ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಶಿಕ್ಕಲಗಾರ ಸಮುದಾಯದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಲಾಗುತ್ತಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು, ಶಿಕ್ಕಲಿಗಾರ ಸಮುದಾಯದ ಜನ ಸೇರಿ ಹಿಂದು ಮುಖಂಡರು ಪ್ರತಿಭಟನೆ ನಡೆಸಿದರು.
ಶಿಕ್ಕಲಗಾರ ಸಮುದಾಯದ ಸಂಪತ್ ಬಗನಿ ಎಂಬಾತನಿಗೆ ಮತಾಂತರ ಅಗುವಂತೆ ಪತ್ನಿಯ ಒತ್ತಾಯದಿಂದ ಮತಾಂತರದ ರಗಳೆ ಶುರುವಾಗಿದೆ. ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲ ಎಂದು ಪತ್ನಿ ಬೆದರಿಕೆ ಹಾಕಿದ್ದಾರೆ. ಮತಾಂತರಕ್ಕೆ ಪತ್ನಿ ಪಟ್ಟು ಹಿಡಿದಿದ್ದಕ್ಕೆ ಬೇಸತ್ತು ಸಂಪತ್ ಬಗನಿ, ಈ ಬಗ್ಗೆ ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದಾನೆ. ಇದರಿಂದ ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿ, ಮತಾಂತರ ಮಾಡುತ್ತಿರುವವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಠಾಣೆಗೆ ದೂರು ನೀಡಿದ್ದಾರೆ.
ಮತಾಂತರ ವಿಚಾರವಾಗಿ ಹಲವು ಬಾರಿ ದಂಪತಿ ಠಾಣೆ ಮೆಟ್ಟಿಲೇರಿದ್ದರು. ಪ್ರತಿ ಬಾರಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ರಾಜಿ ಮಾಡಿ ಕಳುಹಿಸಿದ್ದರು. ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಶಿಕ್ಕಲಿಗಾರ ಸಮುದಾಯದಿಂದ ರೌಡಿಶೀಟರ್ ಮದನ್ ಬುಗುಡಿ ಸೇರಿ ಹದಿನೈದು ಜನರ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ | Temple desecration | ಮಾಲೂರು ಬಳಿ ಮುನೇಶ್ವರ ದೇವಾಲಯದ ವಿಗ್ರಹ ಭಗ್ನ, ಶಿಲುಬೆ ಆಕಾರ ನಿರ್ಮಾಣ