ಮುಂಬೈ: ರೈಲಿನಲ್ಲಿ (Train) ಮಲಗಿದ್ದ ಮಹಿಳೆಯ (Woman) ಮುಖದ ಎದುರೇ 47 ವರ್ಷದ ವಿಕೃತನೊಬ್ಬ ಹಸ್ತುಮೈಥುನ (Man Masturbates) ಮಾಡಿಕೊಂಡ ಘಟನೆ ಪೂರ್ಣ ಎಕ್ಸ್‌ಪ್ರೆಸ್ ರೈಲಿನಲ್ಲಿ (Poorna Express Train) ನಡೆದಿದೆ. ಕರ್ನಾಟಕದ ಗೋಕರ್ಣ (Karnataka Gokarna) ಸಮೀಪ ರೈಲು ಬರುತ್ತಿದ್ದಂತೆ ಆರೋಪಿ, ಮಲಗಿದ್ದ ಮಹಿಳೆಯ ಮುಖದ ಮುಂದೆ ಹಸ್ತಮೈಥುನ ಮಾಡಲು ಆರಂಭಿಸಿದ್ದಾನೆ. ಆ ಮಹಿಳೆಯ ಜತೆಗೆ ಬಂದಿದ್ದ ಇಬ್ಬರು ಸ್ನೇಹಿತರು ಇದನ್ನು ಗಮನಿಸಿ ಕೂಡಲೇ ರೈಲ್ವೆ ಪೊಲೀಸರಿಗೆ (Railway Police) ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಈ ಘಟನೆ ಮಂಗಳವಾರ ಬೆಳಗ್ಗೆ 7.30 ರ ಸುಮಾರಿಗೆ ಕರ್ನಾಟಕದ ಗೋಕರ್ಣ ರೈಲು ನಿಲ್ದಾಣದ ಬಳಿ ನಡೆದಿದೆ. ಮಹಿಳೆ ಮಲಗಿದ್ದಾಗ ಆರೋಪಿ ಆಕೆಯ ಬಳಿ ಬಂದು ಆಕೆಯ ಮುಖದ ಮುಂದೆ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದ. ಆಕೆಯೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಸ್ನೇಹಿತರು ಈ ಕೃತ್ಯವನ್ನು ಗಮನಿಸಿ, ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಗೋವಾದ ಕೊಂಕಣ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಗುಡ್ಲಾರ್ ಹೇಳಿದ್ದಾರೆ. ಅಂತಿಮವಾಗಿ ಪೊಲೀಸರು ಆತನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಆರೋಪಿಯನ್ನು ದತ್ತಾತ್ರೇಯ ಚವಾಣ್ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವನಾಗಿದ್ದಾನೆ. ಕೇರಳದ ಕಣ್ಣೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಮಾಹಿತಿ ನೀಡಿದ ಇನ್ಸ್‌ಪೆಕ್ಟರ್ ಗುಡ್ಲಾರ್, 22 ವರ್ಷದ ಸಂತ್ರಸ್ತ ಮಹಿಳೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಪೂರ್ಣ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ತಿಳಿಸಿದ್ದಾರೆ.
ಸಂತ್ರಸ್ತೆ ಹಾಗೂ ಆ ಇಬ್ಬರು ಯುವಕರು ಸಿನಿಮಾಟೋಗ್ರಫಿ ಅಭ್ಯಾಸ ಮಾಡುತ್ತಿದ್ದು, ಕೆಲವು ವೀಡಿಯೊಗಳನ್ನು ಚಿತ್ರೀಕರಿಸಲು ಕೇರಳದಿಂದ ಗೋವಾಕ್ಕೆ ಹೋಗುತ್ತಿದ್ದರು. ಸಂತ್ರಸ್ತೆ ಕೇರಳದ ಕೋಜಿಕ್ಕೋಡ್ ಮೂಲದವರು. ಆರೋಪಿಯನ್ನು ಬಂಧಿಸಿದ ಬಳಿಕ ಆಕೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ನಾವು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ban on Masturbation: ಹಾಸ್ಟೆಲ್ ಬಾತ್‌ರೂಮಿನಲ್ಲಿ ಹಸ್ತಮೈಥುನ ನಿಷೇಧ! ಐಐಟಿ ರೂರ್ಕಿ ಸುತ್ತೋಲೆ ನಿಜವೇ?