Site icon Vistara News

Weather Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ

Weather Alert

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗುವ ಸಂಭವ ಇದೆ ಎಂದಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗ್ಗೆಯಿಂದ ಬಿಸಿಲು ಕಂಡು ಬಂದರೂ ಸಂಜೆ ಹೊತ್ತಿಗೆ ಏಕಾಏಕಿ ಮಳೆ ಬೀಳುವ ಸಂಭವ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆಯಾಗಬಹುದು.

ನಗರದಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಮಳೆಯಾಗಿದೆ. ಕಡುಬೇಸಿಗೆಯಲ್ಲಿ ಸುರಿದ ಈ ಮಳೆ ನಗರವನ್ನು ಸ್ವಲ್ಪ ತಂಪಾಗಿಸಿದೆ. ಬಾಗಲಗುಂಟೆಯಲ್ಲಿ 3.9 ಸೆಂ.ಮೀ, ಶೆಟ್ಟಿಹಳ್ಳಿಯಲ್ಲಿ 3.8 ಸೆಂ.ಮೀ, ನಂದಿನಿ ಲೇಔಟ್‌ನಲ್ಲಿ 3.5 ಸೆಂ.ಮೀ, ನಾಗಪುರ 2.5, ದೊಡ್ಡಬಿದರಕಲ್ಲು 2.4, ಕೆಂಗೇರಿಯಲ್ಲಿ 2.1, ದೊಡ್ಡ ಬೊಮ್ಮಸಂದ್ರ, ಯಶವಂತಪುರ, ಕೊಟ್ಟಿಗೆಪಾಳ್ಯ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತಲಾ 2.0 ಸೆಂ.ಮೀ, ರಾಧಾಕೃಷ್ಣ ದೇವಸ್ಥಾನ ವಾರ್ಡ್‌, ಕೊಡಿಗೆಹಳ್ಳಿಯಲ್ಲಿ ತಲಾ 1.8, ಬೇಗೂರಿನಲ್ಲಿ 1.3 ಹಾಗೂ ಕೋರಮಂಗಲದಲ್ಲಿ 1.1 ಸೆಂ.ಮೀ ಮಳೆ ಆಗಿರುವ ವರದಿ ಬಂದಿದೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆ ಅಬ್ಬರ; ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ನೀರು

Exit mobile version