Site icon Vistara News

ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ! ವಿಚಿತ್ರ ಪೂಜೆಗೆ ಜನತೆ ಶಾಕ್, ತಪ್ಪಾಗಿದೆ ಎಂದ ಅರ್ಚಕ

Hanuman Chalisa: Significance and importance Of Reciting Hanuman Chalisa in kannada

ದಾವಣಗೆರೆ:‌ ಆಂಜನೇಯ ದೇವರ ಮೂರ್ತಿಯ ತಲೆ ಮೇಲೆ ಕಾಲಿಟ್ಟು ಅರ್ಚಕರೊಬ್ಬರು ಪೂಜೆ ಮಾಡಿದ ವಿಡಿಯೋ ವೈರಲ್ ಆಗಿದೆ. ಭಕ್ತಾದಿಗಳು ಈ ನಂಬಲಸಾಧ್ಯ ವಿಡಿಯೋ ನೋಡಿ ಶಾಕ್‌ ಆಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬಳೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ವಿಗ್ರಹದ ಮೇಲೆ ಕಾಲಿಟ್ಟು ಅಭಿಷೇಕ ಮಾಡಿ ಮಹೇಶ್ವರಯ್ಯ ಎಂಬ ಅರ್ಚಕರು ವಿಚಿತ್ರ ಪೂಜಾ ವಿಧಾನ ಅನುಸರಿಸಿದ್ದಾರೆ.

ಇದೇ ದೇವಾಲಯದ ಅರ್ಚಕರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಂಜನೇಯ ಸ್ವಾಮಿ ದೇವರಿಗೆ ಶಾಂತಿ ಮಾಡಿಸಲು ಪೂಜೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಪೂಜೆಯೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಈ ಬಗ್ಗೆ ವಿಚಾರಿಸಿದಾಗ ವಿಸ್ತಾರ ನ್ಯೂಸ್‌ಗೆ ಅರ್ಚಕ ಮಹೇಶ್ವರಯ್ಯ ಪ್ರತಿಕ್ರಿಯೆ ನೀಡಿದ್ದು, ಇದು ಊರಿನ ಜನರ ಇಚ್ಛೆಯಂತೆ ನಡೆದಿದೆ ಎಂದಿದ್ದಾರೆ. ʼʼಅಲ್ಲಿನ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಂತ ನನ್ನನ್ನು ಕರೆಸಿ ಅಭಿಷೇಕ ಮಾಡಿಸಿದರು. ಸಾಮಾನ್ಯವಾಗಿ ಎಳನೀರು, ತುಪ್ಪ ಹಾಕಿ ಅಭಿಷೇಕ ಮಾಡುತ್ತೇವೆ. ಆದರೆ, ಊರಿನ ಜನ ಬಲವಂತ ಮಾಡಿ ಹಳೆಯ ಪದ್ಧತಿಯಂತೆ ಪೂಜೆ ಮಾಡಿಸಿದರು. ನನ್ನದು ತಪ್ಪಾಗಿದೆ, ನನ್ನ ತಪ್ಪಿ‌ನ ಅರಿವಾಗಿದೆʼʼ ಎಂದು ಮಹೇಶ್ವರಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ | ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಮಜ್ಜನ! ಏನಿದು ವಿಚಿತ್ರ ಆಚರಣೆ?

Exit mobile version