Site icon Vistara News

Murder Case: ಕೋರ್ಟ್‌ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬ್ಬಲ್ ಮೀಟರ್ ಮೋಹನ ; ತಿರುಪತಿ ರೌಂಡ್ಸ್‌ ಬಳಿಕ ಸರೆಂಡರ್

Rowdy sheeters Wilson Garden Naga and Double Meter Mohan

ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬ್ಬಲ್ ಮೀಟರ್ ಮೋಹನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪ್ರಕರಣ ನಡೆದ ಬಳಿಕ 15 ಜನ ಅರೆಸ್ಟ್ ಆಗಿದ್ದರು. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬ್ಬಲ್ ಮೀಟರ್‌ ಮೋಹನ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ ನೇರವಾಗಿ ಬೆಂಗಳೂರಿಗೆ ಬಂದು ಕೋರ್ಟ್‌ಗೆ ಶರಣಾಗಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.4ರಂದು ರೌಡಿಶೀಟರ್ ಸಿದ್ದಾಪುರ ಮಹೇಶ್‌ ಭೀಕರ ಹತ್ಯೆ ನಡೆದಿತ್ತು. ಜೈಲಿನಿಂದ ಹೊರಬರುತ್ತಲೇ ಮಹೇಶ್‌ನನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಈವರೆಗೆ 15 ಮಂದಿ ಜೈಲು ಸೇರಿದ್ದರು. ಆದರೆ, ತಲೆಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್‌ಗಳಾದ ಎ1 ವಿಲ್ಸನ್ ಗಾರ್ಡನ್ ನಾಗ ಹಾಗೂ ಎ2 ಡಬ್ಬಲ್ ಮೀಟರ್ ಮೋಹನ ಕೂಡ ಈಗ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಇದನ್ನೂ ಓದಿ | Woman dead : ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು

ಪ್ರಕರಣದ ಮೊದಲ ಆರೋಪಿ ಹಾಗೂ ಎರಡನೇ ಆರೋಪಿಯನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆ ಪ್ರಮುಖ ಆರೋಪಿಗಳು ತಾವಾಗಿಯೇ ಬಂದು ಕೋರ್ಟ್‌ಗೆ ಶರಣಾಗಿ ಅಚ್ಚರಿ ಮೂಡಿಸಿದ್ದಾರೆ.

ಪಕ್ಕಾ ಪ್ಲಾನ್ ಮಾಡಿ ವ್ಯವಸ್ಥಿತವಾಗಿ ಸಿದ್ದಾಪುರ ಮಹೇಶನನ್ನು ಕೊಲೆ‌ಮಾಡಲಾಗಿತ್ತು. ಈ ಕೊಲೆ ಇಡೀ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು. ಒಂದು ಕಡೆ ಪರಪ್ಪನ ಆಗ್ರಹಾರ ಪೊಲೀಸರು ಇನ್ನೊಂದು ಕಡೆ ಸಿಸಿಬಿ ಈ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿತ್ತು. ಹೀಗಿರುವಾಗಲೇ ಇಬ್ಬರು ರೌಡಿಶೀಟರ್‌ಗಳು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ | Murder Case: ಖಾಸಗಿ ವಿಡಿಯೊ ವಿಚಾರಕ್ಕೆ ಸ್ನೇಹಿತನ ಕೊಲೆಗೈದು ರುಂಡದೊಂದಿಗೆ ಗ್ರಾಮಕ್ಕೆ ಬಂದ!

7 ದಿನ ಪೊಲೀಸ್‌ ಕಸ್ಟಡಿಗೆ ನೀಡಲು ಆದೇಶ

ಮೊದಲಿಗೆ ಇಬ್ಬರನ್ನೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅದೇಶಿಸಿತ್ತು. ಬಳಿಕ ನಾಗ ಹಾಗೂ ಮೋಹನ ಶರಣಾಗತಿಯಾಗಿರುವ ಸುದ್ದಿ ತಿಳಿದು‌ಕೋರ್ಟ್‌ಗೆ ಆಗಮಿಸಿದ ಪರಪ್ಪನ ಅಗ್ರಹಾರ ಪೊಲೀಸರು ನ್ಯಾಯಾಂಗ ಬಂಧನ ವಜಾ ಮಾಡಿ, ಮಹೇಶ್ ಮರ್ಡರ್ ಪ್ರಕರಣದ ತನಿಖೆಗೆ ಇಬ್ಬರು ಬೇಕಾಗಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ 9ನೇ ಎಸಿಎಂಎಂ ಕೋರ್ಟ್ ಇಬ್ಬರು ಆರೋಪಿಗಳನ್ನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

Exit mobile version