Site icon Vistara News

Techie death | ಆತ್ಮಹತ್ಯೆಗೆ ಶರಣಾದ ಟೆಕ್ಕಿ: ಮಾನಸಿಕ ಖಿನ್ನತೆ ಕಾರಣ? ಮದುವೆಯಾಗಿ ಎರಡೇ ವರ್ಷದಲ್ಲಿ ದುರಂತ

techie death

ಬೆಂಗಳೂರು: ಗ್ಲೋಬಲ್ ವಿಲೇಜ್‌ನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿ (26) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿಯಾಗಿದ್ದು, ತಾವು ಪತಿ ದಾಮೋದರ್‌ ಅವರೊಂದಿಗೆ ವಾಸವಾಗಿರುವ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಸ್ವಾತಿ ಅವರಿಗೆ ಎರಡು ವರ್ಷದ ಹಿಂದೆ ದಾಮೋದರ್‌ ಅವರ ಜತೆ ಮದುವೆಯಾಗಿದ್ದು, ಗುರುವಾರ ತಡರಾತ್ರಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿ ಉತ್ತಮ ಉದ್ಯೋಗದಲ್ಲಿದ್ದರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Kidnap of techie | ಮೋಜು ಮಸ್ತಿ ಮಾಡಲು ಬ್ರಿಗೇಡ್ ರೋಡ್‌ಗೆ ತೆರಳಿದ್ದ ಟೆಕ್ಕಿಯ ಕಿಡ್ನಾಪ್‌, 10 ಲಕ್ಷ ರೂ. ದರೋಡೆ

Exit mobile version