Site icon Vistara News

ವಿಸ್ತಾರ TOP 10 NEWS: ಬಿಜೆಪಿ ಸರ್ಕಾರಕ್ಕೆ ರಾಜ್ಯಪಾಲರ ಶಹಬ್ಬಾಸ್‌ಗಿರಿಯಿಂದ, ಶತಕ ದಾಖಲೆ ಬರೆದ ರೋಹಿತ್‌ವರೆಗಿನ ಪ್ರಮುಖ ಸುದ್ದಿಗಳಿವು

ವಿಸ್ತಾರ TOP 10 NEWS

#image_title

1. Assembly Session: ಗೋಹತ್ಯೆ ನಿಷೇಧ, ಪುಣ್ಯಕೋಟಿ ಯೋಜನೆಗೆ ಶಹಬ್ಬಾಸ್‌ಗಿರಿ: ಮೋದಿ ಮಾರ್ಗದಲ್ಲಿ ರಾಜ್ಯ ಸಾಗಲಿದೆ ಎಂದ ರಾಜ್ಯಪಾಲ ಗೆಹ್ಲೊಟ್‌
ನಗರಾಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ (ಎಲ್ಲರನ್ನೂ ಒಳಗೊಳ್ಳುವ) ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದಲ್ಲಿ ಕರ್ನಾಟಕ ಸರ್ಕಾರ ಸರ್ಕಾರ ಸಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌ ಹೇಳಿದ್ದಾರೆ. ಶುಕ್ರವಾರದಿಂದ ಆರಂಭವಾದ ವಿಧಾನ ಮಂಡಲ ಅಧಿವೇಶನದಲ್ಲಿ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Adani Group Row: ಹೂಡಿಕೆದಾರ ರಕ್ಷಣೆಗೆ ತಜ್ಞರ ಸಮಿತಿಗೆ ಸಲಹೆ ಮಾಡಿದ ಸುಪ್ರೀಂ ಕೋರ್ಟ್, ಸರ್ಕಾರ ಒಪ್ಪುವುದೇ?
ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡವುದಕ್ಕಾಗಿ, ಅದಾನಿ ಗ್ರೂಪ್ ವಿರುದ್ಧ (Adani Group Row) ಕೇಳಿ ಬಂದಿರುವ ವಂಚನೆಯ ಆರೋಪಗಳನ್ನು ಪರೀಕ್ಷಿಸಲು ನ್ಯಾಯಮೂರ್ತಿ ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಸಲಹೆ ನೀಡಿದೆ. ಅದಾನಿ ಗ್ರೂಪ್‌ ಷೇರುಗಳು ದಿಢೀರ್ ಕುಸಿತದಿಂದಾಗಿ ಹೂಡಿಕೆದಾರರ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ ರಾಜಕೀಯ ಮೇಲಾಟಕ್ಕೂ ಇದು ಪ್ರೇರಣೆ ನೀಡಿದೆ. ಕೋರ್ಟ್‌ನ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪುವುದೇ ಕಾದು ನೋಡಬೇಕು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ
ರಾಜ್ಯ ಸರ್ಕಾರಿ ಕಚೇರಿಗಳ ಕೆಲಸ ಅವಧಿಯನ್ನು ಈಗಿರುವ ಏಳುವರೆ ಗಂಟೆ ಬದಲಾಗಿ ಎಂಟುವರೆ ಗಂಟೆಗೆ ವಿಸ್ತರಿಸಿ, ತಿಂಗಳ ಮೊದಲ ಮತ್ತು ಕೊನೆಯ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೇಡಿಕೆ ಮುಂದಿಟ್ಟಿದೆ. ಈಗಾಗಲೇ ವಾರದ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಸಂಘವು ವಾರಕ್ಕೆ ಐದು ದಿನದ ಕೆಲಸಕ್ಕೆ ಬೇಡಿಕೆ ಇಟ್ಟಂತಾಗಿದೆ. ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th pay commission) ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನೀಡಲಾದ ಉತ್ತರದಲ್ಲಿ ಈ ಬೇಡಿಕೆಯನ್ನು ಮುಂದಿಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಭಾರತದಲ್ಲಿ ಬಿಬಿಸಿ ನಿಷೇಧ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್
ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(BBC) ಮಾಧ್ಯಮ ಸಂಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಈ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಕಾರಣ ನೀಡಿ, ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. 2002 ಗುಜರಾತ್ ದಂಗೆಯ ಕುರಿತು ಬಿಬಿಸಿ ಎರಡು ಭಾಗಗಳಲ್ಲಿ ಸಾಕ್ಷ್ಯ ಚಿತ್ರವನ್ನು ರೂಪಿಸಿತ್ತು. ಈ ಡ್ಯಾಕುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಋಣಾತ್ಮಕವಾಗಿ ತೋರಿಸಲಾಗಿದೆ ಎಂದು ಆರೋಪಿಸಿ, ಭಾರತದಲ್ಲಿ ಬಿಬಿಸಿ ಕಾರ್ಯಾಚರಣೆಯ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ದಾಖಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. R. Ashok: ಮಂಡ್ಯ ಜನರಿಗೆ ಸಾಷ್ಟಾಂಗ ನಮಸ್ಕಾರ: ಅಡ್ಜಸ್ಟ್‌ಮೆಂಟ್‌ ಆರೋಪಕ್ಕೆ ಉಸ್ತುವಾರಿಯಿಂದ ಹಿಂದೆ ಸರಿದ ಆರ್.‌ ಅಶೋಕ್‌
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಮಂಡ್ಯ ಜಿಲ್ಲಾ ರಾಜಕಾರಣವನ್ನು ನಿರ್ವಹಣೆ ಮಾಡಲು ನೇಮಕ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕಂದಾಯ ಸಚಿವ ಆರ್‌. ಅಶೋಕ್‌ ಪತ್ರ ಬರೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅಂಗೀಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rohit Sharma: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ
ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ನಾಯಕ ರೋಹಿತ್​ ಶರ್ಮಾ(Rohit Sharma) ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ನಾಗ್ಪುರದ ವಿದರ್ಭ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶತಕ ಬಾರಿಸಿದ ರೋಹಿತ್​ ಶರ್ಮಾ, ನಾಯಕನಾಗಿ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಮೊದಲ ಮತ್ತು ಏಕೈಕ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Kantara Movie: ಕಾಂತಾರ ತಂಡಕ್ಕೆ ಸಿಹಿ ಸುದ್ದಿ: ಕೇರಳ‌ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ʼವರಾಹ ರೂಪಂʼ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ʼಕಾಂತಾರʼ ಚಿತ್ರದ (Kantara Movie) ನಿರ್ದೇಶಕ ರಿಷಬ್‌ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್‌ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್‌ ಫೆ.8ರಂದು ನಿರೀಕ್ಷಣಾ ಜಾಮೀನು ನೀಡಿತ್ತು. ಈ ಜಾಮೀನು ನೀಡುವಾಗ ಕೇರಳ ಹೈಕೋರ್ಟ್, ಮಧ್ಯಂತರ ಅಥವಾ ಅಂತಿಮ ಆದೇಶ ನೀಡುವ ತನಕ ವರಾಹರೂಪಂ ಹಾಡನ್ನು ಬಳಸಬಾರದು ಎಂಬ ಷರತ್ತಿಗೆ ಈಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Lithium Deposit: ಮೊದಲ ಬಾರಿಗೆ ಭಾರತದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ! ಇದರಿಂದ ಏನು ಲಾಭ?
ಇದೇ ಮೊದಲ ಬಾರಿಗೆ ದೇಶದಲ್ಲಿ ಲಿಥಿಯಮ್ ನಿಕ್ಷೇಪ (Lithium Deposit) ಪತ್ತೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮನಾ ಪ್ರದೇಶದಲ್ಲಿ 59 ಲಕ್ಷ ಟನ್ ಲಿಥಿಯಮ್ ಇರುವ ನಿಕ್ಷೇಪ ದೊರೆತಿದೆ ಎಂದು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ (Geological Survey of India) ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Budget session : ಹೊಸ ತೆರಿಗೆ ಪದ್ಧತಿಯಿಂದ ಜನತೆಗೆ ಹೆಚ್ಚಿನ ಉಳಿತಾಯ ಸಾಧ್ಯ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜನತೆಗೆ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ನೂತನ ಆದಾಯ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ. ವಾರ್ಷಿಕ 7 ಲಕ್ಷ ರೂ. ಆದಾಯದ ತನಕ ರಿಬೇಟ್‌ ಒದಗಿಸುತ್ತಿರುವುದರಿಂದ ಆಕರ್ಷಕವಾಗಿದೆ. ಇದರಿಂದ ಜನರ ಕೈಯಲ್ಲಿ ಖರ್ಚುವೆಚ್ಚಗಳಿಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. (Budget session) ಲೋಕಸಭೆಯಲ್ಲಿ ಬಜೆಟ್‌ ಅಧಿವೇಶನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿತ್ತೀಯ ಶಿಸ್ತಿನ ಚೌಕಟ್ಟಿನೊಳಗೆಯೇ ಬಜೆಟ್‌ ಅನ್ನುದ ರೂಪಿಸಲಾಗಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Rajasthan Budget: ವಿಧಾನಸಭೆಯಲ್ಲಿ ಹಳೇ ಬಜೆಟ್​ ಓದಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​!
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಇಂದು ವಿಧಾನಸಭೆಯಲ್ಲಿ ಮಹಾನ್​ ಎಡವಟ್ಟು ಮಾಡಿಕೊಂಡಿದ್ದಾರೆ. ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್​ ಮಂಡನೆ (Rajasthan Budget) ಇತ್ತು. ಸದಸ್ಯರೆಲ್ಲ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಸಿಎಂ ಅಶೋಕ್​ ಗೆಹ್ಲೋಟ್ (Ashok Gehlot)​ ಅವರು ಕಳೆದ ವರ್ಷದ ಬಜೆಟ್​​ನ್ನೇ ಓದಲು ಪ್ರಾರಂಭಿಸಿ ಎಡವಟ್ಟು ಮಾಡಿಕೊಂಡರು. ಸುಮಾರು ಏಳು ನಿಮಿಷಗಳ ಕಾಲ ಅವರು ಹಳೇ ಬಜೆಟ್​​ನ್ನೇ ಓದಿದರು. ಅಷ್ಟಾದ ಮೇಲೆ ಕೂಡ, ತಾವು ಓದುತ್ತಿರುವುದು ಹಳೇ ಬಜೆಟ್​ ಎಂದು ಅವರಿಗೆ ಅರ್ಥವಾಗಲಿಲ್ಲ. ಅಲ್ಲಿದ್ದ ಸರ್ಕಾರದ ಮುಖ್ಯ ಸಚೇತಕ ಎಚ್ಚರಿಸಿದ್ದಾರೆ. ಬಳಿಕವಷ್ಟೇ ಅಶೋಕ್​ ಗೆಹ್ಲೋಟ್​ ಬಜೆಟ್​ ಕಾಪಿ ಓದುವುದನ್ನು ನಿಲ್ಲಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version