Site icon Vistara News

Dharwad News: ನವಲಗುಂದದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲೇ ವಾಟರ್ ಮ್ಯಾನ್ ಸಾವು

Youth death by electrocution in Gangavati

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ (Dharwad News) ತಡಹಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ಪಂಚಾಯಿತಿ ವಾಟರ್ ಮ್ಯಾನ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಗ್ರಾಮದ ರುದ್ರಪ್ಪ ಬಡಿಗೇರ (38) ಮೃತ ವ್ಯಕ್ತಿ. ಇವರು ತಡಹಾಳ ಗ್ರಾಮ ಪಂಚಾಯಿತಿಯಲ್ಲಿ ವಾಟರ್‌ಮ್ಯಾನ್‌ ಆಗಿ‌ ಕೆಲಸ ಮಾಡುತ್ತಿದ್ದರು. ವಿದ್ಯುತ್ ಕಂಬದ ಲೈಟ್ ಹಾಕುವಾಗ ವಿದ್ಯುತ್ ತಗುಲಿ‌ ಅವಘಡ ಸಂಭವಿಸಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕದ್ದುಮುಚ್ಚಿ ಮೈ, ಕೈ ಮುಟ್ಟಿದವ್ನಿಗೆ ಗ್ರಹಚಾರ ಬಿಡಿಸಿದ ಯುವತಿ; ಮುಖ ಮುಸುಡಿ ನೋಡದೆ ಚಚ್ಚಿಯೇ ಬಿಟ್ಟಳು!

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗೆ 30 ವರ್ಷ ಜೈಲುಶಿಕ್ಷೆ, 50 ರೂ. ಸಾವಿರ ದಂಡ

ಕೋಲಾರ: ಪೋಕ್ಸೊ ಪ್ರಕರಣದ ಆರೋಪಿಯೊಬ್ಬರಿಗೆ 30 ವರ್ಷ ಜೈಲು ಶಿಕ್ಷೆ, 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ ತೀರ್ಪು ನೀಡಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರ ಅ.9 ರಂದು ಗಾಜಲಬಾವಿ ಗ್ರಾಮದ ವೆಂಕಟರಾಮಪ್ಪ (32) ಎಂಬಾತ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ವಿಶೇಷ ಪೋಕ್ಸೊ ಕೋರ್ಟ್ ನ್ಯಾಯಾಧೀಶ ಬಿ.ಪಿ. ದೇವಮಾನೆ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಇದೇ ವೇಳೆ ನೊಂದ ಬಾಲಕಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಲಲಿತಕುಮಾರಿ ವಾದ ಮಂಡಿಸಿದ್ದರು.

Exit mobile version