Site icon Vistara News

Weather Report : ಉತ್ತರ-ದಕ್ಷಿಣ ಕರ್ನಾಟಕದಲ್ಲಿ ಇನ್ನೆರಡು ದಿನ ಭಾರಿ ಮಳೆ; ಬೆಂಗಳೂರಲ್ಲಿ ರಾತ್ರಿ ಆರ್ಭಟ!

beautiful girl plays the water in the river

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಸ್ವಲ್ಪ ಚೇತರಿಸಿಕೊಂಡಿರುವ ಲಕ್ಷಣಗಳು ಕಾಣಿಸುತ್ತಿವೆ. ಮುಂದಿನ 48 ಗಂಟೆಗಳಲ್ಲಿ ಉತ್ತರ ಒಳನಾಡಿನ (South Inland) ಮತ್ತು ದಕ್ಷಿಣ ಒಳನಾಡಿನ (North Inland) ಹಲವು ಕಡೆಗಳಲ್ಲಿ ಭರ್ಜರಿ ಮಳೆಯಾಗಲಿದೆ (Rain News) ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather Report) ಹೇಳಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಯೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ, ಕರಾವಳಿ ಜಿಲ್ಲೆಗಳಾದ (Coastal Karnataka Rainfall) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಹೇಳಿದೆ.ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಾಣದಿದ್ದರೂ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿಲ್ಲ.

ಇದನ್ನೂ ಓದಿ: BK Hariprasad : ಸಣ್ಣ ಸಮುದಾಯದವರ ಅವಕಾಶಕ್ಕಾಗಿ ಬೀದಿಗಿಳಿಯುವೆ: ಸಿಎಂ ವಿರುದ್ಧ ಹರಿಪ್ರಸಾದ್‌ ಮತ್ತೆ ಗುಡುಗು

ಬೆಂಗಳೂರಿನಲ್ಲಿ ರಾತ್ರಿ ಮಳೆ!

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಇಲ್ಲವೇ ರಾತ್ರಿಯ ವೇಳೆಗೆ ಒಂದೆರಡು ಬಾರಿ ಭರ್ಜರಿಯಾಗಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ರಾಜಧಾನಿಯಲ್ಲಿ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಶನಿವಾರ ಎಲ್ಲೆಲ್ಲಿ, ಎಷ್ಟೆಷ್ಟು ಮಳೆ?

ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಅಷ್ಟು ಪ್ರಬಲವಾಗಿರಲಿಲ್ಲ. ಇನ್ನು ಕರಾವಳಿಯಲ್ಲಿಯೂ ದುರ್ಬಲವಾಗಿತ್ತು. ಆದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ತಕ್ಕಮಟ್ಟಿಗೆ ಮಳೆಯಾಗಿದೆ.

ಇದನ್ನೂ ಓದಿ: Government Transfer : ಇನ್ನು ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ!

ಮಳೆ ಪ್ರಮಾಣದ ವಿವರಗಳು ಹೀಗಿವೆ

ಶಹಾಪುರ (ಯಾದಗಿರಿ) 12 ಸೆಂ.ಮೀ., ಕೂಡಲಸಂಗಮ (ಬಾಗಲಕೋಟೆ), ಮಳವಳ್ಳಿ ಎಆರ್‌ಜಿ, ಮದ್ದೂರು (ಮಂಡ್ಯ) ತಲಾ 6; ತಾವರೆಗೆರೆ (ಕೊಪ್ಪಳ), ಬಂಡೀಪುರ (ಚಾಮರಾಜನಗರ), ಚಿತ್ರದುರ್ಗ ತಲಾ 5, ಬಾದಾಮಿ, ಲೋಕಾಪುರ (ಬಾಗಲಕೋಟೆ) ತಲಾ 4, ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ (ಬೆಳಗಾವಿ), ಗದಗ, ದೇವರಹಿಪ್ಪರಗಿ (ವಿಜಯಪುರ), ಯಡ್ರಾಮಿ (ಕಲಬುರಗಿ), ಯಗಟಿ (ಚಿಕ್ಕಮಗಳೂರು), ಕೊಳ್ಳೇಗಾಲ (ಚಾಮರಾಜನಗರ), ಬೆಳ್ಳೂರು (ಮಂಡ್ಯ) ತಲಾ 3, ಚಿಕ್ಕೋಡಿ, ಸಂಕೇಶ್ವರ (ಬೆಳಗಾವಿ), ಕುಂದಗೋಳ (ಧಾರವಾಡ), ಹುಣಸಗಿ, ನಾರಾಯಣಪುರ (ಯಾದಗಿರಿ), ಚಿಕ್ಕಮಗಳೂರು, ಸರಗೂರು (ಮೈಸೂರು), ಕೋಲಾರ, ಕನಕಪುರ (ರಾಮನಗರ) ತಲಾ 2, ಮಹಾಲಿಂಗಪುರ, ಬಿಳಿಗಿ, ರಬಕವಿ (ಬಾಗಲಕೋಟೆ), ಉಡುಪಿ, ನಲ್ವತವಾಡ (ವಿಜಯಪುರ), ಕೆಂಭಾವಿ (ಯಾದಗಿರಿ), ಕೆ.ಆರ್.ಸಾಗರ (ಮಂಡ್ಯ) ರಾಯಲ್ಪಾಡು (ಕೋಲಾರ), ದಾವಣಗೆರೆ, ಹೊಸದುರ್ಗ, ನಾಯಕನಹಟ್ಟಿ (ಚಿತ್ರದುರ್ಗ), ಚಿಕ್ಕಬಳ್ಳಾಪುರ, ಚನ್ನಪಟ್ಟಣ (ರಾಮನಗರ) ತಲಾ 1 ಸೆಂ.ಮೀ. ಮಳೆಯಾಗಿದೆ.

Exit mobile version