Site icon Vistara News

ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಹಾಕಿದ್ದ ಶಾಮಿಯಾನ ಕುಸಿತ; ಮಹಿಳೆ ಸಾವು, ಐವರಿಗೆ ಗಾಯ

shamiyana collapses at karatagi

#image_title

ಕೊಪ್ಪಳ: ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಹಾಕಿದ್ದ ಶಾಮಿಯಾನ ಕುಸಿದು ಮಹಿಳೆ ಮೃತಪಟ್ಟು, ಐವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಭಾರಿ ಗಾಳಿಗೆ ಶಾಮಿಯಾನ ಕುಸಿದಿದ್ದರಿಂದ ದುರ್ಘಟನೆ ನಡೆದಿದ್ದು, ಶುಭ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ದುರಂತ ನಡೆದಿದ್ದರಿಂದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ.

ಅಂಜಿನಮ್ಮ (45) ಮೃತರು. ಶಾಮೀದಬೀ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಗಂಗಾವತಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Road Accident: ಒಂದೇ ವಾರದಲ್ಲಿ ದುರಂತ ಸಾವು ಕಂಡ ಅಣ್ಣ-ತಂಗಿ; ಲಾರಿ ಡಿಕ್ಕಿಯಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿ

ಬೈಕ್‌- ಸ್ಕೂಟರ್‌ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

ಮಡಿಕೇರಿ: ಬೈಕ್ ಹಾಗೂ ಸ್ಕೂಟರ್ ನಡುವೆ‌ ಸಂಭವಿಸಿದ ಅಪಘಾತದಲ್ಲಿ (Road accident) ಕಾಲೇಜು ವಿದ್ಯಾರ್ಥಿನಿಯೊಬ್ಬರು (College student) ದಾರುಣವಾಗಿ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರದಲ್ಲಿ (kodagu News) ಈ ಅಪಘಾತ ನಡೆದಿದೆ. ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಎಂಬುವರ ಪುತ್ರಿ ಭಾವನ(21) ಮೃತ ಕಾಲೇಜು ವಿದ್ಯಾರ್ಥಿನಿ.

ಕುಶಾಲ ನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ಈ ಅಪಘಾತ ಸಂಭವಿಸಿದ್ದು, ಕುಶಾಲ ನಗರ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್ ಹಾಗೂ ಮಡಿಕೇರಿ ಕಡೆಯಿಂದ ಕುಶಾಲ ನಗರ ಕಡೆಗೆ ಬರುತ್ತಿದ್ದ ಸ್ಕೂಟರ್‌ ಡಿಕ್ಕಿ ಹೊಡೆದುಕೊಂಡಿವೆ.

ಇದನ್ನೂ ಓದಿ | ಮರಳುಕೋರರ ಚೇಸಿಂಗ್‌ ಮಾಡುವಾಗ ಟ್ರ್ಯಾಕ್ಟರ್‌ ಹರಿದು ಪೊಲೀಸ್‌ ಪೇದೆ ಮೃತ್ಯು; ಕೊಲೆ ಶಂಕೆ

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ‌.ಎಂ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ಬೈಕ್‌ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಭಾವನಾ (21) ಅವರನ್ನು ಕೂಡಲೇ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟರು. ಮತ್ತೊಬ್ಬ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ‌ ಕ್ರಮ ಕೈಗೊಂಡಿದ್ದಾರೆ.

Exit mobile version