Site icon Vistara News

ಲೈಂಗಿಕವಾಗಿ ದುರ್ಬಳಕೆ ಮಾಡಿ, ಭ್ರೂಣ ಹತ್ಯೆ; ನ್ಯಾಯಕ್ಕಾಗಿ ಸಿಎಂಗೆ ಯುವತಿ ಮೊರೆ

foeticide Case

ಬೆಂಗಳೂರು: ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಭ್ರೂಣ ಹತ್ಯೆ ಮಾಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿಯೊಬ್ಬರು ಒತ್ತಾಯಿಸಿದ್ದಾರೆ. ಆರು ವರ್ಷಗಳು ಪ್ರೀತಿಸಿ, ತನ್ನಿಂದ ಸಾಕಷ್ಟು ಹಣವನ್ನು ದೋಚುವ ಮೂಲಕ ವಂಚನೆ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತನಗೆ ಆಗಿರುವ ಮೋಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಪೋಸ್ಟ್‌ ಮಾಡಿದ್ದಾರೆ. ಬಾಲಕೃಷ್ಣ ಸುನೀಲ್‌ ಎಂಬಾತ 6 ವರ್ಷಗಳು ಪ್ರೀತಿಸಿ, ಕಾಮದ ಆಸೆ ತೀರಿಸಿಕೊಳ್ಳಲು ನನ್ನನ್ನು ಗರ್ಭಿಣಿ ಮಾಡಿ, ನಂತರ ಭ್ರೂಣ ಹತ್ಯೆ ಮಾಡಿದ್ದಾನೆ. ಜತೆಗೆ ನನ್ನ ಹಣವನ್ನೂ ದೋಚಿದ್ದಾನೆ. ನನ್ನ ಜತೆ ಬೆಂಗಳೂರಿನಲ್ಲಿ ಸಹಜೀವನ ನಡೆಸಿದ್ದ ವ್ಯಕ್ತಿ, ಈಗ ಬೇರೆ ಹುಡುಗಿಯನ್ನು ಮದುವೆಯಾಗಿ ಸಕಲೇಶಪುರದಲ್ಲಿ ತಲೆಮರೆಸಿಕೊಂಡಿದ್ದಾನೆ. ದಯವಿಟ್ಟು ಆ ವ್ಯಕ್ತಿಯನ್ನು ಹುಡುಕಿ, ಆತನಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಯುವತಿ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ | ನಾದಿನಿ ಜತೆ ಅನೈತಿಕ ಸಂಬಂಧ; ಹೆಂಡ್ತಿಗೆ ಗೊತ್ತಾಗಿದ್ದಕ್ಕೆ ಇಬ್ಬರೂ ನೇಣಿಗೆ ಶರಣು

ಮೋಸ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು ತನಗೆ ನ್ಯಾಯ ಒದಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹಾಸನ ಎಸ್‌ಪಿಗೆ ಫೇಸ್‌ಬುಕ್‌ನಲ್ಲಿ ಟ್ಯಾಗ್‌ ಮಾಡಿ ಯುವತಿ ಮನವಿ ಮಾಡಿದ್ದಾರೆ.

Exit mobile version