ಬೆಂಗಳೂರು: ವೈಟ್‌ಫೀಲ್ಡ್ ಹಾಗೂ ಹೊಸಕೋಟೆ ಮಾರ್ಗದ ಕನ್ನಮಂಗಳ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಕ್ರೇನ್ ಹರಿದಿದ್ದು (Accident), ಆಕೆ ಮೃತಪಟ್ಟಿದ್ದಾಳೆ. ನೂರ್ ಫಿಜ (19) ಮೃತ ವಿದ್ಯಾರ್ಥಿನಿ. ಅಪಘಾತದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜೈನ್ ಹೆರಿಟೇಜ್ ಕಾಲೇಜ್ ಬಳಿ ವಿದ್ಯಾರ್ಥಿನಿಯು ಮೊಬೈಲ್ ನೋಡುತ್ತ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಳು. ಇದೇ ವೇಳೆ ಹಿಂದಿನಿಂದ ಬಂದ ಕ್ರೇನ್ ತೀವ್ರವಾಗಿ ಗುದ್ದಿದ್ದಲ್ಲದೆ ಆಕೆಯ ಮೇಲೆ ಹರಿದಿದೆ. ಕ್ರೇನ್ ಹರಿದ ರಭಸಕ್ಕೆ ತೀವ್ರ ರಕ್ತಸ್ರಾವ ಉಂಟಾಗಿದೆ. ಅವರನ್ನು ವೈಟ್‌ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿಯ ತಂದೆ ರೆಹಮಾನ್ ಖಾನ್ ಅವರು ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | Road Accident | ರಸ್ತೆ ಅಪಘಾತದಲ್ಲಿ ಪತ್ರಕರ್ತ ಸಾವು