Site icon Vistara News

Wild Animals Attack: ಮಬ್ಬು ಕತ್ತಲಿನಲ್ಲಿ ಬಂದ ಅಪರಿಚಿತ ಪ್ರಾಣಿ; ಏಕಾಏಕಿ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ

#image_title

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಸುಕಿನ ಜಾವ ಜನರ ಮೇಲೆ ಏಕಾಏಕಿ ಕಾಡುಪ್ರಾಣಿಯೊಂದು (Wild Animals Attack) ದಾಳಿ ನಡೆಸಿರುವ ಘಟನೆ ನಡೆದಿದೆ. ಪ್ರಾಣಿ ದಾಳಿಯಿಂದ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತೋಳ ಇಲ್ಲವೇ ನಾಯಿಯ ರೀತಿ ಇದ್ದ ಪ್ರಾಣಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ. ಬೆಳಗಿನ ಮಬ್ಬು ಕತ್ತಲಿನಲ್ಲಿ ದಾಳಿ ಮಾಡಿದ್ದರಿಂದ ಯಾವ ಪ್ರಾಣಿ ಎಂದು ತಿಳಿದು ಬಂದಿಲ್ಲ.

ಈರಪ್ಲ ಕೋಣನವರ ಎಂಬುವವರಿಗೆ ಸೇರಿದ ಜಾನುವಾರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಅಲ್ಲದೆ, ಈ ಪ್ರಾಣಿ ದಾಳಿಯಿಂದ ಗ್ರಾಮದ ಪಾರಮ್ಮ ನವಲಗುಂದ, ರತ್ನವ್ವ ಬೂದಿಹಾಳ, ಬಸಮ್ಮ ಕದ್ದಿ ಎಂಬುವವರಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Fire Case: ಬಾಲ್ಕನಿಯಲ್ಲಿಟ್ಟಿದ್ದ 2 ಗ್ಯಾಸ್‌ ಸಿಲಿಂಡರ್‌ಗಳು ಸ್ಫೋಟ; ಮನೆಯೊಳಗೆಲ್ಲ‌ ಆವರಿಸಿದ ಬೆಂಕಿ

ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೀಗೆ ಪ್ರಾಣಿ ದಾಳಿ ಮಾಡಿರುವ ಸುದ್ದಿ ಕೇಳಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹೊರಗೆ ಓಡಾಡಲು ಭಯಪಡುವಂತಾಗಿದ್ದು, ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Exit mobile version