ಬೆಂಗಳೂರು: ಅನಿಮಲ್ ಸಿನಿಮಾ ವೀಕ್ಷಣೆಗೆ ಮಾಲ್ಗೆ ಬಂದಿದ್ದ ಮಹಿಳೆಯೊಬ್ಬರು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ (assault case) ನಡೆಸಿದ್ದಾರೆ. ಮರೆತು ಹೋಗಿದ್ದ ವ್ಯಾಲೆಟ್ ಹಿಂಪಡೆಯುವ ವಿಚಾರಕ್ಕೆ ಶುರುವಾದ ಕಿರಿಕ್ ಠಾಣೆ ಮೆಟ್ಟಿಲೇರಿದೆ. ಗರುಡಾ ಮಾಲ್ನ (garuda mall) ಪಿವಿಆರ್ ಐನಾಕ್ಸ್ ಚಿತ್ರಮಂದಿರದ ಬಳಿ ನಡೆದಿದೆ.
ಅನಿಮಲ್ ಸಿನಿಮಾ ವೀಕ್ಷಿಸಲು ತಡರಾತ್ರಿ 10:30ರ ಸುಮಾರಿಗೆ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಮಹಿಳೆ ಬಂದಿದ್ದರು. ಸಿನಿಮಾ ಮುಗಿಸಿ ಹೊರ ಬಂದಾಗ ಸಿನಿಮಾ ಹಾಲ್ನಲ್ಲೇ ವ್ಯಾಲೆಟ್ ಮರೆತು ಹೋಗಿದ್ದರು. ಹೌಸ್ ಕೀಪಿಂಗ್ ಸಿಬ್ಬಂದಿ ಸ್ವಚ್ಚತಾ ಕಾರ್ಯದ ಸಂದರ್ಭದಲ್ಲಿ ವ್ಯಾಲೆಟ್ ಗಮನಿಸಿದ್ದರು. ಬಳಿಕ ವ್ಯಾಲೆಟ್ ಅನ್ನು ಸೆಕ್ಯೂರಿಟಿಗೆ ಒಪ್ಪಿಸಿದ್ದರು.
ಮರೆತು ಹೋಗಿದ್ದ ವ್ಯಾಲೆಟ್ಗಾಗಿ ಮಹಿಳೆ ಪುನಃ ತಡರಾತ್ರಿ 3 ಗಂಟೆಯ ಸುಮಾರಿಗೆ ಮಾಲ್ ಬಳಿ ಬಂದಿದ್ದಾಳೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ನಿಯಮಾನುಸಾರ ಐಡೆಂಟಿಟಿ ಮಾಹಿತಿ ಕೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಮಹಿಳೆ ಅವಾಚ್ಯವಾಗಿ ನಿಂದಿಸಿ ವ್ಯಾಲೆಟ್ ಕಿತ್ತುಕೊಂಡು, ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾಳೆ. ಕುತ್ತಿಗೆ ಪಟ್ಟಿ ಹಿಡಿದುಕೊಂಡು ಹೊಡೆದಿದ್ದು, ಕಾಲಿನಲ್ಲಿ ಒದ್ದು, ಕಪಾಳಕ್ಕೆ ಬಾರಿಸಿದ್ದಾಳೆ.
ಇದನ್ನೂ ಓದಿ: Theft Case : ನಿನ್ನ ಗಂಡನ ಸಾವು ಎಂದ ಬುಡುಬುಡಿಕೆ; ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು
ಇತ್ತ ಮಾಲ್ ಸಿಬ್ಬಂದಿ ಸಮಾಧಾನಪಡಿಸಲು ಮುಂದಾದರೂ ಮಾತು ಕೇಳದೇ ಮಹಿಳೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ತಪ್ಪಾಯ್ತು ಕ್ಷಮಿಸಿ ಎಂದು ಸಿಬ್ಬಂದಿ ಮಹಿಳೆಯ ಕಾಲಿಗೂ ಬಿದ್ದಿದ್ದಾಳೆ. ಆದರೂ ಬಿಡದೇ ಮಹಿಳೆ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಹಲ್ಲೆ ಮಾಡಿದ್ದಾಳೆ. ಜತೆಗೆ ಇವರಿಬ್ಬರ ಗಲಾಟೆ ಬಿಡಿಸಲು ಬಂದಿದ್ದ ಸಿಬ್ಬಂದಿಗೂ ಅವಾಚ್ಯವಾಗಿ ನಿಂದಿಸಿದ್ದಾಳೆ.
ಇಷ್ಟಲ್ಲ ಘಟನೆ ಬಳಿಕ ಮಾಲ್ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಈ ವೇಳೆ ತನ್ನ ವ್ಯಾಲೆಟ್ನಲ್ಲಿ ಎಂಟು ಸಾವಿರ ರೂ. ಕಳ್ಳತನವಾಗಿದೆ ಎಂದು ದೂರು ನೀಡಿದ್ದಾಳೆ. ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ವ್ಯಾಲೆಟ್ನಲ್ಲಿ ಹಣ ಹಾಗೂ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಹಾಗೂ ಸಿಬ್ಬಂದಿ ಇಬ್ಬರ ಮೇಲೂ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ