ಮೈಸೂರು: ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ (Lok Sabha Election) ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಅವರು, ಪ್ರಧಾನಿ ಮೋದಿ ಆಶೀರ್ವಾದಿಂದ ಸಂಸದನಾಗಿದ್ದೇನೆ. ಚಾಮುಂಡಿಯ ಆಶೀರ್ವಾದ ಇರೋವರೆಗೆ ನಾನು ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಅವರು, ಟಿಕೆಟ್ ಸಿಗುತ್ತಾ ಇಲ್ಲಾ ಎಂದು ಕುತೂಹಲ ಇಟ್ಟುಕೊಳ್ಳಬೇಡಿ.
ದೇವರು ಒಳ್ಳೆಯದು ಮಾಡುತ್ತಾನೆ. ದೇಶಕ್ಕೆ ಮೋದಿ ಬೇಕು, ನಮ್ಮಲ್ಲೂ ಸಣ್ಣ ಮೋದಿ ಬೇಕು ಅಂತ ಜನ ಬಯಸುತ್ತಾರೆ. ನಾನು ಜನರ ನಿರೀಕ್ಷೆಗೆ ತಕ್ಕಂತೆ ಇರಬೇಕಾಗುತ್ತದೆ. ಸಂಸದನಾಗಿ 10 ವರ್ಷ ಪೂರೈಸಿದ್ದೇನೆ. ಕೆಲಸ ಮಾಡಲು 3-4 ದಿನ ಮಾತ್ರ ಬಾಕಿ ಇದೆ, ಮಾರ್ಚ್ 15ರೊಳಗೆ ಚುನಾವಣೆ ಅಧಿಸೂಚನೆ ಜಾರಿ ಆಗುತ್ತದೆ ಎಂದು ತಿಳಿಸಿದ್ದಾರೆ.
ನಾನು ಪತ್ರಕರ್ತನಾಗಿದ್ದಾಗ ನೇರ, ನಿಷ್ಠುರವಾಗಿ ಬರೆಯುತ್ತಿದ್ದೆ. ಅದು ನನ್ನ ಸ್ಟ್ರೆಂಥ್ ಆಗಿತ್ತು. ಬಳಿಕ ನಾನು ರಾಜಕೀಯಕ್ಕೆ ಬಂದೆ. ಕೊಡಗು ಜಿಲ್ಲೆಯ ಜನರ ಡಿಎನ್‌ಎ, ರಕ್ತದಲ್ಲೇ ದೇಶಭಕ್ತಿ ಇದೆ. ಮೈಸೂರಿನಲ್ಲಿ ಜಾತಿ, ರಾಜಕೀಯ ಒಡಕು ಇದೆ. ನಾನು ಮೋದಿ ಹೆಸರಲ್ಲಿ ಚುನಾವಣೆ ಗೆದ್ದೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಗೆಲ್ಲಿಸಬೇಕು ಎನ್ನುತ್ತಾರೆ, ಪಕ್ಷ ಸಂಘಟನೆ ಮಾಡಬೇಕು ಎನ್ನುತ್ತಾರೆ. ಬಳಿಕ ಹೈರಾಣಾಗಿ ಹೋದೆ. ಈ ಹತ್ತು ವರ್ಷದಲ್ಲಿ ಹಲವಾರು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Lok Sabha Election : ರಾಜ್ಯದ 22 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮ; ಯದುವೀರ್, ಸೋಮಣ್ಣ, ಡಾ. ಮಂಜುನಾಥ್ಗೆ ಟಿಕೆಟ್!
ನಾನು ದೇವರಲ್ಲಿ ವೈಯಕ್ತಿಕವಾಗಿ ಏನೂ ಕೇಳಲ್ಲ. ನನಗೆ ರಕ್ಷಣೆ ಕೊಡು, ಜನರ ಕೆಲಸ ಮಾಡಲು ಅವಕಾಶ ಕೊಡು ಅಂತ ಕೇಳುತ್ತೇನೆ ಎಂದು ತಿಳಿಸಿದ್ದಾರೆ.