Site icon Vistara News

World Environment Day : ಕೆರೆ ಉಳಿಸಿ ಮರ ಬೆಳೆಸಿ ಎಂದ ಸಾಲುಮರದ ತಿಮ್ಮಕ್ಕ; ವಿಸ್ತಾರ ಅಭಿಯಾನಕ್ಕೆ ಭಾರಿ ಸ್ಪಂದನೆ

Saalumarada Thimmakka World Environment Day

ಮೈಸೂರು: ಹಸಿರೇ ಉಸಿರಾಗಿದ್ದು, ಕಾಡು ಬೆಳೆದರಷ್ಟೇ ನಾಡು ಉಳಿಯಲು ಸಾಧ್ಯವಾಗಿದೆ. ಹೀಗಾಗಿ ಕೆರೆ ಉಳಿಸಿ, ಮರ ಬೆಳೆಸಿ. ಗಿಡ ನೆಟ್ಟರೆ ಮರವಾಗುತ್ತದೆ, ನನ್ನಂಥ ಇಳಿ ವಯಸ್ಸಿನವರಿಗೆ ನೆರಳಾಗುತ್ತದೆ ಎಂದು ಅರಣ್ಯ ಇಲಾಖೆಯ ರಾಯಭಾರಿ ನಾಡೋಜ ಸಾಲುಮರದ ತಿಮ್ಮಕ್ಕ (Saalumarada Thimmakka) ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ (World Environment Day) ಹಿನ್ನೆಲೆ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಮೈಸೂರಿನ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಶಾಸಕ ಜಿ.ಡಿ.ಹರೀಶ್‌ಗೌಡ, ಶಿಕ್ಷಕರು, ಮುಖಂಡರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನನಗೆ ನನ್ನ ಪತಿಗೆ ಏನೂ ಇರಲಿಲ್ಲ. ಆಗ ಮರ ನೆಟ್ಟು ಬೆಳೆಸಿದೆವು. ಈಗ ಎಲ್ಲ ಸೌಲಭ್ಯ, ಸೌಕರ್ಯಗಳೂ ಇವೆ. ಆದಷ್ಟು ಕೆರೆ, ಕಲ್ಯಾಣಿ ಕಟ್ಟಿಸಿ, ಇದರಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ ಎಂದು ಸಲಹೆ ನೀಡಿದರು.

ಮೆಡಿಕಲ್‌ ಕಾಲೇಜಿನಲ್ಲಿ ಪರಿಸರ ಕಾಳಜಿ

ಮೆಡಿಕಲ್‌ ವಿದ್ಯಾರ್ಥಿಗಳ ಪರಿಸರ ಕಾಳಜಿ

ರಾಯಚೂರಿನಲ್ಲಿ ವಿಸ್ತಾರ ನ್ಯೂಸ್ ಪರಿಸರ ಕಾಳಜಿಗೆ ರಿಮ್ಸ್ ಆಸ್ಪತ್ರೆಯ ಮೆಡಿಕಲ್‌ ವಿದ್ಯಾರ್ಥಿಗಳು ಸಾಥ್‌ ನೀಡಿದರು. ಕ್ಯಾಂಪೆಸ್‌ನಲ್ಲಿ ಸಸಿ ನೆಟ್ಟು, ಮೂರು ಜನ ವಿದ್ಯಾರ್ಥಿಗಳಿಗೆ ಒಂದು ಸಸಿ ನಿರ್ವಹಣೆಯ ಜವಾಬ್ದಾರಿ ನೀಡಲಾಯಿತು. ಪರಿಸರ ದಿನದಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರೀನ್ ರಾಯಚೂರು, ಶಿಲ್ಪಾ ಫೌಂಡೇಶನ್, ರಿಮ್ಸ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತಾಶಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲಾ ವಿದ್ಯಾರ್ಥಿಗಳ ಪರಿಸರ ದಿನದ ಸಂಭ್ರಮ

ಎಲೆಗಳಿಂದ ತಯಾರಾದ ಸೆಲ್ಫಿ ಬಾಕ್ಸ್‌

ಹಾವೇರಿಯಲ್ಲಿಯು ವಿಸ್ತಾರ ನ್ಯೂಸ್ ಹಾಗೂ ಎಂ ಆರ್ ಎಂ ಶಾಲೆ, ಎಂಆರ್ ಎಂ ಪಿಯು ಕಾಲೇಜು ಸಹಯೋಗದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ನಗರದ ಶಿವಾಜಿನಗರ ನಾಲ್ಕನೇ ಕ್ರಾಸ್‌ನಲ್ಲಿರುವ ಶಾಲೆಯ ಆವರಣದಲ್ಲಿ ಪುಟಾಣಿ ಮಕ್ಕಳು ಸಸಿ ನೆಟ್ಟರು. ಬಳಿಕ ಜಾಥಾ ನಡೆಸಿ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಿದರು. ವಿಶೇಷ ಎಂದರೆ ಶಾಲಾ ಆವರಣದಲ್ಲಿ ಹಸಿರು ಎಲೆಯಿಂದ ತಯಾರಿಸಿದ್ದ ಸೆಲ್ಫಿ ಬಾಕ್ಸ್‌ನಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಹಸಿರು ಎಲೆಗಳನ್ನು ಕಟ್ಟಿಕೊಳ್ಳುವ ಮೂಲಕ ಮಕ್ಕಳು ವಿಶಿಷ್ಟವಾಗಿ ಪರಿಸರ ಜಾಗೃತಿ ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು.

ಇತ್ತ ರಾಣೆಬೆನ್ನೂರಿನಲ್ಲಿ ನಗರದ ರೋಟರಿ ಪ್ರೌಢಶಾಲೆಯಲ್ಲಿ ಸಸಿ ನೆಡಲಾಯಿತು. ರೋಟರಿ ಕ್ಲಬ್, ರೋಟರಿ ಆಂಗ್ಲ ಮಾಧ್ಯಮ‌ ಶಾಲೆ , ರೋಟರಿ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಥ್‌ ನೀಡಿದರು. ಶಿಗ್ಗಾವಿಯ ರಂಭಾಪುರಿ ಕಾಲೇಜಿನಲ್ಲೂ ವಿದ್ಯಾರ್ಥಿಗಳು ಸಂಭ್ರಮದಿಂದ ಪರಿಸರ ದಿನವನ್ನು ಆಚರಿಸಿದರು.

ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್‌?

ಸಚಿವ ಕೆ.ಎಚ್‌ ಮುನಿಯಪ್ಪರಿಂದ ವಾಟರ್‌ ಪಿಲ್ಟರ್‌ ಪ್ಲಾಂಟ್‌ಗೆ ಚಾಲನೆ

ಗಿಡ ನೆಟ್ಟರು ಸಚಿವ ಕೆ. ಎಚ್ ಮುನಿಯಪ್ಪ

ದೇವನಹಳ್ಳಿ ಪಟ್ಟಣದ ಚಿಕ್ಕಕೆರೆ ಬಳಿ ಪರಿಸರ ದಿನದ ಅಂಗವಾಗಿ ಗಿಡ ನೆಡಲಾಯಿತು. ಬಯೋಮಾ ಎನ್ವಿರಾಲ್ಮೆಂಟ್ ಟ್ರಸ್ಟ್ ಸಹಯೋಗದಿಂದ ನಿರ್ಮಾಣ ಮಾಡಿದ ವಾಟರ್ ಪಿಲ್ಟರ್ ನಿರ್ಮಾಣಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ ನೀಡಿದರು. ಸಿಎಸ್ಆರ್ ನಿಧಿಯಲ್ಲಿ 60 ಲಕ್ಷ ರೂ. ವೆಚ್ಚ‌ದಲ್ಲಿ ನಿರ್ಮಾಣ ಮಾಡಿದ ವಾಟರ್ ಪ್ಲಾಂಟ್ ಉದ್ಘಾಟನೆ ಮಾಡಿ, ಗಿಡ ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಒಂದೊಂದು ಗಿಡ ನೆಡುವಂತೆ ಮನವಿ ಮಾಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version