ದೂದ್‌ಸಾಗರ್‌ ರೈಲು ಹಾದಿಯಲ್ಲಿ ಶೀಘ್ರದಲ್ಲೇ ವಿಸ್ಟಾಡೋಮ್‌? - Vistara News

ಪ್ರವಾಸ

ದೂದ್‌ಸಾಗರ್‌ ರೈಲು ಹಾದಿಯಲ್ಲಿ ಶೀಘ್ರದಲ್ಲೇ ವಿಸ್ಟಾಡೋಮ್‌?

ದೂದ್‌ಸಾಗರ್‌ ಜಲಪಾತ ಬಳಸಿಕೊಂಡು ಸಾಧಾರಣ ರೈಲಿನಲ್ಲಿ ಹೋಗುವಾಗಿನ ಸಂಭ್ರಮ ದುಪ್ಪಟ್ಟಾಗಿ ಅನುಭವಿಸುವ ಆಸೆಯಿದ್ದವರಿಗೆಲ್ಲ ಈಗ ಶುಭಸುದ್ದಿಯಿದೆ!

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟಕ ಗೋವಾ ಗಡಿಯ ದೂದ್‌ಸಾಗರ್‌ ಜಲಪಾತವನ್ನು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಅನುಭವ. ಈ ಹಾದಿಯ ದಟ್ಟ ಕಾಡಿನ ಸೌಂದರ್ಯ, ದೂದ್‌ಸಾಗರ್‌ ಬಳಸಿಕೊಂಡು ಸಾಧಾರಣ ರೈಲಿನಲ್ಲಿ ಹೋಗುವಾಗಿನ ಸಂಭ್ರಮ ದುಪ್ಪಟ್ಟಾಗಿ ಅನುಭವಿಸುವ ಆಸೆಯಿದ್ದವರಿಗೆಲ್ಲ ಈಗ ಶುಭಸುದ್ದಿಯಿದೆ! ವಿಸ್ಟಾಡೋಮ್‌ ಕೋಚ್‌ ಈ ಹಾದಿಯಲ್ಲೂ ಇನ್ನೂ ಪ್ರಕೃತಿಪ್ರಿಯರ ರೈಲು ಪ್ರಯಾಣವನ್ನು ಸುಮಧುರವಾಗಿಸಲಿದೆ.

ನೈರುತ್ಯ ರೇಲ್ವೆ ಈ ಹಿಂದೆಯೇ ವ್ಯಕ್ತವಾಗಿದ್ದ ಭಾರೀ ಬೇಡಿಕೆಯನ್ನು ಪರಿಗಣಿಸಿ ಸದ್ಯದಲ್ಲೇ ವಿಸ್ಟಾಡೋಮ್‌ ಕೋಚ್‌ಗಳನ್ನು ಈ ಹಾದಿಯಲ್ಲೂ ಬಿಡಲು ನಿರ್ಧರಿಸಿದೆ.

ಬಹಳ ಹಿಂದಿನಿಂದಲೇ ಈ ಹಾದಿಯಲ್ಲಿ ವಿಸ್ಟಾಡೋಮ್‌ ಕೋಚ್‌ ಆರಂಬಿಸಿದರೆ, ಈ ಹಾದಿಯ ಅಮೋಘ ದೃಶ್ಯವೈಭವ ಸವಿಯಲು ಅನುಕೂಲವಾಗಬಹುದು ಎಂಬ ಬೇಡಿಕೆಯಿತ್ತು. ದೂದ್‌ ಸಾಗರ್‌ ಈ ಹಾದಿಯ ಪ್ರಮುಖ ಆಕರ್ಷಣೆಯಾಗಿದ್ದು, ಪಶ್ಚಿಮ ಘಟ್ಟಗಳ ಬೆಟ್ಟ ಸಾಲು, ದಟ್ಟ ಕಾಡು, ನೀರ ಝರಿಗಳು, ಸುರಂಗ ಮಾರ್ಗಗಳು ಈ ಇಡೀ ರೈಲುಪ್ರಯಾಣವನ್ನು ರೋಮಾಂಚನಗೊಳಿಸುತ್ತದೆ. ಹಾಗಾಗಿಯೇ ಈ ಹಾದಿ ಭಾರತದ ಅತ್ಯಂತ ಪ್ರಸಿದ್ಧ ರೈಲುಹಾದಿಯಾಗಿದೆ.

ಎರ್ನಾಕುಲಂನಿಂದ ಪುಣೆಗೆ ಹೋಗುವ ಪೂರ್ಣ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ, ಲೋಂದಾ, ದೂದ್‌ಸಾಗರ್‌, ಮಡ್‌ಗಾಂವ್‌, ಕಾರವಾರ, ಗೋಕರ್ಣ, ಮುರುಡೇಶ್ವರ, ಉಡುಪಿ ಹಾಗೂ ಮಂಗಳೂರು ಹಾದಿಯಾಗಿ ಸಾಗುತ್ತಿದ್ದು ಈ ರೈಲಿಗೆ ವಿಸ್ಟಾಡೋಮ್‌ ಕೋಚ್‌ ಸರಿಯಾಗಿ ಹೊಂದಿಕೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಈ ಸೇವೆ ಸಿಗಲಿದ್ದು, ಇದು ನಾಲ್ಕು ರಾಜ್ಯಗಳ ಹಲವು ಪ್ರವಾಸೀ ತಾಣಗಳನ್ನು ಸಂಧಿಸಲಿದೆ.

ವಿಸ್ಟಾಡೋಮ್‌ ಕೋಚ್‌ ಸೇರಿಸುವ ಬಗ್ಗೆ ಈಗಾಗಲೇ ವಿವಿಧ ರೈಲ್ವೆ ವಿಭಾಗಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಕೇಂದ್ರ ರೈಲ್ವೆ ಮಂಡಳಿಗೆ ಪ್ರಸ್ಥಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ಪೂರ್ಣ ಎಕ್ಸ್‌ಪ್ರೆಸ್‌ ರೈಲಿನೊಂದಿಗೆ ವಿಸ್ಟಾಡೋಮ್‌ ಆರಂಭಿಸಿ ನಂತರ ಪ್ರತಿಕ್ರಿಯೆ ಗಮನಿಸಿ ಹೆಚ್ಚುವರಿ ಸೇರಿಸುವ ಬಗ್ಗೆ ಯೋಚಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಕ್ರೀಟು ಜಂಗಲ್‌ನೊಳಗೂ ನಿಜವಾದ ಕಾಡುಗಳಿವೆ, ಒಮ್ಮೆ ನೋಡಿ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Manali Tour: ಭೂಲೋಕದ ಸ್ವರ್ಗ ಮನಾಲಿಗೆ ಪ್ರವಾಸ ಮಾಡಲು ಯಾವ ಸಮಯ ಸೂಕ್ತ?

ಮನಾಲಿಯಲ್ಲಿ ಪ್ರತಿಯೊಂದು ಋತುವು ಒಂದೊಂದು ರೀತಿಯ ಆಕರ್ಷಣೆಯನ್ನು ಹೊಂದಿರುತ್ತದೆ. ವರ್ಷವಿಡೀ ಇಲ್ಲಿ ಸಂಭ್ರಮಿಸಲು ಸಾಕಷ್ಟು ಕಾರಣಗಳೂ ಸಿಗುತ್ತವೆ. ಹಾಗಾದರೆ ನೀವು ಯಾವಾಗ ಮನಾಲಿಗೆ ಪ್ರವಾಸ (Manali Tour) ಹೊರಡಬೇಕು ಎಂದು ಕೊಂಡಿದ್ದೀರಿ? ಮನಾಲಿಗೆ ಹೋಗಲು ಯಾವ ಸಮಯ ಸೂಕ್ತ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Manali Tour
Koo

ನಗರದ ಜಂಜಾಟದಿಂದ ದೂರ ಪ್ರಕೃತಿಯ ಮಡಿಲಲ್ಲಿ ಕುಳಿತು ಕೆಲವು ದಿನ ಕಳೆದು ಬರಬೇಕು ಎನ್ನುವ ಯೋಚನೆ ಬಂದಾಗ ಮನದಲ್ಲಿ ಮನಾಲಿ (Manali Tour), ಹಿಮಾಚಲ ಪ್ರದೇಶದ (himachal pradesh) ನೆನಪಾಗುತ್ತದೆ. ಒಂದೆಡೆ ಬೇಸಿಗೆಯ (summer) ಬಿಸಿಲಿನಿಂದ ಕಂಗೆಟ್ಟು ತಂಪಾದ ಪ್ರದೇಶಗಳಾದ ಮನಾಲಿ, ಹಿಮಾಚಲ ಪ್ರದೇಶಕ್ಕೆ ಹೋಗಿ ಬರಬೇಕು ಎನ್ನುವ ಯೋಜನೆ ಇದ್ದರೆ ಈಗಲೇ ಪ್ಲಾನ್ ಮಾಡಿ. ಯಾಕೆಂದರೆ ಇನ್ನು ಹಿಮಾಚಲ ಪ್ರದೇಶದ ಮನಾಲಿಗೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ.

ಹಿಮಾಲಯದಲ್ಲಿ ನೆಲೆಯಾಗಿರುವ ಮನಾಲಿ ಪ್ರವಾಸಿಗರಿಗೆ ಪ್ರಶಾಂತವಾದ ಸ್ವರ್ಗವಾಗಿದೆ. ರೋಮಾಂಚಕ ದೃಶ್ಯವಾಳಿಗಳು ಮತ್ತು ಅತ್ಯಾಕರ್ಷಕ ಸಾಹಸಗಳನ್ನು ಇಲ್ಲಿ ಆನಂದಿಸಬಹುದು. ಜೊತೆಗೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಸಾಂಸ್ಕೃತಿಕ ಸಂಭ್ರಮವನ್ನು ಆನಂದಿಸಬಹುದು.

ಮೋಡಿ ಮಾಡುವ ಈ ತಾಣವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇಲ್ಲಿನ ಹವಾಮಾನ ಪರಿಸ್ಥಿತಿ ಮತ್ತು ಅಲ್ಲಿ ಲಭ್ಯವಿರುವ ಚಟುವಟಿಕೆಗಳನ್ನು ಪರಿಗಣಿಸಿ ಮನಾಲಿಗೆ ಭೇಟಿ ನೀಡುವುದು ಒಳ್ಳೆಯದು.


ವಸಂತ ಋತು (ಮಾರ್ಚ್‌ನಿಂದ ಜೂನ್)

ಹೂವುಗಳು ಅರಳಲು ಪ್ರಾರಂಭಿಸಿದಾಗ ಮತ್ತು ಎಲ್ಲವೂ ಹಸಿರಿನಿಂದ ಆವೃತವಾದಾಗ ಮನಾಲಿಯಲ್ಲಿ ವಸಂತಕಾಲವಾಗಿದೆ. ಅಲ್ಲಿ ಪ್ರಕೃತಿಯು ದೀರ್ಘ ಚಳಿಗಾಲದ ಅನಂತರ ಮತ್ತೆ ಜೀವ ತುಂಬಿಕೊಂಡಂತೆ ಭಾಸವಾಗುತ್ತದೆ ಮಾರ್ಚ್ ತಿಂಗಳು ವಸಂತಕಾಲದ ಆರಂಭವನ್ನು ಸಂಕೇತಿಸುತ್ತದೆ. ಆಗ ಇಲ್ಲಿ 10 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್ ವರೆಗಿನ ಮಧ್ಯಮ ತಾಪಮಾನವನ್ನು ಹೊಂದಿರುತ್ತದೆ, ಇದರಿಂದಾಗಿ ದಿನದಲ್ಲಿ ಬಿಸಿಲು ಮತ್ತು ಬೆಚ್ಚಗಿದ್ದರೆ ರಾತ್ರಿ ತಂಪಾಗಿರುತ್ತದೆ. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್ ಮುಂತಾದ ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ.

ಏಪ್ರಿಲ್- ಮೇ ತಿಂಗಳು ಇಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಸೇಬು, ಚೆರ್ರಿ ಹೂವುಗಳಿಂದ ಪ್ರಕೃತಿ ಶೃಂಗಾರಗೊಳ್ಳುತ್ತದೆ. ಗುಲಾಬಿ, ಕೆಂಪು, ಬಿಳಿ, ನೇರಳೆ ಮತ್ತು ಗುಲಾಬಿ ಬಣ್ಣಗಳಿಂದ ಹಿಮದಿಂದ ಆವೃತವಾದ ಪರ್ವತಗಳ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ ರಮಣೀಯ ಸೌಂದರ್ಯ ಚಿತ್ರ ಬಿಡಿಸಿದಂತೆ ಭಾಸವಾಗುತ್ತದೆ.

ಬೇಸಿಗೆ (ಜೂನ್‌ನಿಂದ ಸೆಪ್ಟೆಂಬರ್)

ಬೇಸಿಗೆಯ ಋತುವಿನಲ್ಲಿ ಮನಾಲಿಯು ದಿನದಿಂದ ದಿನಕ್ಕೆ ಬೆಚ್ಚಗಾಗಲು ಪ್ರಾರಂಭಿಸುತ್ತದೆ. ಆದರೂ ರಾತ್ರಿಗಳು ಇಲ್ಲಿ ಆರಾಮದಾಯಕವಾಗಲು ಸಾಕಷ್ಟು ತಂಪಾಗಿರುತ್ತದೆ. ಜೂನ್ ತಿಂಗಳಿನಲ್ಲಿ ಈ ಗಿರಿಧಾಮಕ್ಕೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಈ ಮೂರು ತಿಂಗಳು ತಾಪಮಾನ 15 C ಮತ್ತು 30 C ನಡುವೆ ಇರುತ್ತದೆ. ಬಿಯಾಸ್ ನದಿಯ ದಡದಲ್ಲಿ ಸುಂದರವಾದ ದೃಶ್ಯ ವೀಕ್ಷಣೆಯನ್ನು ಮಾಡಬಹುದು.

ಜುಲೈ-ಆಗಸ್ಟ್ ಇಲ್ಲಿ ಮಳೆ ಇರುತ್ತದೆ. ಎಲ್ಲೆಡೆ ವರ್ಣರಂಜಿತ ಹೂವುಗಳಿಂದ ತುಂಬಿದ ಎಲೆಗೊಂಚಲುಗಳಿಂದ ತುಂಬಿದ ಹಸಿರು ಕಣಿವೆಗಳಾಗಿ ಮಾರ್ಪಡಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಸಾಹಸ ಚಟುವಟಿಕೆಗಳು ಸೀಮಿತವಾಗಿದ್ದರೂ ಜಲಪಾತಗಳು, ಹೂಬಿಡುವ ಕಣಿವೆಗಳು, ಮಂಜಿನಿಂದ ಆವೃತವಾದ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.


ಶರತ್ಕಾಲ (ಅಕ್ಟೋಬರ್‌ನಿಂದ ನವೆಂಬರ್)

ಸ್ಪಷ್ಟವಾದ ಆಕಾಶ, ಬೆಚ್ಚಗಿನ ದಿನಗಳು ಮತ್ತು ಆಹ್ಲಾದಕರ ರಾತ್ರಿಗಳೊಂದಿಗೆ ಶರತ್ಕಾಲವು ಸುಂದರವಾಗಿರುತ್ತದೆ. ವ್ಯಾಪಕವಾದ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಅಕ್ಟೋಬರ್ ಮಾನ್ಸೂನ್ ನಂತರದ ಅವಧಿಯಾಗಿದ್ದು, ಸುತ್ತಮುತ್ತಲಿನ ಪ್ರಕೃತಿಯು ಕಿತ್ತಳೆ, ಕೆಂಪು, ಹಳದಿ ಮತ್ತು ಗೋಲ್ಡನ್ ಬ್ರೌನ್‌ಗಳ ವರ್ಣಗಳಿಂದ ಅಲಂಕರಿಸಲ್ಪಡುತ್ತದೆ. ಎಲೆಗಳು ತಮ್ಮ ಮೂಲ ಹಸಿರು ಬಣ್ಣವನ್ನು ಕಳೆದುಕೊಂಡು ಚಿನ್ನದ ಬಣ್ಣ ಪಡೆಯುತ್ತದೆ. ದಿನದ ತಾಪಮಾನ 10 C ನಿಂದ 25 C ವರೆಗೆ ಇರುತ್ತದೆ. ಇದರಿಂದಾಗಿ ಟ್ರೆಕ್ಕಿಂಗ್, ಕ್ಯಾಂಪಿಂಗ್, ಮೌಂಟೇನ್ ಬೈಕಿಂಗ್ ಗಳಿಗೆ ಇದು ಸೂಕ್ತ ಸಮಯವಾಗುವುದು.

ನವೆಂಬರ್‌ನಲ್ಲಿ ತಂಪಾದ ವಾತಾವರಣ ಚಾರಣ ಅಥವಾ ಕ್ಯಾಂಪ್‌ಸೈಟ್‌ಗಳಂತಹ ಸಾಕಷ್ಟು ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ ಶೀತ ಅಲೆಗಳು ಕಾಣಿಸುವುದರಿಂದ ಮುನ್ನೆಚ್ಚರಿಕೆಯಾಗಿ ಸರಿಯಾದ ಬಟ್ಟೆಯನ್ನು ಹೊಂದಿರುವುದು ಅಗತ್ಯವಿರುತ್ತದೆ. ಪ್ರವಾಸಿಗರು ಇಲ್ಲಿ ದೀಪಾವಳಿ ದಸರಾದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಲು ಇದು ಸೂಕ್ತ ಸಮಯ.

ಇದನ್ನೂ ಓದಿ: Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಚಳಿಗಾಲ (ಡಿಸೆಂಬರ್‌ನಿಂದ ಫೆಬ್ರವರಿ)

ಹಿಮಪಾತವು ಮನಾಲಿಯ ಸುತ್ತಲಿನ ಬೆಟ್ಟಗಳನ್ನು ಅದರ ಬಿಳಿ ಹೊದಿಕೆಯ ಅಡಿಯಲ್ಲಿ ಆವರಿಸಿದಾಗ ಚಳಿಗಾಲವು ಆಗಮಿಸುತ್ತದೆ, ಈಗ ಇಲ್ಲಿ ಸ್ನೋಬಾಲ್‌ಗಳೊಂದಿಗೆ ಆಟವಾಡಬಹುದು. ಡಿಸೆಂಬರ್ ಚಳಿಗಾಲದ ಆರಂಭವಾಗಿರುತ್ತದೆ. ಇಡೀ ಕಣಿವೆಯ ನೆಲದ ಸುತ್ತಲೂ ಶೂನ್ಯ ತಾಪಮಾನ ಉಂಟಾಗುತ್ತದೆ. ಇದರ ಪರಿಣಾಮ ಇಡೀ ಭೂದೃಶ್ಯವು ಹಿಮದಿಂದ ಆವೃತ್ತವಾಗುವುದು. ಸ್ಕೀಯಿಂಗ್, ಸ್ನೋಬೋರ್ಡಿಂಗ್, ಸ್ನೋಮೊಬೈಲಿಂಗ್, ಮುಂತಾದ ವಿವಿಧ ರೀತಿಯ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಾಹಸ ಪ್ರಿಯರು ಈಗ ಇಲ್ಲಿ ಸೇರುತ್ತಾರೆ.

ಮನಾಲಿಯ ಗರಿಷ್ಠ ಚಳಿಗಾಲ ತಿಂಗಳು ಜನವರಿ ಮತ್ತು ಫೆಬ್ರವರಿ. ಈ ಅವಧಿಯಲ್ಲಿ, ತಾಪಮಾನವು -5 C ಮತ್ತು 10 C ನಡುವೆ ಇರಬಹುದು. ಈ ಸಮಯದಲ್ಲಿ ಭಾರೀ ಹಿಮಪಾತ ಉಂಟಾಗುತ್ತದೆ.

Continue Reading

ಪ್ರವಾಸ

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಪ್ರವಾಸದ ಯೋಜನೆ ಕೆಲವೊಮ್ಮೆ ಜೇಬಿಗೆ ಕತ್ತರಿ ಹಾಕುತ್ತದೆ ಎನ್ನುವ ಭಯವಿರುತ್ತದೆ. ಆದರೆ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಜನೆ ಮಾಡಿದರೆ ಇಲ್ಲಿ ಜೇಬಿಗೆ ಭಾರವಾಗದ ಹಲವು ತಾಣಗಳಿವೆ. ಆದರೆ ಸ್ವಲ್ಪ ಬುದ್ದಿವಂತಿಕೆ ತೋರಬೇಕು ಅಷ್ಟೇ. ಕನ್ಯಾಕುಮಾರಿಯ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kanyakumari Tour
Koo

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿನ ಕೆಲವೊಂದು ಸಂಗತಿಗಳನ್ನು ಮಿಸ್ ಮಾಡಿಕೊಳ್ಳದಿರಿ. ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವ ಎರಡಕ್ಕೂ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕು.


ಕನ್ಯಾಕುಮಾರಿ ನಗರವು ಐಷಾರಾಮಿ ಹಾಟ್‌ಸ್ಪಾಟ್ ಎಂಬ ಖ್ಯಾತಿಯನ್ನು ಪಡೆದಿದ್ದರೂ ಇಲ್ಲಿ ನಿಮ್ಮ ಬಜೆಟ್ ಮೀರದ ಹಾಗೆ ಪ್ರವಾಸ ಮಾಡಲು ಹಲವು ಆಯ್ಕೆಗಳನ್ನೂ ನೀಡುತ್ತದೆ. ಕೆಲವು ಯೋಜನೆ ಮತ್ತು ಸ್ಥಳೀಯರ ಸಲಹೆ ಪಡೆದರೆ ಬಜೆಟ್ ಮೀರದ ಹಾಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು. ಜೀವನದಲ್ಲಿ ಅತ್ಯಂತ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸೂರ್ಯೋದಯ – ಸೂರ್ಯಾಸ್ತ

ಕನ್ಯಾಕುಮಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಇಲ್ಲಿನ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರಬ್ಬಿ ಸಮುದ್ರ (Arabian Sea), ಬಂಗಾಳ ಕೊಲ್ಲಿ (Bay of Bengal) ಮತ್ತು ಹಿಂದೂ ಮಹಾಸಾಗರದ (Indian Ocean) ಭೇಟಿಯ ಸ್ಥಳದಲ್ಲಿ ಅತ್ಯಂತ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿ ಕೊಳ್ಳಬಹದು. ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ; ತೀರದ ಪಕ್ಕದಲ್ಲಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಬಹುದು.

ಐಕಾನಿಕ್ ಹೆಗ್ಗುರುತು

ಕನ್ಯಾಕುಮಾರಿಯು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುವ ಅನೇಕ ಪ್ರಸಿದ್ಧ ತಾಣಗಳನ್ನು ಹೊಂದಿದೆ. ಹೆಚ್ಚಿನ ಸ್ಥಳಗಳು ಕಡಿಮೆ ಪ್ರವೇಶ ಶುಲ್ಕವನ್ನು ಹೊಂದಿವೆ ಅಥವಾ ಉಚಿತ ಪ್ರವೇಶವನ್ನು ನೀಡುತ್ತವೆ.
ಹಿಂದೂ ಸಂತ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೋರಿಯಲ್‌ ಗೆ ಹೋಗಲು ದೋಣಿಯಲ್ಲಿ ತೆರಳಬೇಕು. ಈಲ್ಲಿ ಅದ್ಭುತವಾದ ನೋಟಗಳಲ್ಲದೆ, ಧ್ಯಾನ ಮಂದಿರಕ್ಕೂ ಭೇಟಿ ನೀಡಬಹುದು.

ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರನ್ನು ಗೌರವಿಸುವ ತಿರುವಳ್ಳುವರ್ ಪ್ರತಿಮೆ ಕನ್ಯಾಕುಮಾರಿ ಕರಾವಳಿಯ ಹೊರವಲಯದಲ್ಲಿದೆ. ಈ ಬೃಹತ್ ರಚನೆಯು ನಿಮ್ಮ ಬಜೆಟ್ ಅನ್ನು ಮೀರಿಸುವುದಿಲ್ಲ. ಅಲ್ಲದೇ ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.


ಪ್ರಕೃತಿಯ ನಡುವೆ ಸುಂದರ ಸಮಯ

ಕನ್ಯಾಕುಮಾರಿಯಲ್ಲಿ ಸುಂದರವಾದ ಪ್ರಕೃತಿಕ ತಾಣಗಳಿಗೆ ಕೊರತೆಯಿಲ್ಲ, ಆದ್ದರಿಂದ ಪ್ರಕೃತಿ ಪ್ರಿಯರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ಪ್ರದೇಶವು ಸುಂದರವಾದ ಕಡಲತೀರಗಳಿಂದ ಹಿಡಿದು ಸೊಂಪಾದ ಭೂದೃಶ್ಯಗಳವರೆಗೆ ಎಲ್ಲವನ್ನೂ ನೀಡುತ್ತದೆ.

ಕನ್ಯಾಕುಮಾರಿ ಬೀಚ್ ನಲ್ಲಿ ಸೂರ್ಯನ ಸ್ನಾನ ಅಥವಾ ಸಮುದ್ರದಲ್ಲಿ ಈಜಲು ಕೆಲವು ಗಂಟೆಗಳ ಕಾಲ ಕಳೆಯಬಹುದು. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ನೋಡುತ್ತಾ ಧ್ಯಾನ ಮಗ್ನರಾಗಿ ಕುಳಿತುಕೊಳ್ಳಬಹುದು. ಕನ್ಯಾಕುಮಾರಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸುಚಿಂದ್ರಂ ದೇವಸ್ಥಾನದ ಕೊಳ ಪ್ರಶಾಂತ ವಾತಾವರಣದ ಮಧ್ಯ ಇದೆ. ಪುರಾತನ ದೇವಾಲಯಗಳಿಂದ ಆವೃತವಾಗಿದೆ. ಇದು ಸುಮ್ಮನೆ ನಡಿಗೆ, ಧ್ಯಾನಕ್ಕಾಗಿ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ವೈಭವದ ಸಾಂಸ್ಕೃತಿಕ ಪರಂಪರೆ

ಕನ್ಯಾಕುಮಾರಿ ನಗರವು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡುತ್ತದೆ. ಕನ್ಯಾಕುಮಾರಿ ಅಮ್ಮನ್ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರನ್ನು ಆಹ್ವಾನಿಸುತ್ತದೆ. ದೇವಾಲಯದ ಎತ್ತರದ ಗೋಪುರ, ಸಂಕೀರ್ಣವಾದ ಕೆತ್ತಿದ ಕಂಬಗಳು ಈ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಗಳು, ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಇದನ್ನೂ ಓದಿ: Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

ಸ್ಥಳೀಯ ಖಾದ್ಯ ರುಚಿ

ಬಜೆಟ್ ಸ್ನೇಹಿ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ಇಲ್ಲಿ ಖರೀದಿ ಮಾಡಬಹುದು, ಜೊತೆಗೆ ಸ್ಥಳೀಯ ತಿನಿಸುಗಳು, ಸಮುದ್ರಾಹಾರ ತಿಂಡಿಗಳು, ಬಾಳೆಹಣ್ಣು ಚಿಪ್ಸ್, ತೆಂಗಿನಕಾಯಿ ಸಿಹಿತಿಂಡಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.

Continue Reading

ಪ್ರವಾಸ

Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ. ಈ ಎಂಟು ಅದ್ಭುತ ಹಳ್ಳಿಗಳ ಪರಿಚಯ ಇಲ್ಲಿದೆ.

VISTARANEWS.COM


on

Summer Tour
Koo

ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್‌ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್‌ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.

Sikkim

ಝುಲುಕ್, ಸಿಕ್ಕಿಂ

ಪೂರ್ವ ಸಿಕ್ಕಿಂನ ಝುಲುಕ್‌ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್‌ ರೂಟ್‌ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.

Chitkool, Himachal Pradesh

ಚಿತ್ಕೂಲ್‌, ಹಿಮಾಚಲ ಪ್ರದೇಶ

ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್‌. ಕಿನೌರ್‌ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.

Naggar, Himachal Pradesh

ನಗ್ಗರ್‌, ಹಿಮಾಚಲ ಪ್ರದೇಶ

ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್‌ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.

Pelling, Sikkim

ಪೆಲ್ಲಿಂಗ್‌, ಸಿಕ್ಕಿಂ

ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್‌ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್‌ ಬಹಳ ಇಷ್ಟವಾಗಬಹುದು.

Malana, Himachal Pradesh

ಮಲಾನಾ, ಹಿಮಾಚಲ ಪ್ರದೇಶ

ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್‌ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

Zero, Arunachal Pradesh

ಝೀರೋ, ಅರುಣಾಚಲ ಪ್ರದೇಶ

ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.

Mawlynnong, Meghalaya

ಮಾವ್ಲಿನಾಂಗ್‌, ಮೇಘಾಲಯ

ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading

ಪ್ರವಾಸ

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Porbandar Tour: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿರುವ ಪೋರ್ ಬಂದರ್ ಇತಿಹಾಸದ ಹಿನ್ನಲೆಯಿರುವ ಸ್ಥಳವಾಗಿದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ ಭೇಟಿ ನೀಡಿ. ಪೋರ್ ಬಂದರ್ ನ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Porbandar Tour
Koo

ಗುಜರಾತ್: ಕರಾವಳಿ ನಗರವಾದ ಪೋರ್ ಬಂದರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿದೆ. ಇತಿಹಾಸದ ಹಿನ್ನೆಲೆಯಿರುವ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ (Porbandar Tour) ಭೇಟಿ ನೀಡಿ. ಇಲ್ಲಿನ ಅದ್ಭುತ ಸ್ಥಳಗಳನ್ನು ಆನಂದಿಸಿ.

Porbandar Tour

ಕೀರ್ತಿ ಮಂದಿರ

ಇದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವಾಗಿದೆ. ಇದು ಪೋರ್ ಬಂದರಿನಲ್ಲಿದೆ. ಇದು ಪೋರ್ ಬಂದರಿನ ಮೊದಲ ಹೆಗ್ಗುರುತಾಗಿದೆ. ಗಾಂಧೀಜಿಯವರ ಸೋದರಳಿಯನಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕದಲ್ಲಿ ಗಾಂಧಿಯವರ ಅಸಾಧಾರಣ ಜೀವನವನ್ನು ವಿವರಿಸುವ ವಸ್ತು ಸಂಗ್ರಹಾಲಯ, ದೇವಾಲಯ, ಉದ್ಯಾನಗಳನ್ನು ಹೊಂದಿದೆ.

Porbandar Tour

ಪೋರ್ ಬಂದರ್ ಬೀಚ್

ವಿಶ್ರಾಂತಿ ಪಡೆಯಲು ಬಯಸುವವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ಚಿನ್ನದಂತೆ ಹೊಳೆಯುವ ಮರಳುಗಳು, ಸೌಮ್ಯವಾದ ಅಲೆಗಳು ಮತ್ತು ಕಣ್ಮನ ಸೆಳೆಯುವ ಸೂರ್ಯೋದಯವನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ನಡೆದಾಡುವ ಮೂಲಕ ತಾಜಾ ಗಾಳಿಯನ್ನು ಉಸಿರಾಡಬಹುದು. ಹಾಗೇ ಇಲ್ಲಿ ಮೀನುಗಾರರು, ಒಂಟೆಗಳು ಸುತ್ತಾಡುತ್ತಿರುತ್ತದೆ. ಡೌನ್ ಚೌಪಟ್ಟಿರಸ್ತೆಯ ಮಾದರಿ ಖಾದ್ಯಗಳಾದ ಮೆಥಿ ಗೋಟಾ ಬಜ್ಜಿಗಳನ್ನು ಬಣ್ಣ ಬಣ್ಣದ ಬಲ್ಪ್ ಗಳಿಂದ ಅಲಂಕರಿಸಿದ ಸ್ಟಾಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Porbandar Tour

ಸುದಾಮ ಮಂದಿರ

ಪೋರ್ ಬಂದರಿನ ಸಿಟಿ ಸೆಂಟರ್ ನಲ್ಲಿ ಕಂಡುಬರುವ ಈ ಪುರಾತನ ದೇವಾಲಯದಲ್ಲಿ ಹಿಂದೂ ದೇವರಾದ ಕೃಷ್ಣನ ಜೊತೆ ಆತನ ಬಾಲ್ಯದ ಸ್ನೇಹಿತ ಸುದಾಮನನ್ನು ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಕೃಷ್ಣ ಆತನ ಪತ್ನಿ ರುಕ್ಮಿಣಿ , ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮನನ್ನು ಗೌರವಿಸಲಾಗುತ್ತದೆ. ಗುರುಕುಲದಲ್ಲಿ ಕೃಷ್ಣ –ಸುದಾಮರು ಒಟ್ಟಿಗೆ ಕಳೆದ ಸಮಯವನ್ನು ಚಿತ್ರಿಸುವ ಭಿತ್ತಿ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

Porbandar Tour

ಪೋರ್ ಬಂದರ್ ಚೌಪಟ್ಟಿ

ರೋಮಾಂಚಕವಾದ ಚೌಪಟ್ಟಿ ಬೀಚ್ ನಲ್ಲಿ ವಾಯು ವಿಹಾರ ಮಾಡುವಾಗ ಸ್ಥಳೀಯ ಖಾದ್ಯಗಳ ರುಚಿ ಮತ್ತು ಹಬ್ಬದ ಸಂಭ್ರಮವನ್ನು ನೀವು ಆನಂದಿಸದೆ ಇರಲಾಗುವುದಿಲ್ಲ. ದೀಪಗಳಿಂದ ಅಲಂಕಾರಗೊಂಡ ಮಳಿಗೆಗಳಲ್ಲಿ ಧೋಕ್ಲಾಗಳು, ಖಾಂಡ್ವಿಗಳು ಮತ್ತು ಹುರಿದ ಮಸಾಲೆಯುಕ್ತ ತಿಂಡಿಗಳಂತಹ ಪ್ರಮುಖ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚೌಪಟ್ಟಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಗಾಳಿಪಟವನ್ನು ಹಾರಿಸುವ ಉತ್ಸವ ನಡೆಯುತ್ತದೆ.

ತಾರಾ ಮಂದಿರ ತಾರಾಲಯ

1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಈ ತಾರಾಲಯವನ್ನು ಉದ್ಘಾಟಿಸಿದರು. ಇಲ್ಲಿ ಖಗೋಳಶಾಸ್ತ್ರ, ಪ್ರದರ್ಶನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಗ್ರಹಣದಿಂದ ನಕ್ಷತ್ರ ಪುಂಜಗಳವರೆಗೆ ಕಾಸ್ಮಿಕ್ ವಿದ್ಯಮಾನಗಳನ್ನು ವಿವರಿಸುವ ಪ್ರದರ್ಶನಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

Porbandar Tour

ಭಾರತ್ ಮಂದಿರ

19ನೇ ಶತಮಾನದ ಈ ದೇವಾಲಯವು ಭಾರತವನ್ನು ಗೌರವಿಸುತ್ತದೆ. ಪುರಾಣಗಳಲ್ಲಿ ಭಗವಾನ್ ರಾಮನ ಸದ್ಗುಣಗಳನ್ನು ಕಂಡು ಹಿಂದೂಗಳು ರಾಮನನ್ನು ಆದರ್ಶವಾಗಿ ಕಾಣುತ್ತಾರೆ. ಹಾಗಾಗಿ ಈ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇಲ್ಲಿ ಸ್ವರ್ಣ ಲೇಪಿತ ಗುಮ್ಮಟಗಳು, ಲ್ಯಾಟಿಸ್ಡ್ ಗೋಡೆಗಳು ಮತ್ತು ಸ್ತಂಭದ ಮಂಟಪ ಸಭಾಂಗಣಗಳು ದೂರ ದೂರದಿಂದ ಭಕ್ತರನ್ನು ಆಕರ್ಷಿಸುತ್ತದೆ.

Porbandar Tour

ನೆಹರು ತಾರಾಲಯ

ಖಗೋಳಶಾಸ್ತ್ರದ ಬಗ್ಗೆ ಮನೋರಂಜನೆಯನ್ನು ನೀಡುವಂತಹ ಪೋರ್ ಬಂದರ್ ನ ಈ ತಾರಾಲಯ ನಕ್ಷತ್ರಾಕಾರದಲ್ಲಿದೆ. ಇಲ್ಲಿ ಭೂಮಿಯ ಆಚೆಗಿನ ರಹಸ್ಯಗಳನ್ನು ಅನ್ವೇಷಿಸುವ ಹೈಟೆಕ್ ಪ್ರದರ್ಶನಗಳನ್ನು ನೀಡುತ್ತದೆ. ಆಧುನಿಕ ಗ್ಯಾಜೆಟ್ರಿಯೊಂದಿಗೆ ಸುಸಜ್ಜಿತವಾದ 40 ಅಡಿಗಳ ಅರ್ಧಗೋಳದ ಥಿಯೇಟರ್ ಒಳಗೆ ಡಿಜಿಟೈಸ್ಡ್ ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಗಳು ಪ್ರಜ್ವಲಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Porbandar Tour

ಪೋರ್ ಬಂದರ್ ಪಕ್ಷಿಧಾಮ

ಅಪರೂಪದ ಜಲವಾಸಿಗಳನ್ನೊಳಗೊಂಡ ಈ ಅಭಯಾರಣ್ಯಕ್ಕೆ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು. ಪೋರ್ ಬಂದರ್ ನಿಂದ ಕೇವಲ 2ಕಿಮೀ ದೂರದಲ್ಲಿರುವ ಇದು ಮ್ಯಾಂಗ್ರೋವ್ ಗಳನ್ನು ರಕ್ಷಣೆ ನೀಡುತ್ತದೆ ಮತ್ತು ವರ್ಷದಲ್ಲಿ ಸುಮಾರು 200 ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆ. ಇಲ್ಲಿ ಸುಂದರವಾದ ಭೂದೃಶ್ಯಗಳು ಮತ್ತು ತಾಜಾ ಗಾಳಿಯು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

Continue Reading
Advertisement
Char Dham Yatra
ದೇಶ19 seconds ago

Char Dham Yatra: ಇಂದಿನಿಂದ ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭ

hd revanna jailed 2
ಕ್ರೈಂ13 mins ago

HD Revanna Jailed: ಇನ್ನು ಮೂರು ದಿನ ಎಚ್‌ಡಿ ರೇವಣ್ಣ ಭೇಟಿ ಯಾರಿಗೂ ಇಲ್ಲ

Aravind Kejriwal
ದೇಶ45 mins ago

Arvind Kejriwal: ಕೇಜ್ರಿವಾಲ್‌ ಜಾಮೀನು ಅರ್ಜಿ ಇಂದು ವಿಚಾರಣೆ; ದಿಲ್ಲಿ ಸಿಎಂಗೆ ಜೈಲಾ…? ಬೇಲಾ?

drowned in tank jindal bellary
ಕ್ರೈಂ54 mins ago

Drowned in Tank: ಜಿಂದಾಲ್‌ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳ ಸಾವು

IPL 2024
ಐಪಿಎಲ್ 202457 mins ago

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

Virat Kohli
ಐಪಿಎಲ್ 20241 hour ago

Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Akshaya Tritiya 2024
ಪ್ರಮುಖ ಸುದ್ದಿ1 hour ago

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024
ಧಾರ್ಮಿಕ1 hour ago

Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

America v/s Russia
ವಿದೇಶ2 hours ago

America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

Actor Prabhas
ಸಿನಿಮಾ2 hours ago

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ11 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ13 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ13 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ20 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ20 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ21 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು21 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ21 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು23 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌