Site icon Vistara News

Voter Data | ಮತದಾರರ ಪಟ್ಟಿಯಲ್ಲಿ ಅಕ್ರಮ ಕುರಿತು ಸಿಎಂ ಬೊಮ್ಮಾಯಿ ಸ್ಪಷ್ಟನೆ; ಅವರು ಹೇಳಿದ್ದೇನು?

CM basavaraj bommai tries to avoid escalation in rowdy issue

ಬೆಂಗಳೂರು : ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿನ ಹೆಸರು ಅಳಿಸಿ ಹಾಕಲಾದ ಪ್ರಕರಣದ ಕುರಿತು ಸಿಎಂ ಬೊಮ್ಮಾಯಿ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್‌ ಮಾಡುತ್ತಿರುವ ಆರೋಪಗಳು ಸುಳ್ಳು ಎಂಬುದಾಗಿ ಹೇಳಿದ್ದಾರೆ. ಈ ಕುರಿತು ಕೆಲವೊಂದು ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

ಚಿಲುಮೆ ಎಂಬ ಸಂಸ್ಥೆಯು ಮತದಾರರ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಯನ್ನು ಪಡೆದುಕೊಂಡಿತಲ್ಲದೆ, ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮತದಾರರ ಹೆಸರನ್ನು ಅಳಿಸಿ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌, ಆಡಳಿತಾರೂಡ ಬಿಜೆಪಿ ಸರಕಾರದ ಮೇಲೆ ಅಕ್ರಮದ ಆರೋಪ ಮಾಡಿತ್ತು. ಈ ಬಗ್ಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದು, ಅವರು ಬಿಡುಗಡೆ ಮಾಡಿರುವ ಪತ್ರದಲ್ಲಿರುವ ವಿವರಣೆ ಈ ಕೆಳಗಿನಂತಿದೆ.

ಬಿ.ಬಿ.ಎಂ.ಪಿ ಮತದಾರರ ಪರಿಷ್ಕರಣಿ ಕುರಿತು ಸತ್ಯಾಂಶಗಳು

೧) ಕಾಂಗ್ರೆಸ್ ಮತದಾರರನ್ನು ಗುರಿಯಾಗಿ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ.

೨ ) ಚಿಲುಮೆ ಬಿಜೆಪಿ ಅನುಮತಿ ನೀಡಿದ ಸಂಸ್ಥೆ

೩) ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳನ್ನು ಗುರಿಯಾಗಿಸಿ ಹೆಚ್ಚು ಮತದಾರರನ್ನು ಕೈಬಿಡಲಾಗುತ್ತಿದೆ

೪) ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನೀಡಲಾಗಿರುತ್ತದೆ.

೫) ಬೆಂಗಳೂರಿನಲ್ಲಿ ೨೭ ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಮತದಾರರ ಪರಿಷ್ಕರಣೆಗೆ ಬಿ.ಬಿ.ಎಂ.ಪಿ ತೆಗೆದುಕೊಂಡ ಕ್ರಮ

  1. ಚಿಲುಮೆ ಸಂಸ್ಥೆಗೆ ನೀಡಿದ ಅನುಮತಿ ಅನುಮತಿ ರದ್ದತಿ: 02.11.2022
  2. ಮುಖ್ಯ ಚುನಾವಣಾಧಿಕಾರಿಗೆ ತಿಳುವಳಿಕೆ: 04.11.2022
  3. BLO ಗುರುತಿನ ಚೀಟಿ ಪ್ರಕರಣದ ದೂರು: 10.11.2022
  4. Mahadevapura ERO ವತಿಯಿಂದ ಲೋಕೇಶರವರ ಮೇಲೆ FIR: 15.11.2022
  5. ಜನರಿಗೆ ಎಚ್ಚರಿಕೆವಹಿಸಲು ಪತ್ರಿಕಾ ಪ್ರಕಟಣೆ 16.11.2022
  6. ಜಿಲ್ಲಾಧಿಕಾರಿ ಹಾಗೂ ಅಪರ ಚುನಾವಣಾಧಿಕಾರಿಯವರ ವರದಿ: 17.11.2022
  7. ಚಿಲುಮೆ ಸಂಸ್ಥೆ ಮೇಲೆ FIR: 17.11.2022

ಬಿ.ಬಿ.ಎಂ.ಪಿ ಸ್ವಯಂಪ್ರೇರಿತವಾಗಿ, ಚಿಲುಮೆ ಸಂಸ್ಥೆಗೆ ನೀಡಿದ ಆದೇಶ ರದ್ದತಿ ಹಾಗೂ ತೆಗೆದುಕೊಂಡ ಕ್ರಮ ಮತ್ತು ಪತ್ರಿಕಾ ಪ್ರಕಟಣೆ ನೋಡಿದ ಬಳಿಕ ಕಾಂಗ್ರೆಸ್‌ ಪತ್ರಿಕಾ ಗೋಷ್ಠಿ ಮಾಡಿರುತ್ತದೆ.

Exit mobile version