Site icon Vistara News

Karnataka Election 2023: ಮೋದಿ ರೋಡ್‌ ಶೋಗೆ ಆಂಬ್ಯುಲೆನ್ಸ್‌ ಅಡ್ಡ ತರುವ ನೀಚ ಕೆಲಸವನ್ನು ನಾವು ಮಾಡಲ್ಲ: ಡಿ.ಕೆ. ಶಿವಕುಮಾರ್

We will not do the dirty thing of bringing ambulance across Modi roadshow says DK Shivakumar Karnataka Election 2023 updates

ದಾವಣಗೆರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಹಾಗೂ ಬಿಜೆಪಿಗೆ ಈ ಚುನಾವಣೆಯಲ್ಲಿ (Karnataka Election 2023) ಸೋಲುವ ಭೀತಿ ಹೆಚ್ಚಾಗಿದೆ. ನಾವು ನರೇಂದ್ರ ಮೋದಿ ರೋಡ್ ಶೋಗೆ ಯಾವುದೇ ತೊಂದರೆ ಮಾಡುವುದಿಲ್ಲ. ಬಿಜೆಪಿಗೆ ಸೋಲು ನಿಶ್ಚಿತ ಎಂದು ಗೊತ್ತಾಗಿದೆ. ಅದಕ್ಕಾಗಿ ಹೀಗೆಲ್ಲ ಮಾತನಾಡುತ್ತಾರೆ. ಇನ್ನು ಇದಕ್ಕೆ ಧಕ್ಕೆ ತರುವಂತಹ, ಆಂಬ್ಯುಲೆನ್ಸ್‌ ಅನ್ನು ಅವರು ಹೋಗುವ ಕಡೆ ತರುವಂತಹ ನೀಚ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.‌

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ತರುತ್ತಾರೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಹೊನ್ನಾಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರು ಬೇಕಿದ್ದರೆ ರಸ್ತೆಯಲ್ಲಿಯೇ ಮಲಗಿಕೊಳ್ಳಲಿ, ಉರುಳು ಸೇವೆ ಮಾಡಲಿ, ನಮಗೆ ಏನೂ ತೊಂದರೆ ಮಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್‌ ಶೋ: ಮನೆ ಬಾಲ್ಕನಿ, ಟೆರೇಸ್‌ ಮೇಲೆ ನಿಂತು ನೋಡುವಂತಿಲ್ಲ!

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಒಂದೇ ರಸ್ತೆಯಲ್ಲಿ ಅವಕಾಶ ಕೊಡಲಾಗಿದೆ. ಆದರೆ, ನರೇಂದ್ರ ಮೋದಿಗೆ ಹೋಗಲು ಹಾಗೂ ಜನರು ನಿಲ್ಲಲು ಎರಡು ರಸ್ತೆಯನ್ನು ಕೊಟ್ಟಿದ್ದಾರೆ. ಇದು ಸರಿಯೇ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಗೋವಾದಲ್ಲಿ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಲಾಗಿದೆ

ಹನುಮಾನ್ ಚಾಲೀಸಾ ಪಠಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಿಜೆಪಿಯವರು ಹನುಮಾನ್ ಚಾಲೀಸಾ ಪಠಣ ಮಾಡಿದ್ದು ಸಂತೋಷದ ವಿಚಾರ. ಆದರೆ, ಬಜರಂಗದಳಕ್ಕೂ ಬಜರಂಗಿಗೂ ವ್ಯತ್ಯಾಸ ಇದೆ. ಗೋವಾದಲ್ಲಿ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಲಾಗಿದೆ. ಆ ಸಂಘಟನೆಯನ್ನು ಅಲ್ಲಿ ಪುನಃ ಸ್ಥಾಪಿಸಲು ಅವಕಾಶ ಕೊಟ್ಟಿಲ್ಲ. ಆಗ ಶೋಭಕ್ಕ ಎಲ್ಲಿ ಇದ್ದರು? ಮೋದಿ ಎಲ್ಲಿ ಹೋಗಿದ್ದರು? ಎಂದು ಪ್ರಶ್ನೆ ಮಾಡಿದರು.

ನೀವು ಅಮಾಯಕರನ್ನು ಹಾಳು ಮಾಡಿ ದೇಶವನ್ನು ಲೂಟಿ ಮಾಡುತ್ತಿದ್ದೀರಿ. ನಿಮ್ಮ ಪಾರ್ಟಿ ಬೆಳೆಸಿಕೊಳ್ಳಿ, ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಅನಾವಶ್ಯಕವಾಗಿ ಅಮಾಯಕರ ಜೀವವನ್ನು ಬಲಿ ಕೊಡಬೇಡಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: Modi in Karnataka : ಮೋದಿ ರೋಡ್‌ ಶೋ ತಡೆ ಕೋರಿ ಹೈಕೋರ್ಟ್‌ಗೆ ಮನವಿ, ತಕ್ಷಣ ವಿಚಾರಣೆ

ಮಾಧ್ಯಮಕ್ಕೆ ರಾಜ್ಯದಲ್ಲಿ ಆತಂಕ ಇದೆ

ಮಾಧ್ಯಮಕ್ಕೆ ರಾಜ್ಯದಲ್ಲಿ ಆತಂಕ ಇದೆ. ಮಾಧ್ಯಮದವರು ಇದನ್ನು ಒಪ್ಪಿಕೊಳ್ಳದಿರಬಹುದು. ಪತ್ರಿಕೆಯವರಿಗೆ ಮತ್ತು ಟಿವಿಯವರಿಗೆ ಹೆದರಿಸುತ್ತಿದ್ದಾರೆ. ಅಷ್ಟೇ ಏಕೆ ಕಾಂಗ್ರೆಸ್ ಪರ ಯಾರು ನಿಲ್ಲುತ್ತಾರೆ ಅವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಫೇಕ್ ರೇಡ್‌ಗಳ ಮೂಲಕ ಹೆದರಿಸಿ, ಏನು ಕೆಲಸವೂ ಆಗದಿರುವ ರೀತಿ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.

Exit mobile version