Site icon Vistara News

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಸಹೋದರನ ಮನೆಗೆ ಬಂದು ಕೃತ್ಯ

tumukur pond

ತುಮಕೂರು: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಮಾನ ತುಮಕೂರು ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ತಾಯಿ ಪುಷ್ಪಲತಾ (30) ಮತ್ತು ಮಕ್ಕಳಾದ ಹೇಮಾ (9), ಶೇಖರ್ (7) ಮೃತಪಟ್ಟ ದುರ್ದೈವಿಗಳು.

ತುಮಕೂರು ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಈ ವಿದ್ಯಮಾನ ನಡೆದಿದೆ. ಹೇಮಾ ಅವರು ತಮ್ಮ ಸಹೋದರನ ಮನೆಗೆ ಬಂದವರು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೋದವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೇಮಾ ಅವರನ್ನು ದಶಕದ ಹಿಂದೆ ಮೃತರು ಮಧುಗಿರಿ ತಾಲ್ಲೂಕಿನ ಕವಣದಾಲದ ಗ್ರಾಮದ ದೇವಿಮರದ ಪಾಳ್ಯಕ್ಕೆ ಮದುವೆ ಮಾಡಿಕೊಡಲಾಗಿತ್ತು. ಅವರು ಕೆಲವು ದಿನದ ಹಿಂದೆ ಅರಕೆರೆಗೆ ಗ್ರಾಮದಲ್ಲಿರುವ ತಮ್ಮ ಸಹೋದರನ ಮನೆಗೆ ಬಂದಿದ್ದರು. ಬುಧವಾರ ಸಂಜೆ ಅವರು ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಆದರೆ, ತುಂಬ ಹೊತ್ತು ಬಾರದೆ ಇದ್ದಾಗ ಅಲ್ಲಿ ಇಲ್ಲಿ ಹುಡುಕಲಾಯಿತು. ಈ ನಡುವೆ ಕೆರೆಯ ಸಮೀಪ ಸುಳಿವೊಂದು ಸಿಕ್ಕಿತು. ಪರಿಶೀಲಿಸಿದಾಗ ಹೇಮಾ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಯಿತು.

ಈ ನಡುವೆ, ಮಕ್ಕಳು ಎಲ್ಲಿ? ಅವರು ಬೇರೆಲ್ಲಾದರೂ ಹೋಗಿರಬಹುದಾ ಎಂಬ ಪ್ರಶ್ನೆಯೂ ಮೂಡಿತ್ತು. ಆದರೆ, ತಾಯಿ ಮತ್ತು ಮಕ್ಕಳು ಜತೆಗೆ ಹೋಗುತ್ತಿದ್ದರು ಎಂದು ಯಾರೋ ಹೇಳಿದ್ದರಿಂದ ಮತ್ತೆ ಕೆರೆಯಲ್ಲಿ ಹುಡುಕಾಟ ನಡೆಸಲಾಯಿತು. ಆಗ ಮೂವರ ಮೃತದೇಹಗಳೂ ಸಿಕ್ಕಿದವು. ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಸಿಬ್ಬಂದಿ ಮೂವರ ಶವಗಳನ್ನು ಮೇಲೆತ್ತಲಾಯಿತು. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿಗೆ ಕಾರಣ ಏನು?
ಹೇಮಾ ಅವರಿಗೆ ಮದುವೆಯಾಗಿ ಹತ್ತು ವರ್ಷಗಳೇ ಆಗಿವೆ. ಇಬ್ಬರು ಮುದ್ದಿನ ಮಕ್ಕಳಿದ್ದಾರೆ. ಅವರನ್ನೂ ನೀರಿಗೆ ತಳ್ಳಿ ತಾನೂ ಪ್ರಾಣ ಕಳೆದುಕೊಳ್ಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೇಮಾ ಅವರು ಗಂಡನ ಮನೆಯಲ್ಲಿ ಏನಾದರೂ ತೊಂದರೆ ಅನುಭವಿಸುತ್ತಿದ್ದರೇ, ಮನಸ್ತಾಪ, ಮಾನಸಿಕ ಕಿರುಕುಳಗಳಿಂದ ನೊಂದಿದ್ದರೇ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗಳಿಗೆ ಉತ್ತರಗಳೇನೋ ಸಿಗಬಹುದು. ಆದರೆ, ಕಳೆದುಹೋದ ಜೀವವಂತೂ ಮರಳಿಬರುವುದಿಲ್ಲ. ಪುಟ್ಟ ಮಕ್ಕಳ ಅಂತ್ಯಗೊಂಡ ಬದುಕು ಮತ್ತೆ ಚಿಗುರುವುದಿಲ್ಲ. ಆದರೆ, ಇದು ಮನೆಯಲ್ಲಿ ಕಿರಿಕಿರಿ ಮಾಡುವ, ಮಾನಸಿಕವಾಗಿ ಕೊಲ್ಲುವವರಿಗಾದರೂ ಒಂದು ಪಾಠವಾಗಬೇಕು.

ಇದನ್ನೂ ಓದಿ| ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ, ತಾಯಿ-ಮಗಳ ಆತ್ಮಹತ್ಯೆ

Exit mobile version