Site icon Vistara News

Ghati Subramanya: ಘಾಟಿ ಬ್ರಹ್ಮರಥೋತ್ಸವದಲ್ಲಿ ರಥದಡಿ ಸಿಲುಕಿದ ಮಹಿಳೆ ಪವಾಡ ಸದೃಶ ಪಾರು

Ghati Subramanya

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದ (Ghati BrahmaRathotsava) ವೇಳೆ ಭಾರಿ ಅನಾಹುತವೊಂದು ತಪ್ಪಿದ್ದು, ರಥ ಎಳೆಯುವಾಗ ಚಕ್ರದಡಿ ಸಿಲುಕಿದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಮಹಿಳೆ ಕೆಳಗೆ ಬಿದ್ದಾಗ, ತಕ್ಷಣ ಆಕೆಯನ್ನು ಪೊಲೀಸರು ಹಾಗೂ ಸಿಬ್ಬಂದಿ ಎಳೆದುಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದರಿಮದ ಚಕ್ರದ ಬಳಿ ಮಹಿಳೆಯೊಬ್ಬಳು ಸಿಲುಕಿದ್ದಳು. ಕೂಡಲೇ ಎಚ್ಚೆತ್ತ ಪೊಲೀಸ್ ಹಾಗೂ ಸಿಬ್ಬಂದಿ, ಮಹಿಳೆಯನ್ನು ಪಕ್ಕಕ್ಕೆ ಎಳಿದುಕೊಂಡಿದ್ದಾರೆ. ಇದರಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Road Accident : ಸಂಕ್ರಾಂತಿ ಸಂಭ್ರಮ ಮುಗಿಸಿ ಬರುವಾಗ ಅಪಘಾತ; ತಂದೆ, ಪುಟ್ಟ ಮಗಳು ಮೃತ್ಯು

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸರ್ಪ ದೋಷ ಪರಿಹಾರ ಸೇರಿದಂತೆ ನಾಗಾರಾಧನೆಗೆ ಇದು ಪ್ರಸಿದ್ಧವಾಗಿದೆ. ಪುಷ್ಪ ಶುದ್ಧ ಷಷ್ಟಿ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. 12 ಗಂಟೆಗೆ ಸುಬ್ರಹ್ಮಣ್ಯ ರಥವನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಎ.ಎಚ್.ಮುನಿಯಪ್ಪ ಎಳೆಯುವ ಮೂಲಕ ಚಾಲನೆ ನೀಡಿದರು. ಈ ವೇಳೆ ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.

ಯಮನಂತೆ ಬಂದ ಲಾರಿ; ಬಸ್ಸಿಗೆ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

ಚಿತ್ರದುರ್ಗ: ಸಂಕ್ರಾಂತಿಯ ದಿನದಂದು (Makara Sankranti) ಆರಂಭಗೊಂಡ ಅಪಘಾತ ಸರಣಿ (Accident Series) ‌ರಾಜ್ಯದಲ್ಲಿ ಮುಂದುವರಿಯುವಂತೆ ಕಾಣುತ್ತಿದೆ. ಸೋಮವಾರ ರಾಜ್ಯದ ನಾನಾ ಭಾಗಗಳಲ್ಲಿ ಸಂಭವಿಸಿದ ಹಲವು ಅಪಘಾತಗಳಲ್ಲಿ (Road accident) ಒಟ್ಟು 16 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಂಗಳವಾರ ಮುಂಜಾನೆಯಿಂದ ಎರಡು ಅಪಘಾತಗಳಲ್ಲಿ ಮೂವರ ಜೀವಬಲಿಯಾಗಿದೆ. ಇದೀಗ ಚಿತ್ರದುರ್ಗದಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು (College student death) ಲಾರಿ ಡಿಕ್ಕಿ ಹೊಡೆದು (Lorry hits Student) ಪ್ರಾಣ ಕಳೆದುಕೊಂಡಿದ್ದಾಳೆ.

ಚಿತ್ರದುರ್ಗ ತಾಲೂಕಿನ ವಿಜಾಪುರ ಗೊಲ್ಲರಹಟ್ಟಿ ಬಳಿ ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲಾರಿ ಡಿಕ್ಕಿ ಹೊಡೆತಕ್ಕೆ ಆಕೆ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾಳೆ.

ವಿಜಾಪುರ ಗೊಲ್ಲರಹಟ್ಟಿ ಗ್ರಾಮದ ಸುಚಿತ್ರ (19) ಮೃತ ವಿದ್ಯಾರ್ಥಿನಿ. ಆಕೆ ಮತ್ತು ಆಕೆಯ ಇಬ್ಬರು ಗೆಳತಿಯರು ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಆಗ ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯೊಂದು ರಸ್ತೆ ಬದಿ ನಿಂತಿದ್ದ ಅವರ ಮೇಲೆ ನುಗ್ಗಿದೆ.

ಇದನ್ನೂ ಓದಿ | LPG Cylinder Blast: ಭೀಕರ ಸಿಲಿಂಡರ್‌ ಸ್ಫೋಟ, 6 ಮಂದಿಗೆ ಗಾಯ, ಐದು ಮನೆ ಛಿದ್ರ!

ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು, ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version