ಬೆಂಗಳೂರು: ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather Report) ತಿಳಿಸಿದೆ. ರಾಜ್ಯದ ವಿವಿಧೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯುವುದು ಅನುಮಾನ ಎಂದು ಹೇಳಲಾಗಿದೆ.
ದಕ್ಷಿಣ ಒಳನಾಡು (South Inland) ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಅಲ್ಪ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಒಳನಾಡು (North Inland) ಜಿಲ್ಲೆಯಾದ ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಈ ಒಳನಾಡಿನ ಉಳಿಕೆ ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: Ghulam Nabi Azad: ಮುಸ್ಲಿಮರು ಹಿಂದುಗಳಾಗಿದ್ದರು ಎಂಬ ಗುಲಾಂ ನಬಿ ಹೇಳಿಕೆಗೆ ಬಜರಂಗದಳ, ವಿಎಚ್‌ಪಿ ಹೇಳಿದ್ದೇನು?
ಮಲೆನಾಡಲ್ಲಿ ಸಾಧಾರಣ ಮಳೆ
ಮಲೆನಾಡು ಭಾಗಗಳಲ್ಲಿ (Malnad Districts) ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗಲಿದ್ದರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯಲಿದೆ.
ಕರಾವಳಿಯಲ್ಲಿಯೂ ತಗ್ಗಿದ ಅಬ್ಬರ
ಅತ್ಯಂತ ಭರ್ಜರಿಯಾಗಿ ಮಳೆಯಾಗುತ್ತಿದ್ದ ಕರಾವಳಿ ಜಿಲ್ಲೆಗಳಲ್ಲಿಯೂ (Coastal Karnataka Rainfall) ಸಹ ಕಳೆದ ಎರಡು ವಾರದಿಂದೀಚೆಗೆ ಅಷ್ಟಾಗಿ ಮಳೆ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲಿಯೋ ಆಗೊಮ್ಮೆ, ಈಗೊಮ್ಮೆ ಎಂಬಂತೆ ಕೆಲವೇ ಕೆಲವು ಕಡೆ ಉತ್ತಮ ಮಳೆಯಾಗುತ್ತ ಬರುತ್ತಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Naadageethe row : ನಾಡಗೀತೆ ವಿವಾದ ಕೇಳಿದ್ರೆ ಕುವೆಂಪು ಏನಂದ್ಕೊಳ್ತಾರೋ!; ಹೈಕೋರ್ಟ್‌ನಲ್ಲಿ ಹೀಗೂ ಒಂದು ಜಿಜ್ಞಾಸೆ!
ಬೆಂಗಳೂರಲ್ಲಿ ಮೋಡ ಮತ್ತು ಬಿಸಿಲಿನ ಮಿಶ್ರಣ
ಬೆಂಗಳೂರು ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸಹ ಸಾಧಾರಣ ಮಳೆಯಾಗುವ (Bangalore Rain) ಸಾಧ್ಯತೆ ಇದೆ. ಆದರೆ, ಹೆಚ್ಚಾಗಿ ಬಿಸಿಲಿನಿಂದ ಕೂಡಿದ ಮೋಡ ಕವಿದ ವಾತಾವರಣ ಇರಲಿದೆ ಎನ್ನಲಾಗಿದೆ. ಇನ್ನು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.