ಬೆಂಗಳೂರು: ತಮ್ಮ ಬಳಿಗೆ ಒಬ್ಬ ಏಜೆಂಟ್ ಬಂದಿದ್ದರು ಎಂದು ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ. ಹಿಂದೆ ಸಿಎಂ ಕುರ್ಚಿ ಖರೀದಿ ಬಗ್ಗೆ ಯತ್ನಾಳ್ ಮಾತನಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ (BJP state president) ಸ್ಥಾನಕ್ಕೆ, ವಿಪಕ್ಷ ಸ್ಥಾನಕ್ಕೆ (Opposition Leader) ಎಷ್ಟು ಫಿಕ್ಸ್ ಆಗಿದೆ? ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಮೇಲುಗೈ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದರೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಏನು ಮಾಡಬೇಕು? ಎಲ್ಲದಕ್ಕೂ ಉತ್ತರ ಕೇಶವಕೃಪ, ಬಿಜೆಪಿ ಕಚೇರಿಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಾನು ಮಾರಾಟಕ್ಕಿಲ್ಲ ಎಂದು ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ನಾಯಕರು ಅವರ ಪಕ್ಷದ ಶಾಸಕರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಿ ಕಾಂಗ್ರೆಸ್ಗೆ ಉತ್ತರ ಕೊಡುವುದು ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: Yathindra Siddaramaiah : ‘ಅಪ್ಪಾ ಜಿ’ ಪೋಸ್ಟರ್ ಬಿಟ್ಟು ಕಾಲೆಳೆದ ಬಿಜೆಪಿ!
ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಇದು ಪಾರ್ಟ್ ಟೂ ಆಗಿದೆ. ಪಾರ್ಟ್ ಒನ್ ಬಿ.ಎಲ್. ಸಂತೋಷ ಅವರದ್ದು. ಪಾರ್ಟ್ ಟೂ ಇವರದ್ದಾಗಿದೆ. ಮಂಡ್ಯ ಉಸ್ತುವಾರಿ ಆಗಿದ್ದಾಗಾ ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸಿದ್ದರು. ಈಗ ಬಿಜೆಪಿ ಕಚೇರಿಯಲ್ಲಿ ಗೋ ಬ್ಯಾಕ್ ಎಂದು ಪೋಸ್ಟರ್ ಅಂಟಿಸಿದರೆ ಅಚ್ಚರಿ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಶೋಕ್ ಆಯ್ಕೆ ಬಿಜೆಪಿಯವರಿಗೇ ಖುಷಿಯಾಗಿಲ್ಲ
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ಆರ್. ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಆರು ತಿಂಗಳ ಬಳಿಕ ಪ್ರಜಾಪ್ರಭುತ್ವಕ್ಕೆ ಗೌರವ ತಂದಿದ್ದಾರೆ. ಆರ್. ಅಶೋಕ್ ಅವರು ಬಿಜೆಪಿಯಲ್ಲಿ ಬೆಳೆಯಬೇಕು, ವಿಪಕ್ಷ ನಾಯಕರಾಗಿಯೇ ಉಳಿಯಬೇಕು ಎಂಬುದು ನಮ್ಮ ಆಸೆ. ವರ್ಗಾವಣೆ ಅಂಗಡಿ ತೆಗೆದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ವಿಪಕ್ಷ ನಾಯಕ ಆಯ್ಕೆಯಿಂದ ಕಾಂಗ್ರೆಸ್ಗೆ ಖುಷಿಯಾಗಿದೆ. ಆದರೆ, ಬಿಜೆಪಿಯವರಿಗೇ ಖುಷಿಯಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ದೇವೇಗೌಡರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಮಾಡುತ್ತಾ ಇರಲಿಲ್ಲವಾ?
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದೆಲ್ಲ ಕರೆಂಟ್ ಕದ್ದ ವಿಚಾರವನ್ನು ಡೈವರ್ಟ್ ಮಾಡಲು ಮಾಡುತ್ತಾ ಇರೋದು. ಅವರಿಗೆ ಮುಜುಗರ ಆಗಿದೆ. ತಪ್ಪು ಆಗಿದೆ ಅಂತಾ ದಂಡ ಕಟ್ಟಿದ್ದಾರೆ. ಅದರ ಗಮನವನ್ನು ಬೇರೆಡೆ ತಿರುಗಿಸಲು ಈ ರೀತಿಯ ಆರೋಪಗಳನ್ನು ಮಾಡುತ್ತಾ ಇದ್ದಾರೆ. ಒಬ್ಬ ಮಾಜಿ ಶಾಸಕ ವರ್ಗಾವಣೆ ವಿಚಾರದಲ್ಲಿ ರೆಕಮಂಡ್ ಮಾಡಿದರೆ ತಪ್ಪೇನು? ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಮಾಡುತ್ತಾ ಇರಲಿಲ್ಲವಾ? ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಖಿಲ್ ಮಾಡಿರಲಿಲ್ಲವಾ? ಯತೀಂದ್ರ ಅವರಾದರೂ ಒಬ್ಬ ಮಾಜಿ ಶಾಸಕರಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇವರಿಬ್ಬರೂ ಏನೂ ಆಗಿರದೇ ಇದ್ದಾಗ ಈ ಕೆಲಸಗಳನ್ನು ಮಾಡಿರಲಿಲ್ಲವೇ? ಕುಮಾರಸ್ವಾಮಿ ಯತೀಂದ್ರ ಕಡೆ ಕೊಡುವಷ್ಟು ಗಮನವನ್ನು ತಮ್ಮ ಶಾಸಕರ ಕಡೆ ಕೊಡಲಿ. ಕಡೇ ಪಕ್ಷ ಅವರ ಶಾಸಕರಾದ್ರೂ ಜೆಡಿಎಸ್ನಲ್ಲಿ ಉಳಿದುಕೊಳ್ಳುತ್ತಾರೆ ಎಂದು ಹೇಳಿದರು.
ವಿವೇಕಾನಂದ ಅನ್ನೋ ಹೆಸರಿನವರು ಪೊಲೀಸ್ ಇಲಾಖೆಯಲ್ಲಿ ಮಾತ್ರ ಇರೋದಾ? ಶಿಕ್ಷಣ ಇಲಾಖೆಯಲ್ಲಿ ಕೂಡಾ ಅದೇ ಹೆಸರಿನವರು ಇದ್ದಾರೆ. ಕಾಕತಾಳೀಯ ಎಂಬಂತೆ ವಿವೇಕಾನಂದ ಎಂಬುವವರು ವರ್ಗಾವಣೆ ಆಗಿದ್ದಾರೆ. ಯತೀಂದ್ರ ಮಾತನಾಡಿದ್ದೇ ಇವರ ಬಗ್ಗೆ ಅಂದರೆ ಹೇಗೆ? ಕುಮಾರಸ್ವಾಮಿ ಅನ್ನೋ ಹೆಸರೂ ಬಹಳ ಕಾಮನ್. ಕುಮಾರಸ್ವಾಮಿ ಅನ್ನೋ ಹೆಸರಿನವರ ಬಗ್ಗೆ ಮಾತನಾಡಿದರೆ ಅದು ಇದೇ ಕುಮಾರಸ್ವಾಮಿ ಅಂತ ಅರ್ಥನಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಆವಿಷ್ಕಾರ, ಸಂಶೋಧನೆ, ನವೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು
ನಮ್ಮ ಇಲಾಖೆಯ ಯೋಜನೆಯನ್ನು ಘೋಷಣೆ ಮಾಡುತ್ತಾ ಇದ್ದೇವೆ. ಬೆಂಗಳೂರು, ಕರ್ನಾಟಕ ವಿಶ್ವದ ನಾಲ್ಕನೇ ಸ್ಥಾನವನ್ನು ಪಡೆದಿದೆ. ಆವಿಷ್ಕಾರ, ಸಂಶೋಧನೆಯಲ್ಲಿ 8ನೇ ಸ್ಥಾನ ಪಡೆದಿದ್ದೇವೆ. ನಮ್ಮ ರಾಜ್ಯದಲ್ಲಿ 15 ಸಾವಿರ ಸ್ಟಾರ್ಟ್ಅಪ್ಗಳು ಇವೆ. ಫಂಡಿಂಗ್ನಲ್ಲಿ 8 ಸ್ಥಾನದಲ್ಲಿ ಇದ್ದೇವೆ. ನೀತಿ ಆಯೋಗದ ಪ್ರಕಾರ ನಂಬರ್ ಒನ್ ಇದ್ದೇವೆ. ನವೋದ್ಯಮದ ಆವಿಷ್ಕಾರ ವ್ಯವಸ್ಥೆಯಲ್ಲಿ ಇದ್ದೇವೆ. ಕಾಲ್ ಸೆಂಟರ್ನಲ್ಲಿ ಆರಂಭ ಆಗಿ ಈ ಆವಿಷ್ಕಾರ, ಸಂಶೋಧನೆ, ನವೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು. ಸರ್ವಿಸ್, ಪ್ರಾಡಕ್ಟ್, ಮಾರುಕಟ್ಟೆ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಲಾಗುವುದು. ಹೊಸ ಆವಿಷ್ಕಾರಕ್ಕೆ ಅನುದಾನ ನೀಡುತ್ತೇವೆ ಎಂದು ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಲಿವೇಟ್ ಯೋಜನೆಯಲ್ಲಿ 874 ನವೋದ್ಯಮಗಳಿಗೆ 200 ಕೋಟಿ ರೂ. ಅನುದಾನ ನೀಡಿದ್ದೇವೆ. ನವೋದ್ಯಮಗಳಿಗೆ ಉತ್ತೇಜನ ನೀಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಎರಡನೇ ಹಂತದ ನಗರಗಳಿಗೆ ಒತ್ತು ನೀಡಿದ್ದೇವೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಆರಂಭಕ್ಕೆ ಒತ್ತು ನೀಡಲಾಗುತ್ತದೆ. ಶೇ. 30% ಮಹಿಳಾ ಉದ್ಯಮಿಗಳು ಇದ್ದಾರೆ. ಎಲಿವೇಟ್ ಉನ್ನತಿ ಸಹ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇದನ್ನೂ ಓದಿ: Yathindra Siddaramaiah : ʼಹಲೋ ಅಪ್ಪಾʼ ಆ್ಯಪ್ ಡೌನ್ಲೋಡ್ ಮಾಡಿ ಪೇಮೆಂಟ್ ಮಾಡಿ!
ಮೂರು ತಿಂಗಳಲ್ಲಿ ಹೊಸ ಉದ್ಯಮಿಗಳ ಸೃಷ್ಟಿ
ಎಲ್ಲರಿಗೂ ಬೆಂಗಳೂರಿಗೆ ಬರಲು ಆಗಲ್ಲ. ಮೂರು ತಿಂಗಳಲ್ಲಿ ಹೊಸ ಉದ್ಯಮಿಗಳನ್ನು ಸೃಷ್ಟಿ ಮಾಡುತ್ತೇವೆ. 20 ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಹೊಸ ಆವಿಷ್ಕಾರದ ಜತೆ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಸಿಂಗಲ್ ವಿಂಡೋ ಯೋಜನೆ ಅಡಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.