Site icon Vistara News

Electric shock: ಮೈಮೇಲೆ ಬಿದ್ದ ವಾಟರ್ ಹೀಟರ್; ಕರೆಂಟ್‌ ಶಾಕ್‌ ಹೊಡೆದು ತಾಯಿ‌-ಮಗ ಬಲಿ

water heater that fell on the body Mother and son die of Electric shock

ಬೆಂಗಳೂರು: ಹೊಸಕೋಟೆ ತಾಲೂಕಿನ ಕನಕ ನಗರದ ಮನೆಯೊಂದರಲ್ಲಿ ಶೌಚಾಲಯದಲ್ಲಿ ಬಿಸಿ ನೀರು ಕಾಯಿಸಲು ಇಟ್ಟಂತಹ ಸಂದರ್ಭದಲ್ಲಿ ವಾಟರ್ ಹೀಟರ್‌ ಮೈಮೇಲೆ ಬಿದ್ದು ಕರೆಂಟ್‌ ಶಾಕ್‌ (Electric shock) ಹೊಡೆದಿದ್ದು, ಮಗ ಸಹಿತ ತಾಯಿ‌ಯೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಯಚೂರು ಮೂಲದ ತಾಯಿ ಜ್ಯೋತಿ ಮತ್ತು ಮಗ ಜಯಾನಂದ್ (4) ಮೃತ ದುರ್ದೈವಿಗಳು. ಭಾನುವಾರ (ಫೆ. ೧೬) ಮಧ್ಯಾಹ್ನ ಈ ಪ್ರಕರಣ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ನೀರು ಕಾಯಿಸಲು ಜ್ಯೋತಿ ಹೀಟರ್‌ ಹಾಕಿದ್ದರು ಎನ್ನಲಾಗಿದೆ.

ಈ‌ ವೇಳೆ ಮಗ ಜಯಾನಂದ್‌ ಶೌಚಾಲಯಕ್ಕೆ ಹೋಗಿದ್ದಾನೆ. ಆದರೆ, ಅವನು ಗಮನಿಸಲಿಲ್ಲ ಎನ್ನಲಾಗಿದೆ. ಈ ವೇಳೆ ಬಕೆಟ್‌ ಬಿದ್ದಿದ್ದು, ಅದರಲ್ಲಿದ್ದ ವಾಟರ್‌ ಹೀಟರ್‌ನಿಂದ ಮೊದಲು ಜಯಾನಂದ್‌ಗೆ ಕರೆಂಟ್‌ ತಗುಲಿದೆ. ಆತ ಕೂಗಿಕೊಳ್ಳುತ್ತಿರುವುದನ್ನು ನೋಡಿ ಜ್ಯೋತಿ ಓಡಿಹೋಗಿದ್ದಾರೆ. ಆಗ ಅಲ್ಲಿ ಮಗ ಕರೆಂಟ್‌ ಶಾಕ್‌ನಿಂದ ಒದ್ದಾಡುತ್ತಿರುವುದನ್ನು ನೋಡಿ ಭಯಗೊಂಡು ಎಳೆದುಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಇವರಿಗೂ ಶಾಕ್‌ ತಗುಲಿದೆ. ಹೀಗಾಗಿ ಇಬ್ಬರೂ ಅಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Shivamogga Airport: ಮೋದಿ ಕಾರ್ಯಕ್ರಮಕ್ಕೆ ಐದಾರು ಕಿ.ಮೀ. ನಡೆದೇ ಬಂದ ಲಕ್ಷಾಂತರ ಜನ

ಜ್ಯೋತಿ ದಂಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕನಕ ನಗರದ ಮನೆಯೊಂದರಲ್ಲಿ ವಾಸವಾಗಿದ್ದರು. ನೀರು ಕಾಯಿಸಲು ಹಾಕಲಾಗಿದ್ದ ವಾಟರ್‌ ಹೀಟರ್‌ ಇವರ ಜೀವವನ್ನು ತೆಗೆದಂತಾಗಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version