ಬೆಂಗಳೂರು: ಪತಿಯ ಅನೈತಿಕ ಸಂಬಂಧಗಳಿಂದ (Illicit relationship) ಬೇಸತ್ತ ಐಬಿಎಂ ಉದ್ಯೋಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನ.10ರಂದು ಈ ಘಟನೆ ನಡೆದಿದ್ದು, ಅದರ ಹಿನ್ನೆಲೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಿದೆ.
ಐಬಿಎಂನಲ್ಲಿ ಉದ್ಯೋಗಿಯಾಗಿರುವ ಶ್ವೇತಾ (27) ನೇಣಿಗೆ ಶರಣಾದವರು. ಪತಿ ಅಭಿಷೇಕ್ ಅವರು ಹೊಂದಿರುವ ಅಕ್ರಮ ಸಂಬಂಧದಿಂದ ಬೇಸತ್ತು ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರು ಆರೋಪಿಸಿದ್ದರು.
ಅಭಿಷೇಕ್ ಮತ್ತು ಶ್ವೇತಾ ಅವರ ವಿವಾಹ 11 ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ನಡೆದಿತ್ತು. ಅಭಿಷೇಕ್ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶ್ವೇತಾ ಐಬಿಎಂ ಕಂಪನಿ ಉದ್ಯೋಗಿಯಾಗಿದ್ದರು.
ಅಭಿಷೇಕ್ ಮದುವೆಗೆ ಮುನ್ನ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಬಳಿಕ ಪರಸ್ಪರ ರಾಜಿ ಪಂಚಾಯಿತಿ ಬಳಿಕ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಭಿಷೇಕ್ ಪುನಃ ತನ್ನ ಹಳೇ ಚಾಳಿ ಮುಂದುವರೆಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅಭಿಷೇಕ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ | Suicide Case | ನೇಣಿಗೆ ಶರಣಾದ ಗೃಹಿಣಿ; ಗಂಡನ ಅನೈತಿಕ ಸಂಬಂಧ, ಕಿರುಕುಳದ ಆರೋಪ