ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿದ್ದು, ಬುಧವಾರ ಕರಾವಳಿಯ ಭಾಗಕ್ಕೆಷ್ಟೇ ಯೆಲ್ಲೋ ಅಲರ್ಟ್ಅನ್ನು ಹವಾಮಾನ ಇಲಾಖೆ (Weather Report) ನೀಡಿತ್ತು. ಬುಧವಾರ ಕರಾವಳಿಯ ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಆಗಾಗ ಮೋಡ ಕವಿದ ವಾತಾವರಣ ಇರಲಿದ್ದು, ಬಿಸಿ ಗಾಳಿಯ ಅನುಭವವಾಗಬಹುದು. ಕೆಲವೊಮ್ಮೆ ಅಲ್ಲಲ್ಲಿ ಹಗುರ ಮಳೆಯಾಗಲಿದ್ದು, ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಭಾರಿ ಮಳೆ ಹಾಗೂ ಗುಡುಗ, ಮಿಂಚಿನ ಮುನ್ಸೂಚನೆಯಾಗಲಿ ಹವಾಮಾನ ಇಲಾಖೆ ನೀಡಿಲ್ಲ. ಸಮುದ್ರ ತೀರದಲ್ಲಿ ಗಾಳಿ ವೇಗವು ಕಡಿಮೆಯಾಗಿದ್ದು ಮೀನುಗಾರಿಕೆಗೆ ಯಾವುದೇ ಅಲರ್ಟ್ ನೀಡಿಲ್ಲ.
ಮಂಗಳವಾರ ಹಾಗೂ ಬುಧವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಭಾಗದ ಕೆಲ ಗ್ರಾಮದಲ್ಲಿ ಹೆಚ್ಚಿನ ಮಳೆಯಾಗಿರುವ ವರದಿಯಾಗಿದೆ. ಮೈಸೂರಿನ ಕೆ.ಆರ್.ನಗರ ಮತ್ತು ಎಚ್.ಡಿ. ಕೋಟೆಯಲ್ಲಿ ಧಾರಾಕಾರ ಮಳೆಯಾಗಿತ್ತು.
ಇದನ್ನೂ ಓದಿ | ದೂದ್‌ಸಾಗರ್ ರೈಲು ಹಾದಿಯಲ್ಲಿ ಶೀಘ್ರದಲ್ಲೇ ವಿಸ್ಟಾಡೋಮ್?