Site icon Vistara News

Woman found dead : ವಿಕಲಚೇತನ ಮಹಿಳೆಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

woman found dead malavalli

ಮಂಡ್ಯ: ವಿಕಲಚೇತನ ಮಹಿಳೆಯೊಬ್ಬರ ಮೃತದೇಹದ ಜಮೀನಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ (Woman found dead) ಪತ್ತೆಯಾಗಿದೆ. ಇದು ಕೊಲೆಯಾಗಿರಬಹುದೇ ಎನ್ನುವುದು ಪ್ರಧಾನ ಸಂಶಯ.

ಮಳವಳ್ಳಿ ತಾಲೂಕಿನ ಕ್ಯಾತೇಗೌಡನ ದೊಡ್ಡಿ ನಿವಾಸಿ ಪೂಜಾಬಾಯಿ(27) ಎಂಬವ ಶವ ಮಳವಳ್ಳಿ ತಾಲೂಕಿನ ನಿಡಘಟ್ಟ ಗೇಟ್ ಬಳಿ ಪತ್ತೆಯಾಗಿದೆ. ಸೋಮವಾರ ಅವರು ಗಂಡನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದರು. ಮಂಗಳವಾರ ಮುಂಜಾನೆ ಕಾಂತರಾಜು ಎಂಬವರ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಸಾವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಆಕೆಯ ಶವ ತೋಟದಲ್ಲಿ ಬಿದ್ದುಕೊಂಡಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಯಾವುದೇ ಕುರುಹುಗಳು ಇಲ್ಲ. ಹೀಗಾಗಿ ಆಕೆಯ ದೈಹಿಕ ಸಮಸ್ಯೆಯನ್ನು ದುರ್ಬಳಕೆ ಮಾಡಿಕೊಂಡು ಯಾರಾದರೂ ಎಳೆದೊಯ್ದು ಕೊಲೆ ಮಾಡಿದರೇ? ಅವರ ಮೇಲೆ ದುಷ್ಕೃತ್ಯ ನಡೆಸಿ ಕೊಂದು ಹಾಕಿದರೇ ಎಂಬ ಬಗ್ಗೆ ಹಲವು ಸಂಶಯಗಳಿವೆ.

ಹಲವು ಅನುಮಾನಗಳಿಗೆ ಕಾರಣವಾದ ಮಹಿಳೆಯ ನಿಗೂಢ ಸಾವಿನ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

ಇದನ್ನೂ ಓದಿ | Pakistan: ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿಂದು ಮಹಿಳೆ ಮೇಲೆ 3 ದಿನ ಗ್ಯಾಂಗ್‌ ರೇಪ್‌

Exit mobile version