Site icon Vistara News

Weather Report | ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ, ಇರಲಿ ಎಚ್ಚರ

Weather Alert

ಬೆಂಗಳೂರು: ಘಳಿಗೆಗೊಮ್ಮೆ ಹವಾಮಾನ ಬದಲಾವಣೆ ಆಗುತ್ತಿದೆ. ಮುಂಜಾನೆ ಚುಮು ಚುಮು ಚಳಿ ಇದ್ದರೆ, ಮಧ್ಯಾಹ್ನ ದಿಢೀರ್‌ ಮಳೆಯಾಗುತ್ತಿದೆ. ಇದು ಜನರನ್ನು ಹೈರಾಣಾಗಿಸಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಚಿಕ್ಕಮಗಳೂರಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಮೋಡ ಮುಸುಕಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುರುವಾರವೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಕರಾವಳಿಯ ಕೆಲವು ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿಯಾಗಿದೆ. ಹಾಸನ, ಭಾಗಮಂಡಲದಲ್ಲಿ ತಲಾ 3 ಸೆಂ.ಮೀ, ಬ್ರಹ್ಮಾವರ, ಹಾರಂಗಿ, ಕೊಪ್ಪ, ನಾಯಕನಹಟ್ಟಿ, ಹೊಸಪೇಟೆ ತಲಾ 2 ಸೆಂ.ಮೀ ಮಳೆಯಾಗಿದೆ.

ಇತ್ತ ಕುಂದಾಪುರ, ಸಿದ್ದಾಪುರ, ಮಂಡ್ಯ, ಮಳವಳ್ಳಿ, ಮದ್ದೂರು, ಶೃಂಗೇರಿ, ನಿಡಿಗೆ, ತ್ಯಾಗರ್ತಿ ಹಾಗೂ ದಾವಣಗೆರೆ, ಹೊನ್ನಾಳಿ, ಸೋಮವಾರಪೇಟೆ, ಕೋಲಾರ, ರಾಯಲ್ಪಾಡು, ಚಿತ್ರದುರ್ಗ, ಪರಶುರಾಂಪುರ, ಹಗರಿಬೊಮ್ಮನಹಳ್ಳಿ ತಲಾ 1 ಸೆಂ.ಮೀ ಮಳೆಯಾಗಿದೆ. ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಇದನ್ನೂ ಓದಿ | Death Mystery | ಚಂದ್ರಶೇಖರ್‌ ಸಾವಿನ ಸುತ್ತ ಹಲವು ಅನುಮಾನ; ಕಾರಣಕ್ಕಾಗಿ ಪೊಲೀಸರ ತೀವ್ರ ತನಿಖೆ!

Exit mobile version