Site icon Vistara News

VISTARA TOP 10 NEWS : ಮೋದಿ ಗೆಲ್ಲಿಸಿದ ಮಹಿಳೆಯರು, ಭವಾನಿ ದರ್ಪಕ್ಕೆ ಎಲ್ಲೆಡೆ ಆಕ್ರೋಶ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1. ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?
ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2023) ಪ್ರಕಟವಾಗಿದ್ದು, ತೆಲಂಗಾಣ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಭರಪೂರ ಉಚಿತ ಕೊಡುಗೆಗಳ ‘ಗ್ಯಾರಂಟಿ’ ನೀಡಿದ್ದರೂ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಮೂರೂ ರಾಜ್ಯಗಳಲ್ಲಿ ಗೆಲುವು ಸಾಧಿಸಲು ನಾನಾ ಕಾರಣಗಳಿದ್ದರೂ, ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಗೃಹಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದು ಚುನಾವಣೆಯಲ್ಲಿ ಟರ್ನಿಂಗ್‌ ಪಾಯಿಂಟ್‌ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ, ಮೂರೂ ರಾಜ್ಯಗಳಲ್ಲಿ ಬಿಜೆಪಿಯು ಹೆಣ್ಣುಮಕ್ಕಳನ್ನು ಸೆಳೆದಿದ್ದು ಹೇಗೆ? ಯಾವ ಯೋಜನೆಗಳು ಸ್ತ್ರೀಯರ ಮತಗಳನ್ನು ವಾಲಿಸಿದವು ಎಂಬುದರ ಕಿರು ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!
ಇದನ್ನೂ ಓದಿ : Mizoram Election Results: ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ
ಇದನ್ನೂ ಓದಿ : ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ತಳಮಳ! ನಾಯಕತ್ವಕ್ಕೆ ಹಲವರ ಗಾಳ!

2. ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!
ಮುಂಬೈ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

3. ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ
ಬೆಳಗಾವಿ: ರಾಜ್ಯದಲ್ಲಿ ಈಗಲೂ ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide Case) ಬೃಹತ್ ಜಾಲ ಇರುವುದರ ಬಗ್ಗೆ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಕಳವಳವನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವ ಘೋರ ಕೃತ್ಯದ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಅಲ್ಲದೆ, ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ, ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಎಂಬ ಸಲಹೆಗಳೂ ಕೇಳಿಬಂದಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

4. ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ
ಮೈಸೂರು: ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು: ಬೈಕೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ (Bike hits Car) ಸಂದರ್ಭದಲ್ಲಿ ಹಿರಿಯ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ಅವರು ಆಡಿದ ಮಾತುಗಳಿವು. ದೇವೇಗೌಡರ ಮನೆ ಸೊಸೆಯಾಗಿ (Daughter in law of HD Devegowda), ಸದಾ ಜನರೇ ನನ್ನ ದೇವರು ಎನ್ನುವ ಎಚ್‌.ಡಿ ರೇವಣ್ಣ (HD Revanna) ಅವರ ಪತ್ನಿಯಾಗಿ ಜನರ ಬಗ್ಗೆ ಕರುಣೆ ಹೊಂದಿರಬೇಕಾದ ಹೆಣ್ಮಗಳು ನಡು ರಸ್ತೆಯಲ್ಲಿ ಈ ರೀತಿ ದರ್ಪದ ಮಾತು ಆಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಆಕ್ರೋಶವೂ ವ್ಯಕ್ತವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ : Bhavani Revanna : ಅದು ನಮ್ಮ ಕಾರಲ್ಲ ಫ್ರೆಂಡ್‌ದು ಎಂದ ರೇವಣ್ಣ; ಭವಾನಿ ತಪ್ಪಿಗೂ ಕ್ಷಮೆ ಕೇಳಿದ್ರು!
ಇದನ್ನೂ ಓದಿ : Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

5. 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ
ಹಾಸನ: ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

6. ಮಿಚುಂಗ್ ಚಂಡಮಾರುತ ಎಫೆಕ್ಟ್‌; ನಾಳೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಹಲವು ಕಡೆ ಮಂಗಳವಾರ (ಡಿ. 5) ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ (karnataka Weather Forecast) ನೀಡಿದೆ. ಅಲ್ಲದೆ, ಗಾಳಿಯ ವೇಗವೂ ಹೆಚ್ಚಳಗೊಳ್ಳಲಿದ್ದು, ಪ್ರತಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ಬೀಸಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ
ಬೆಂಗಳೂರು: ಪಿಎಸ್‌ಐ ಪರೀಕ್ಷೆ (PSI Exam) ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ (Congress Government) ಗುಡ್ ನ್ಯೂಸ್ ಕೊಟ್ಟಿದೆ. ಈ ವಿಷಯ ಸದನದಲ್ಲಿ ಪ್ರಸ್ತಾಪವಾಗಿದ್ದು, ಒಂದು ತಿಂಗಳು ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಘೋಷಿಸಿದ್ದಾರೆ. ಇದರನ್ವಯ ಜನವರಿ 23ಕ್ಕೆ ಮುಂದೂಡಿಕೆಯಾದಂತೆ ಆಗಿದೆ ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. ತೆಲಂಗಾಣದಲ್ಲಿ ವಾಯುಪಡೆ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು
ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ತರಬೇತಿ ವಿಮಾನವೊಂದು ಪತನಗೊಂಡಿದ್ದು (Aircraft Crash), ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಟೂಪ್ರಾನ್‌ ಪಟ್ಟಣದ ರಾವೆಳ್ಳಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ (ಡಿಸೆಂಬರ್‌ 4) ವಿಮಾನ ಪತನಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರು ಪೈಲಟ್‌ಗಳು (Two Pilots Dead) ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

9. ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌?
ಬೆಂಗಳೂರು: ಪ್ರತಿವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಷನ್‌ ಪ್ರಿಯರಿಗೂ ಕುತೂಹಲವಿರುತ್ತದೆ. ಹೌದು. ಸುದೀಪ್‌ರವರು ಪ್ರತಿ ವೀಕೆಂಡ್‌ನಲ್ಲಿ ಧರಿಸುವ ಒಂದೊಂದು ಡಿಫರೆಂಟ್‌ ಔಟ್‌ಫಿಟ್‌ಗಳು ನೋಡುಗರ ಕಣ್ಣರಳಿಸುತ್ತವೆ. ಕೆಲವೊಮ್ಮೆ ಬಾಲಿವುಡ್‌ಗರನ್ನು ಮೀರಿಸುವಂತಹ ಹುಬ್ಬೇರಿಸುವಂತಹ ಫ್ಯೂಶನ್‌ ಡಿಸೈನರ್‌ವೇರ್‌ಗಳನ್ನು ಕಾಣಬಹುದು. ಈ ಡಿಸೈನರ್‌ವೇರ್‌ಗಳ ಹಿಂದಿರುವ ಡಿಸೈನರ್‌ಗಳ್ಯಾರು? ಡಿಸೈನ್‌ ಆಯ್ಕೆ ಹೇಗೆ? ಅಷ್ಟ್ಯಾಕೆ ದುಬಾರಿ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10. ಪ್ರೀತಿಯಿಂದ ಸಾಕಿದ ಬೆಕ್ಕು ಕಚ್ಚಿ ತಂದೆ, ಮಗನ ದಾರುಣ ಸಾವು!
ಕಾನ್ಪುರ್: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur City) ಸಾಕು ಬೆಕ್ಕು (Pet Cat) ಕಚ್ಚಿದ ಕಾರಣಕ್ಕೆ (Cat Bite) ತಂದೆ ಮತ್ತು ಮಗ ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ(Father and Son). ಮೃತರಿಗೆ ಕಚ್ಚಿದ ಬೆಕ್ಕಿಗೆ, ಬೀದಿ ನಾಯಿಯೊಂದು ಕಚ್ಚಿತ್ತು. ಅದೇ ಬೆಕ್ಕು ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿದ್ದರಿಂದ ಅವರಿಗೆ ಮಾರಣಾಂತಿಕ ರೇಬೀಸ್ ಸೋಂಕು (rabies virus) ತಗುಲಿ, ಅಂತಿಮವಾಗಿ ಮೃತಪಟ್ಟರು. ಇವರಿಬ್ಬರೂ ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

Exit mobile version