ಬೆಂಗಳೂರು: ನಗರದ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಮುಖ್ಯ ಗೇಟ್ ಬಳಿ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸೋಮವಾರ ಆಟೋದಲ್ಲಿ ಹಂತಕರು ಬಂದು ಶವ (Dead Body Found) ಇಟ್ಟು ಪರಾರಿಯಾಗಿದ್ದಾರೆ.
31 ರಿಂದ 35 ಆಸುಪಾಸು ವಯಸ್ಸಿನ ಮಹಿಳೆ ಶವ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಮೂವರು ಆರೋಪಿಗಳು ಡ್ರಮ್ ಸಮೇತ ಶವವನ್ನು ತಂದಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಎಸ್.ಪಿ ಸೌಮ್ಯಲತಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸಿಸಿಟಿವಿ ಪರಿಶೀಲನೆ ಮಾಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದೇ ರೀತಿ ಈ ಹಿಂದೆಯೂ ನಗರದಲ್ಲಿ ಎರಡು ಶವ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.