ಕಲಬುರಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಏಳು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ಅಸ್ವಸ್ಥೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ (molestation) ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಕಂಡವರೊಬ್ಬರು ಆತನನ್ನು ಹಿಡಿದು ಆಸ್ಪತ್ರೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಮೆಹಬೂಬ್ ಪಾಶಾ ಎಂಬಾತನಿಂದ ಕೃತ್ಯ ನಡೆದಿದೆ. ಈತ ಕಲಬುರಗಿ ನಗರದ ಇಸ್ಲಾಂಬಾದ್ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಮಾರ್ಚ್ 17ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಅಕ್ರಮವಾಗಿ ಆಸ್ಪತ್ರೆ ಪ್ರವೇಶ ಮಾಡಿರುವ ಮೆಹಬೂಬ್ ಪಾಶಾ, ಸೀದಾ ಮಹಿಳೆ ಇದ್ದ ವಾರ್ಡ್‌ಗೆ ಬಂದು ಅತ್ಯಾಚಾರ ಎಸಗುತ್ತಿದ್ದ. ಅದೇ ವೇಳೆ ಸಂಬಂಧಿಕರೊಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ವ್ಯಕ್ತಿಯೊಬ್ಬರು ಅದೇ ಮಾರ್ಗವಾಗಿ ಹೋಗುವಾಗ ಈ ದೃಶ್ಯವನ್ನು ಕಂಡಿದ್ದಾರೆ. ತಕ್ಷಣವೇ ಅವರು ತಮ್ಮ ಮೊಬೈಲ್ ಮೂಲಕ ಕೃತ್ಯವನ್ನು ಸೆರೆಹಿಡಿದಿದ್ದು, ಬಳಿಕ ಆರೋಪಿಯನ್ನು ಎಳೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: Karnataka Elections : ಕೋಲಾರ ಬಿಟ್ಟು ವರುಣಾಗೆ ಹೋಗಿ ಎಂದು ರಾಹುಲ್ ಹೇಳಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದ ಸಿದ್ದರಾಮಯ್ಯ
ಆರೋಪಿ ಪಾಶಾನ ಮೇಲೆ ಕೂಗಾಟ ನಡೆಸಿದಾಗ ಎಲ್ಲರೂ ಬಂದು ಸೇರಿದ್ದು, ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆ ಆಡಳಿತ ಮಂಡಳಿಗೆ ವಿಷಯ ತಿಳಿಸಿದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೆಹಬೂಬ್ ಪಾಶಾನನ್ನು ವಿಚಾರಣೆಗೊಳಪಡಿಸಲಾಗಿದೆ.