Site icon Vistara News

Express Highway : ಹೆದ್ದಾರಿ ಪ್ರಯಾಣಿಕರ ಸುರಕ್ಷತೆಗೆ ಬಂದಿದೆ ಹೊಸ ಮೊಬೈಲ್​ ಆ್ಯಪ್​; ಏನೇನಿದೆ ಅದರಲ್ಲಿ?

Rajmargyatra

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ (Express Highway) ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿರುವಂತೆಯೇ ಅದರ ಬಳಕೆದಾರರ ಪ್ರಮಾಣವೂ ಅಧಿಕವಾಗಿದೆ. ಹೀಗಾಗಿ ಹೆದ್ದಾರಿ ಬಳಕೆದಾರರ ಸವಾರಿ ಅನುಭವವನ್ನು ಹೆಚ್ಚಿಸಲು ಮತ್ತು ಎಕ್ಸ್​ಪ್ರೆಸ್​ವೇಗಳಲ್ಲಿ ತಡೆರಹಿತ ಪ್ರಯಾಣದ ಸೌಕರ್ಯ ಒದಗಿಸಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ರಾಜಮಾರ್ಗಯಾತ್ರಾ (‘Rajmargyatra) ಎಂಬ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದೆ. ಈ ನಾಗರಿಕ ಕೇಂದ್ರಿತ ಏಕೀಕೃತ ಮೊಬೈಲ್ ಅಪ್ಲಿಕೇಶನ್ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಸಮಗ್ರ ಮಾಹಿತಿ ಮತ್ತು ಪರಿಹಾರ ಒದಗಿಸುವ ಗುರಿಯನ್ನು ಹೊಂದಿದೆ.

ಹೆದ್ದಾರಿಗಳ ಪ್ರಯಾಣದ ವೇಳೆ ದೂರುಗಳು ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಈ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ. ಮೊಬೈಲ್ ಬಳಕೆದಾರರಿಂದ ನೋಂದಾಯಿತ ದೂರನ್ನು ಹತ್ತಿರದ ಟೋಲ್ ಪ್ಲಾಜಾದ ಸಂಬಂಧಿತ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ. ಈ ದೂರುಗಳನ್ನು ಟ್ರ್ಯಾಕ್ ಮಾಡುವ ಮತ್ತು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಎಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು?

ರಾಜಮಾರ್ಗಯಾತ್ರಾ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬಹುದು. ಪಿಐಬಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಹೊಸ ಅಪ್ಲಿಕೇಶನ್​ನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

ಆ್ಯಂಡ್ರಾಯ್ಡ್​ ಮೊಬೈಲ್​ಗೆ ಡೌನ್​ಲೋಡ್​ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆ್ಯಪಲ್​ ಮೊಬೈಲ್​​ಗಳಿಗೆ ಆ್ಯಪ್​ ಡೌನ್​ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸಮಗ್ರ ಹೆದ್ದಾರಿ ಮಾಹಿತಿ: ‘ರಾಜಮಾರ್ಗಯಾತ್ರಾ’ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅಗತ್ಯ ಮಾಹಿತಿಯ ಕಣಜವಾಗಿದೆ. ರಿಯಲ್​ ಟೈಮ್​ ಹವಾಮಾನ ಪರಿಸ್ಥಿತಿಗಳು, ಸಮಯೋಚಿತ ಪ್ರಸಾರ ಅಧಿಸೂಚನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳು, ಪೆಟ್ರೋಲ್ ಪಂಪ್​​ಗಳು, ಆಸ್ಪತ್ರೆಗಳು, ಹೋಟೆಲ್​ಗಳು ಮತ್ತು ಇತರ ಅಗತ್ಯ ಸೇವೆಗಳ ಬಗ್ಗೆ ವಿವರ ನೀಡುತ್ತದೆ.

ಇದನ್ನೂ ಓದಿ : Bangalore-Mysore Expressway: ಮರಣ ಮಾರ್ಗವಾಗಿದ್ದ ಹೆದ್ದಾರಿ ಈಗ ಸೇಫ್‌ ; ಅಪಘಾತಗಳ ಸಂಖ್ಯೆ ಭಾರಿ ಇಳಿಕೆ

ದೂರು ಮತ್ತು ಪರಿಹಾರ: ಅಪ್ಲಿಕೇಶನ್ ಅಂತರ್ನಿರ್ಮಿತ ದೂರು ಪರಿಹಾರ ಕಾರ್ಯವಿಧಾನ ಹೊಂದಿದೆ. ಸಾರ್ವಜನಿಕರು ಹೆದ್ದಾರಿ ಸಂಬಂಧಿತ ಸಮಸ್ಯೆಗಳನ್ನು ಸುಲಭವಾಗಿ ಆ್ಯಪ್​ ಮೂಲಕ ವರದಿ ಮಾಡಬಹುದು. ಜಿಯೋ ಟ್ಯಾಗ್ ವಿಡಿಯೊಗಳು ಅಥವಾ ಫೋಟೋಗಳನ್ನು ಪೋಸ್ಟ್​ ಮಾಡಬಹುದು. ದೂರುಗಳನ್ನು ಕಾಲಮಿತಿಯೊಳಗೆ ನಿರ್ವಹಿಸುವ ಮತ್ತು ವಿಳಂಬವಾದರೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯಿದೆ. ವ್ಯವಸ್ಥೆ ಪಾರದರ್ಶಕವಾಗಿದ್ದು. ಬಳಕೆದಾರರು ತಮ್ಮ ದೂರುಗಳನ್ನು ಟ್ರ್ಯಾಕ್ ಮಾಡಬಹುದು.

ಫಾಸ್ಟ್​​ಟ್ಯಾಗ್​ಗಳ ಸೇವೆಗಳು: ‘ರಾಜಮಾರ್ಗಯಾತ್ರಾ ತನ್ನ ಸೇವೆಗಳನ್ನು ವಿವಿಧ ಬ್ಯಾಂಕ್ ಪೋರ್ಟಲ್​ನೊಂದಿಗೆ ಲಿಂಕ್ ಮಾಡಿಕೊಂಡಿದೆ. ಇದು ಬಳಕೆದಾರರಿಗೆ ತಮ್ಮ ಫಾಸ್ಟ್​ಟ್ಯಾಗ್​ಗಳನ್ನು ರೀಚಾರ್ಜ್ ಮಾಡಲು, ಮಾಸಿಕ ಪಾಸ್​ಗಳನ್ನು ಪಡೆಯಲು ಮತ್ತು ಇತರ ಫಾಸ್ಟ್​​ಟ್ಯಾಗ್​ ಸಂಬಂಧಿತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ನೆರವು ನೀಡುತ್ತದೆ.

ಜವಾಬ್ದಾರಿಯುತ ನಡವಳಿಕೆಗೆ ಪ್ರೇರಣೆ: ಸುರಕ್ಷಿತ ಚಾಲನಾ ನಡವಳಿಕೆಯನ್ನು ಉತ್ತೇಜಿಸಲು ಅತಿವೇಗದಲ್ಲಿ ವಾಹನ ಚಲಾಯಿಸವ ವೇಳೆ ಧ್ವನಿ ಎಚ್ಚರಿಕೆ ನೀಡುತ್ತದೆ.

ರಿಯಲ್​ಟೈಮ್​​ ಅಪ್​ಡೇಟ್​: ಹವಾಮಾನ, ಹತ್ತಿರದ ಟೋಲ್ ಪ್ಲಾಜಾಗಳು, ಪೆಟ್ರೋಲ್ ಕೇಂದ್ರಗಳು, ಆಸ್ಪತ್ರೆಗಳು, ಹೋಟೆಲ್​​ಗಳು ಮತ್ತು ಇತರ ಪ್ರಮುಖ ಸೇವೆಗಳ ಬಗ್ಗೆ ನೈಜ ಸಮಯದ (ರಿಯಲ್​ಟೈಮ್​ ಅಪ್​ಡೇಟ್​) ನೀಡುತ್ತದೆ.

ದೂರುಗಳ ಪರಿಹಾರ ಹೇಗೆ?

Exit mobile version