ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯಿಸಲಾಗಿರುವ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ (Specially abled voters) ಮತದಾನದ (Voting) ಅವಕಾಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶನಿವಾರದಿಂದ (ಏಪ್ರಿಲ್ 29) ಮತದಾನ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಎಲ್ಲ ಕಡೆ ಈಗಾಗಲೇ ನೋಂದಾಯಿಸಲ್ಪಟ್ಟ ಈ ವಿಭಾಗದ ಮತದಾರರ ಬಳಿ ಚುನಾವಣಾ ಅಧಿಕಾರಿಗಳೇ ತೆರಳಿ ಬ್ಯಾಲೆಟ್ ಪೇಪರ್ (Ballot Paper) ಮೂಲಕ ಮತದಾನ ಮಾಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಶಿವಾಜಿನಗರ ಸೇರಿದಂತೆ ಹಲವು ಕಡೆ ಬ್ಯಾಲೆಟ್ ಪೇಪರ್ ಮತದಾನ ಆರಂಭವಾಗಿದ್ದು, 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷಚೇತನರು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Modi in Karnataka : ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎಂಟ್ರಿ; ಇಂದು 4 ಕಡೆ ರೋಡ್ ಶೋ ಸಮಾವೇಶ
ಈ ವೇಳೆ ಮೂರೂ ಪಕ್ಷಗಳ ಏಜೆಂಟ್‌ಗಳು ಚುನಾವಣೆ ಅಧಿಕಾರಿಗಳ ಜತೆಗಿದ್ದರು. ಚುನಾವಣೆ ಅಧಿಕಾರಿಗಳ ಸಹಿತ ಎಲ್ಲರೂ ಮತದಾರರ ಮನೆಗೆ ತೆರಳಿದ್ದಾರೆ. ಎಲ್ಲರ ಸಮ್ಮುಖದಲ್ಲಿಯೇ ಮತ ಚಲಾವಣೆ ಮಾಡಿಸಲಾಗುತ್ತಿದೆ. ಜತೆಗೆ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.
ಬ್ಯಾಲೆಟ್ ಬಾಕ್ಸ್‌ಗಳನ್ನು ಹಿಡಿದು ಮನೆಗಳಿಗೆ ತೆರಳುತ್ತಿರುವ ಅಧಿಕಾರಿಗಳು, ಮತದಾನ ಮಾಡುವ ಸಂದರ್ಭದಲ್ಲಿ ಗೌಪ್ಯತೆಗಾಗಿ ಮರೆ ಮಾಡುವ ಸಂಬಂಧ ಚುನಾವಣಾ ಆಯೋಗದ ಮತ ಜಾಗೃತಿಯ ಚಿತ್ರವುಳ್ಳ ರೊಟ್ಟನ್ನು ಹಿಡಿದೊಯ್ದಿದ್ದಾರೆ.
ಇದನ್ನೂ ಓದಿ: Karnataka Election : ವರುಣದಲ್ಲಿ ಸೋಮಣ್ಣಗೆ ಮತ್ತೆ ಸಂಕಟ; ಊರಿಗೇ ಪ್ರವೇಶ ನೀಡದ ಗ್ರಾಮಸ್ಥರು
ಗೌಪ್ಯತೆಯಲ್ಲಿ ಮತದಾನ
ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದರೆ, 19,279 ವಿಶೇಷಚೇತನ ಮತದಾರರಿದ್ದಾರೆ. ಇವರೆಲ್ಲರೂ ಮನೆಯಿಂದ ವೋಟ್ ಮಾಡಲು ಅವಕಾಶ ಪಡೆದಿದ್ದಾರೆ. ಚುನಾವಣೆ ಅಧಿಕಾರಿಗಳು ಇವರಿಂದ ಮತ ಹಾಕಿಸಿಕೊಳ್ಳುವಾಗ ಗೌಪ್ಯತೆ ಕಾಪಾಡಲಿದ್ದಾರೆ.
ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದು, ಇವರಲ್ಲಿ ಪುರುಷರು 5,46,487 ಇದ್ದರೆ, ಮಹಿಳೆಯರ ಸಂಖ್ಯೆ 6,69,417 ಇದೆ. ಆದರೆ, 80 ಸಾವಿರಕ್ಕೂ ಅಧಿಕ ಜನ ಮಾತ್ರ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೇ 6ರ ಸಂಜೆ 6 ಗಂಟೆವರೆಗೆ ಹಿರಿಯ ಮತದಾರರು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಇದನ್ನೂ ಓದಿ: Wrestlers Protest: ಧರಣಿ ಕುಳಿತ ಕುಸ್ತಿಪಟುಗಳನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ; ಕರೆಂಟ್, ನೀರು ಇಲ್ಲದ ಸ್ಥಿತಿ
ಮೇ 6ರವರೆಗೆ ಅವಕಾಶ
ಶನಿವಾರದಿಂದ (ಏಪ್ರಿಲ್ 29) ಮನೆಯಿಂದಲೇ ಮತದಾನ ಪ್ರಾರಂಭವಾಗಿದ್ದು, ಮೇ 6ರವರೆಗೆ ಮತದಾನಕ್ಕೆ ಅವಕಾಶ ಇರಲಿದೆ.