Site icon Vistara News

Voter data | ಚಿಲುಮೆ ಸಂಸ್ಥೆ ಕಾರ್ಯಾಚರಣೆ ಹೊಸತಲ್ಲ, ಕಾಂಗ್ರೆಸ್‌, ಜೆಡಿಎಸ್‌ ಆಡಳಿತವಿದ್ದಾಗಲೂ ಸಮೀಕ್ಷೆ ನಡೆಸಿತ್ತು!

voter data

ಬೆಂಗಳೂರು: ಮತದಾರರ ಮಾಹಿತಿ ಕಳವು ಆರೋಪದ ಬೆನ್ನಲ್ಲೇ ಭಾರಿ ಸುದ್ದಿಯಲ್ಲಿರುವ ಚಿಲುಮೆ ಎಂಬ ಖಾಸಗಿ ಸಂಸ್ಥೆ ಈ ರೀತಿ ಮಾಹಿತಿ ಸಂಗ್ರಹಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ!

ಹೌದು, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ದೊಡ್ಡ ಮಟ್ಟದ ಹಗರಣವೆಂಬ ಹೆಸರಿನಲ್ಲಿ ಚಿಲುಮೆ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದರು. ಚಿಲುಮೆ ಸಂಸ್ಥೆಯು ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮನೆಗೆ ಹೋಗಿ ಮತದಾರರ ಮಾಹಿತಿಯನ್ನು ಪಡೆಯುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು.

ಆದರೆ, 2017, 2018, 2019, 2022 ಸಾಲಿನಲ್ಲೂ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಜಾಗೃತಿ ಅಭಿಯಾನ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೊದಲ ಬಾರಿಗೆ ಕೆ.ಆರ್ ಪುರಂಲ್ಲಿ ಅಭಿಯಾನ ಮಾಡಲು ಅಂದಿನ ಕಾಂಗ್ರೆಸ್‌ ಸರಕಾರ ಅನುಮತಿ ನೀಡಿತ್ತು. 2018ರಲ್ಲಿ ಲೋಕಸಭಾ ಚುನಾವಣೆಗೂ ಮೊದಲೂ ಇದೇ ಸಂಸ್ಥೆ ಕಾರ್ಯಾಚರಣೆ ನಡೆಸಿದೆ. ಕುಮಾರಸ್ವಾಮಿ ಅವರ ಅವಧಿಯಲ್ಲೂ ಇದು ಮುಂದುವರಿದಿದೆ. 2019 ಯಡಿಯೂರಪ್ಪ ಅವಧಿಯಲ್ಲೂ ಅನುಮತಿ ಮುಂದೂವರಿಸಲಾಗಿದೆ. ಇದನ್ನೇ ಅನುಸರಿಸಿ 2022ರಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲೂ ಅನುಮತಿ ನೀಡಲಾಗಿದೆ

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾನ ಜಾಗೃತಿ ಅರಿವು ಮೂಡಿಸುವ ಕೆಲಸ ಮಾಡಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದ ಕಾಂಗ್ರೆಸ್‌ ಈಗ ವಿರೋಧ ವ್ಯಕ್ತಪಡಿಸುತ್ತಿದೆ ಎನ್ನುವುದು ಬಿಜೆಪಿಯ ಲೇವಡಿ. ಆದರೆ, ಈಗ ಮಾಡಲಾಗುತ್ತಿರುವ ಸಮೀಕ್ಷೆ ಕೇವಲ ಜಾಗೃತಿಯ ಉದ್ದೇಶವಲ್ಲ. ಅನ್ಯ ಉದ್ದೇಶಗಳಿವೆ ಎನ್ನುವುದು ಕಾಂಗ್ರೆಸ್‌ನ ಆರೋಪ.

ಇದನ್ನೂ ಓದಿ | Voter Data | 15 ದಿನದ ಹಿಂದೆಯೇ ʼಚಿಲುಮೆʼ ಅನುಮತಿ ರದ್ದುಪಡಿಸಿದರೂ ಮೌನವಾಗಿದ್ದೇಕೆ BBMP?

Exit mobile version