಸಿದೆ. ಯಾಸೀನ್ ಮತ್ತು ಆತನ ಸಹಚರರು, ಪರಮಾಣು ಬಾಂಬ್ ಪ್ಲಾಂಟ್ ಮಾಡುವುದಕ್ಕಿಂತಲೂ ಮುಂಚೆ ಸೂರತ್‌ನಿಂದ ಮುಸ್ಲಿಮರನ್ನು ಸ್ಥಳಾಂತರ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. BJP Karnataka: ಚುನಾವಣೆಗೆ ಮುನ್ನ ಇನ್ನೂ 20 ಬಾರಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ: ನಳಿನ್‌ ಕುಮಾರ್ ಕಟೀಲ್‌
ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ 20 ಬಾರಿ ಬರುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ರಾಜ್ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಕಟೀಲ್‌ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Elections : ಈಶ್ವರಪ್ಪನವ್ರೇ ಬಿಜೆಪಿ ತಾಳಿ ಬಿಚ್ಚಿಟ್ಟು ಬರ್ತೀನಿ, ತಾಕತ್ತಿದ್ದರೆ ಎದುರಿಸಿ: ಆಯನೂರು ಸವಾಲು
ಶಿವಮೊಗ್ಗ ಬಿಜೆಪಿಯೊಳಗಿನ ಭಿನ್ನಮತ ಈಗ ಬಟಾಬಯಲಾಗಿದೆ. ಒಂದು ಕಾಲದಲ್ಲಿ ಆಪ್ತರಾಗಿದ್ದು, ಈಗ ಶುದ್ಧ ಹಾವು-ಮುಂಗುಸಿಗಳಂತೆ ಆಡುತ್ತಿರುವ ಆಯನೂರು ಮಂಜುನಾಥ್‌ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ರಾಜಕೀಯ ವೈಷಮ್ಯ ತಾರಕಕ್ಕೇರಿ ಇದೀಗ ಅದು ಚುನಾವಣಾ ಕಣ ಪ್ರವೇಶಕ್ಕೆ ಹಾದಿ ಮಾಡಿಕೊಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇಲ್ಲಿ ಕ್ಲಿಕ್‌ ಮಾಡಿ, ಕರ್ನಾಟಕ ಎಲೆಕ್ಷನ್‌ ಕುರಿತ ಎಲ್ಲ ಸುದ್ದಿಗಳನ್ನೂ ಓದಿ.

4. Karnataka Congress: ಕಾಂಗ್ರೆಸ್‌ ಸಾಗರಕ್ಕೆ ನದಿಯಂತೆ ನಾಯಕರು ಸೇರುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌ ವರ್ಣನೆ
ಕಾಂಗ್ರೆಸ್‌ ಎಂಬ ಸಾಗರಕ್ಕೆ ನದಿಗಳ ರೀತಿಯಲ್ಲಿ ವಿವಿಧ ಪಕ್ಷಗಳ ನಾಯಕರು ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ (Karnataka Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಎನ್‌. ವೈ. ಗೋಪಾಲಕೃಷ್ಣ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಶಿವಕುಮಾರ್‌ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Narendra Modi: ಸಿಬಿಐ ಸತ್ಯ, ನ್ಯಾಯದ ಬ್ರ್ಯಾಂಡ್‌; ನರೇಂದ್ರ ಮೋದಿ ಬಣ್ಣನೆ
ಕೇಂದ್ರೀಯ ತನಿಖಾ ಸಂಸ್ಥೆ (CBI) ಸೇರಿ ಹಲವು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಿಬಿಐನ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಿಬಿಐ ಕಾರ್ಯಕ್ಷಮತೆ, ದಕ್ಷತೆಯನ್ನು ಕೊಂಡಾಡಿದ್ದಾರೆ. “ಸಿಬಿಐ ದೇಶದ ನ್ಯಾಯ ಹಾಗೂ ಸತ್ಯದ ಬ್ರ್ಯಾಂಡ್‌ ಆಗಿದೆ” ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. 2019ರ ಮಾನಹಾನಿ ಕೇಸ್: ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ, ಸಂಸತ್ ಸದಸ್ಯತ್ವ ಮರಳುತ್ತಾ?
2019ರ ಮಾನಹಾನಿ ಪ್ರಕರಣ ಸಂಬಂಧ ನೀಡಲಾಗಿದ್ದ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೂರತ್‌ನ ಸೆಷನ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಕಳ ಹಂತದ ನ್ಯಾಯಾಲಯವು ನೀಡಿದ್ದ 2 ವರ್ಷದ ಶಿಕ್ಷೆಗೆ ಸೆಷನ್ ಕೋರ್ಟ್ ತಡೆ ನೀಡಿದೆ. ಅಲ್ಲದೇ, ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ನಿಗದಿ ಪಡಿಸಿದೆ. ಶಿಕ್ಷೆಗೆ ತಡೆ ನೀಡಿದ್ದರಿಂದ ಕೇರಳದ ವಯನಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹತೆ ರದ್ದಾಗಲಿದೆಯೇ ಎಂಬ ಚರ್ಚೆಗಳು ನಡೆದಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ICC World Cup 2023: ಐಸಿಸಿ ಏಕದಿನ ವಿಶ್ವಕಪ್‌ ಲೋಗೋ ಅನಾವರಣ
ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯ(ICC World Cup 2023) ಲೋಗೋವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬಿಡುಗಡೆಗೊಳಿಸಿದೆ. ಈ ಲೋಗೋ ‘ನವರಸ’ದಿಂದ ಕೂಡಿದ್ದು, ಅಭಿಮಾನಿಗಳು ವಿಶ್ವಕಪ್‌ ಪಂದ್ಯಗಳ ವೇಳೆ ಎಲ್ಲ 9 ರೀತಿಯ ಭಾವನೆಗಳನ್ನು ಅನುಭವಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಂತೋಷ, ಶಕ್ತಿ, ದುಖಃ, ಗೌರವ, ಹೆಮ್ಮೆ, ಶೌರ್ಯ, ವೈಭವ, ವಿಸ್ಮಯ, ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುವ ಬಣ್ಣಗಳೊಂದಿಗೆ ಈ ಲಾಂಛನವನ್ನು ಸಿದ್ಧಪಡಿಸಲಾಗಿದೆ. 10 ತಂಡಗಳ ಟೂರ್ನಿಗೆ ಈಗಾಗಲೇ 7 ತಂಡಗಳು ಅರ್ಹತೆ ಪಡೆದಿದೆ. ಸೂಪರ್‌ ಲೀಗ್‌ ಮುಕ್ತಾಯದ ಬಳಿಕ ಇನ್ನೊಂದು ತಂಡಕ್ಕೆ ನೇರ ಅರ್ಹತೆ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Panchamasali Reservation: ಕುಡಿದ ಮತ್ತಿನಲ್ಲಿ ಸ್ವಾಮೀಜಿಗೆ ಕರೆ ಮಾಡುವ ಕಾಂಗ್ರೆಸ್‌ ನಾಯಕರು: ಅರವಿಂದ ಬೆಲ್ಲದ್‌ ಆರೋಪ
ಪಂಚಮಸಾಲಿ ಮೀಸಲಾತಿ ಕುರಿತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯಂಜಯ ಸ್ವಾಮೀಜಿಯವರಿಗೆ ಕೆಲ ಕಾಂಗ್ರೆಸ್‌ ನಾಯಕರು ಕುಡಿದ ಸ್ಥಿತಿಯಲ್ಲಿ ಕರೆ ಮಾಡಿ ಅಗೌರವ ತರುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. McDonald’s CEO salary : ಹುದ್ದೆ ಕಡಿತಕ್ಕೆ ಸಜ್ಜಾಗಿರುವ ಮೆಕ್‌ಡೊನಾಲ್ಡ್ಸ್‌ ಸಿಇಒಗೆ ಉದ್ಯೋಗಿಗಿಂತ 1,189 ಪಟ್ಟು ಹೆಚ್ಚು ಸಂಬಳ
ಮೆಕ್‌ ಡೊನಾಲ್ಡ್ಸ್‌ (McDonaldʼs) ಸಿಇಒ ಕೆಂಪ್‌ಜಿನ್‌ಸ್ಕಿ (Chris Kempczinski ) ಅವರು 2020ರಲ್ಲಿ‌ ಕಂಪನಿ ತನ್ನ ಸೇಲ್ಸ್‌ ಟಾರ್ಗೆಟ್‌ ಅನ್ನು ಮುಟ್ಟುವಲ್ಲಿ ವಿಫಲವಾಗಿದ್ದರೂ, 10.8 ದಶಲಕ್ಷ ಡಾಲರ್‌ಗೂ ಹೆಚ್ಚು (ಅಂದಾಜು 88 ಕೋಟಿ ರೂ.) ವೇತನ ಪ್ಯಾಕೇಜ್ ಪಡೆದಿದ್ದಾರೆ. 2023ರಲ್ಲಿ ಅಮೆರಿಕದಲ್ಲಿ ಕಂಪನಿ ತನ್ನ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಸಾಮೂಹಿಕ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಹೀಗಿದ್ದರೂ ಅದರ ಸಿಇಒಗೆ ಸಾಮಾನ್ಯ ಉದ್ಯೋಗಿಗಿಂತ ಬರೋಬ್ಬರಿ 1,189 ಪಟ್ಟು ಹೆಚ್ಚು ವೇತನ ಇದೆ ಎಂದು ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Gold rate : ಬಂಗಾರದ ದರದದಲ್ಲಿ 330 ರೂ. ಇಳಿಕೆ, ಬೆಳ್ಳಿ 600 ರೂ. ಅಗ್ಗ
ಏರುಗತಿಯಲ್ಲಿರುವ ಬಂಗಾರದ ದರದಲ್ಲಿ ಸೋಮವಾರ 330 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ 330 ರೂ. ತಗ್ಗಿದ್ದು, 59,720 ರೂ.ಗೆ (Gold rate) ತಗ್ಗಿದೆ. 22 ಕ್ಯಾರಟ್‌ ಬಂಗಾರದ ದರದಲ್ಲಿ 300 ರೂ. ತಗ್ಗಿದ್ದು, 54,750 ರೂ.ಗೆ ಇಳಿದಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 600 ರೂ. ಇಳಿಕೆಯಾಗಿದ್ದು, 77,100 ರೂ.ನಷ್ಟಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Weather Report: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮಂಗಳೂರು, ಚಿತ್ರದುರ್ಗದಲ್ಲಿ ಏರಲಿದೆ ಬಿಸಿಲ ತಾಪಮಾನ
  2. Banking service down : ಸರ್ವರ್‌ ಸಮಸ್ಯೆಯಿಂದ ನೆಟ್ ಬ್ಯಾಂಕಿಂಗ್‌ ಸೇವೆಗಳಿಗೆ ಅಡಚಣೆ, ಗ್ರಾಹಕರ ಪರದಾಟ
  3. Maneka Gandhi: ಕತ್ತೆ ಹಾಲಿನ ಸಾಬೂನು ಬಳಸಿದರೆ ಸ್ತ್ರೀಯರ ಸೌಂದರ್ಯವರ್ಧನೆ; ಮನೇಕಾ ಗಾಂಧಿ ಹೇಳಿಕೆ
Exit mobile version