world environment day Save the lake and grow trees says Saalumarada ThimmakkaWorld Environment Day : ಕೆರೆ ಉಳಿಸಿ ಮರ ಬೆಳೆಸಿ ಎಂದ ಸಾಲುಮರದ ತಿಮ್ಮಕ್ಕ; ವಿಸ್ತಾರ ಅಭಿಯಾನಕ್ಕೆ ಭಾರಿ ಸ್ಪಂದನೆ - Vistara News

ಕರ್ನಾಟಕ

World Environment Day : ಕೆರೆ ಉಳಿಸಿ ಮರ ಬೆಳೆಸಿ ಎಂದ ಸಾಲುಮರದ ತಿಮ್ಮಕ್ಕ; ವಿಸ್ತಾರ ಅಭಿಯಾನಕ್ಕೆ ಭಾರಿ ಸ್ಪಂದನೆ

World Environment Day: ಎಲ್ಲೆಡೆ ಪರಿಸರ ದಿನವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಗಿಡ ನೆಡುವ ಕಾರ್ಯಕ್ರಮದ ಜತೆಗೆ ಶಾಲಾ-ಕಾಲೇಜುಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಇಲಾಖೆಯ ರಾಯಭಾರಿ ನಾಡೋಜ ಸಾಲುಮರದ ತಿಮ್ಮಕ್ಕ (Saalumarada Thimmakka) ಕೂಡ ಸಾಥ್‌ ನೀಡಿದ್ದಾರೆ.

VISTARANEWS.COM


on

Saalumarada Thimmakka World Environment Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಹಸಿರೇ ಉಸಿರಾಗಿದ್ದು, ಕಾಡು ಬೆಳೆದರಷ್ಟೇ ನಾಡು ಉಳಿಯಲು ಸಾಧ್ಯವಾಗಿದೆ. ಹೀಗಾಗಿ ಕೆರೆ ಉಳಿಸಿ, ಮರ ಬೆಳೆಸಿ. ಗಿಡ ನೆಟ್ಟರೆ ಮರವಾಗುತ್ತದೆ, ನನ್ನಂಥ ಇಳಿ ವಯಸ್ಸಿನವರಿಗೆ ನೆರಳಾಗುತ್ತದೆ ಎಂದು ಅರಣ್ಯ ಇಲಾಖೆಯ ರಾಯಭಾರಿ ನಾಡೋಜ ಸಾಲುಮರದ ತಿಮ್ಮಕ್ಕ (Saalumarada Thimmakka) ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ (World Environment Day) ಹಿನ್ನೆಲೆ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಮೈಸೂರಿನ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಶಾಸಕ ಜಿ.ಡಿ.ಹರೀಶ್‌ಗೌಡ, ಶಿಕ್ಷಕರು, ಮುಖಂಡರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನನಗೆ ನನ್ನ ಪತಿಗೆ ಏನೂ ಇರಲಿಲ್ಲ. ಆಗ ಮರ ನೆಟ್ಟು ಬೆಳೆಸಿದೆವು. ಈಗ ಎಲ್ಲ ಸೌಲಭ್ಯ, ಸೌಕರ್ಯಗಳೂ ಇವೆ. ಆದಷ್ಟು ಕೆರೆ, ಕಲ್ಯಾಣಿ ಕಟ್ಟಿಸಿ, ಇದರಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ ಎಂದು ಸಲಹೆ ನೀಡಿದರು.

ಮೆಡಿಕಲ್‌ ಕಾಲೇಜಿನಲ್ಲಿ ಪರಿಸರ ಕಾಳಜಿ

ಮೆಡಿಕಲ್‌ ವಿದ್ಯಾರ್ಥಿಗಳ ಪರಿಸರ ಕಾಳಜಿ

ರಾಯಚೂರಿನಲ್ಲಿ ವಿಸ್ತಾರ ನ್ಯೂಸ್ ಪರಿಸರ ಕಾಳಜಿಗೆ ರಿಮ್ಸ್ ಆಸ್ಪತ್ರೆಯ ಮೆಡಿಕಲ್‌ ವಿದ್ಯಾರ್ಥಿಗಳು ಸಾಥ್‌ ನೀಡಿದರು. ಕ್ಯಾಂಪೆಸ್‌ನಲ್ಲಿ ಸಸಿ ನೆಟ್ಟು, ಮೂರು ಜನ ವಿದ್ಯಾರ್ಥಿಗಳಿಗೆ ಒಂದು ಸಸಿ ನಿರ್ವಹಣೆಯ ಜವಾಬ್ದಾರಿ ನೀಡಲಾಯಿತು. ಪರಿಸರ ದಿನದಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರೀನ್ ರಾಯಚೂರು, ಶಿಲ್ಪಾ ಫೌಂಡೇಶನ್, ರಿಮ್ಸ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತಾಶಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲಾ ವಿದ್ಯಾರ್ಥಿಗಳ ಪರಿಸರ ದಿನದ ಸಂಭ್ರಮ

ಎಲೆಗಳಿಂದ ತಯಾರಾದ ಸೆಲ್ಫಿ ಬಾಕ್ಸ್‌

ಹಾವೇರಿಯಲ್ಲಿಯು ವಿಸ್ತಾರ ನ್ಯೂಸ್ ಹಾಗೂ ಎಂ ಆರ್ ಎಂ ಶಾಲೆ, ಎಂಆರ್ ಎಂ ಪಿಯು ಕಾಲೇಜು ಸಹಯೋಗದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ನಗರದ ಶಿವಾಜಿನಗರ ನಾಲ್ಕನೇ ಕ್ರಾಸ್‌ನಲ್ಲಿರುವ ಶಾಲೆಯ ಆವರಣದಲ್ಲಿ ಪುಟಾಣಿ ಮಕ್ಕಳು ಸಸಿ ನೆಟ್ಟರು. ಬಳಿಕ ಜಾಥಾ ನಡೆಸಿ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಿದರು. ವಿಶೇಷ ಎಂದರೆ ಶಾಲಾ ಆವರಣದಲ್ಲಿ ಹಸಿರು ಎಲೆಯಿಂದ ತಯಾರಿಸಿದ್ದ ಸೆಲ್ಫಿ ಬಾಕ್ಸ್‌ನಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಹಸಿರು ಎಲೆಗಳನ್ನು ಕಟ್ಟಿಕೊಳ್ಳುವ ಮೂಲಕ ಮಕ್ಕಳು ವಿಶಿಷ್ಟವಾಗಿ ಪರಿಸರ ಜಾಗೃತಿ ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು.

World Environment Day

ಇತ್ತ ರಾಣೆಬೆನ್ನೂರಿನಲ್ಲಿ ನಗರದ ರೋಟರಿ ಪ್ರೌಢಶಾಲೆಯಲ್ಲಿ ಸಸಿ ನೆಡಲಾಯಿತು. ರೋಟರಿ ಕ್ಲಬ್, ರೋಟರಿ ಆಂಗ್ಲ ಮಾಧ್ಯಮ‌ ಶಾಲೆ , ರೋಟರಿ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಥ್‌ ನೀಡಿದರು. ಶಿಗ್ಗಾವಿಯ ರಂಭಾಪುರಿ ಕಾಲೇಜಿನಲ್ಲೂ ವಿದ್ಯಾರ್ಥಿಗಳು ಸಂಭ್ರಮದಿಂದ ಪರಿಸರ ದಿನವನ್ನು ಆಚರಿಸಿದರು.

World Environment Day

ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್‌?

World Environment Day
ಸಚಿವ ಕೆ.ಎಚ್‌ ಮುನಿಯಪ್ಪರಿಂದ ವಾಟರ್‌ ಪಿಲ್ಟರ್‌ ಪ್ಲಾಂಟ್‌ಗೆ ಚಾಲನೆ

ಗಿಡ ನೆಟ್ಟರು ಸಚಿವ ಕೆ. ಎಚ್ ಮುನಿಯಪ್ಪ

ದೇವನಹಳ್ಳಿ ಪಟ್ಟಣದ ಚಿಕ್ಕಕೆರೆ ಬಳಿ ಪರಿಸರ ದಿನದ ಅಂಗವಾಗಿ ಗಿಡ ನೆಡಲಾಯಿತು. ಬಯೋಮಾ ಎನ್ವಿರಾಲ್ಮೆಂಟ್ ಟ್ರಸ್ಟ್ ಸಹಯೋಗದಿಂದ ನಿರ್ಮಾಣ ಮಾಡಿದ ವಾಟರ್ ಪಿಲ್ಟರ್ ನಿರ್ಮಾಣಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ ನೀಡಿದರು. ಸಿಎಸ್ಆರ್ ನಿಧಿಯಲ್ಲಿ 60 ಲಕ್ಷ ರೂ. ವೆಚ್ಚ‌ದಲ್ಲಿ ನಿರ್ಮಾಣ ಮಾಡಿದ ವಾಟರ್ ಪ್ಲಾಂಟ್ ಉದ್ಘಾಟನೆ ಮಾಡಿ, ಗಿಡ ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಒಂದೊಂದು ಗಿಡ ನೆಡುವಂತೆ ಮನವಿ ಮಾಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

Assault Case: ಡ್ರಗ್ಸ್‌ ಪೆಡ್ಲರ್‌ಗಳ (Drug Case) ಇರುವಿಕೆ ಬಗ್ಗೆ ಮಾಹಿತಿ ಕಲೆಹಾಕಲು ತೆರಳಿದ್ದ ಸಿಸಿವಿ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು (Nigeria Citizen) ದಾಳಿ ಮಾಡಿದ್ದಾರೆ. ರಸ್ತೆಯ್ಲಲೇ ರದ್ಧಾಂತ ಮಾಡಿದ ಕಿಡಿಗೇಡಿಗಳು ಕೈಗೆ ಸಿಕ್ಕ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.

VISTARANEWS.COM


on

By

Assault Case
Koo

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನೈಜೀರಿಯಾ ಪ್ರಜೆಗಳ (Nigeria Citizen) ದಾಂಧಲೆ ಮುಂದುವರಿದಿದೆ. ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್‌ಗಳು ಇರುವಿಕೆ ಬಗ್ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಈ ಬಗ್ಗೆ ಪರಿಶೀಲನೆಗೆ ತೆರಳಿದಾಗ ಸಿಸಿಬಿ ಪೊಲೀಸರ ಮೇಲೆ‌ ನೈಜೀರಿಯಾ ಪ್ರಜೆಗಳು ದಾಳಿ ಮಾಡಿ ಹಲ್ಲೆ (Assault Case) ನಡೆಸಿದ್ದಾರೆ. ಜತೆಗೆ ಹೆಲ್ಮೆಟ್‌ನಿಂದ ಕಾರಿನ ಗಾಜು ಒಡೆದು ಹಾನಿ ಮಾಡಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯ ಮಾವಳ್ಳಿಪುರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಘಟನೆ ನಡೆದಿದೆ.

ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯವಾಗಿದೆ. ನೈಜೀರಿಯಾ ಪ್ರಜೆಗಳು ಸಿಸಿಬಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಮತ್ತು ನೈಜೀರಿಯಾ ಪ್ರಜೆಗಳ ಮಧ್ಯೆ ವಾಗ್ವಾದ ನಡೆದಿದ್ದು, ರಸ್ತೆಯಲ್ಲೇ ರಾದ್ಧಾಂತ ಮಾಡಿದ್ದಾರೆ. ಇದೇ ವೇಳೆ ನೈಜೀರಿಯಾ ಪ್ರಜೆಗಳು ತಮ್ಮವರಿಗೆ ಫೋನ್‌ ಮಾಡಿ ಕರೆಸಿಕೊಂಡಿದ್ದಾರೆ. ಬೈಕ್‌ನಲ್ಲಿ ಬೇರೆ ಬೇರೆ ಕಡೆಯಿಂದ 10ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಪೊಲೀಸರು ಜೀಪ್ ಹತ್ತಿಸುತ್ತಿದ್ದಂತೆ ತಿರುಗಿ ಬಿದ್ದ ನೈಜೀರಿಗಳು, ಕಲ್ಲು ದೊಣ್ಣೆಗಳಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪೊಲೀಸರನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸಿಸಿಬಿ ಅಧಿಕಾರಿ ಸುಬ್ರಹ್ಮಣ್ಯ ಸ್ವಾಮಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಮುಂದುವರಿದ ತನಿಖೆಗಾಗಿ ಸಿಸಿಬಿ ಟೀಂ ತೆರಳಿದ್ದರು. ಆರೋಪಿಯನ್ನು ಹಿಂಬಾಲಿಸಿಕೊಂಡು ಹೋದಾಗ ನೈಜೀರಿಯನ್ ಪ್ರಜೆಗಳು ಕಿರಿಕ್ ತೆಗೆದಿದ್ದರು.

Assault case

ಇದನ್ನೂ ಓದಿ: Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

ತಾವು ಸಿಸಿಬಿ ಪೊಲೀಸರು ಎಂದು ತಿಳಿಸಿದರೂ ಏಕಾಏಕಿ ಹಲ್ಲೆಯನ್ನು ನಡೆಸಿದ್ದಾರೆ. ನಿನ್ನೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಾಗ ಸಿಸಿಬಿ ಇನ್ಸ್‌ಸ್ಪೆಕ್ಟರ್‌ ಕೂಡಲೇ ಕಂಟ್ರೋಲ್ ರೂಂಗೆ ಕಾಲ್ ಮಾಡಿ ವಿಚಾರ ಮುಟ್ಟಿಸಿದ್ದರು. ವಿಚಾರ ತಿಳಿದು ರಾಜಾನುಕುಂಟೆ ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿಬಿ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಅವರಿಗೆ ಮನೆ ಬಾಡಿಗೆ ಕೊಟ್ಟ ಮಾಲೀಕನ ಜತೆ ಮಾತನಾಡಿದ್ದೇವೆ. ನೈಜೀರಿಯನ್ ಪ್ರಜೆಗಳು ದಾಖಲಾತಿ ಕೊಡುವುದಾಗಿ ಹೇಳಿ ಮನೆ ಮಾಲೀಕರಿಂದ ಬಾಡಿಗೆ ಪಡೆದಿದ್ದಾರೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Neha Murder Case: ಹುಬ್ಬಳ್ಳಿ ನಗರವನ್ನು ನಡುಗಿಸಿದ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ಕೋರ್ಟ್ ಮುಂದೆ ಹಾಜರುಪಡಿಸಿದರು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಆರೋಪಿಯನ್ನು‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

VISTARANEWS.COM


on

Murder case Man stabbed to death 9 times for refusing to love
Koo

ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ (Neha Hirematt) ಎಂಬ ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ (Neha Murder Case) ಮಾಡಿದ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಫಯಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ನೇಹಾ ಕುಟುಂಬಸ್ಥರನ್ನು ಬಿಜೆಪಿ ಮುಖಂಡರಾದ ಪ್ರಹ್ಲಾದ್‌ ಜೋಶಿ, ಬಸವರಾಜ್‌ ಬೊಮ್ಮಾಯಿ ಮುಂತಾದವರು ಭೇಟಿಯಾಗಿದ್ದು, ʼʼಹಿಂದೂಗಳಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರʼʼದ ವಿರುದ್ಧ ಗುಡುಗಿದ್ದಾರೆ.

ಹುಬ್ಬಳ್ಳಿ ನಗರವನ್ನು ನಡುಗಿಸಿದ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ಕೋರ್ಟ್ ಮುಂದೆ ಹಾಜರುಪಡಿಸಿದರು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಆರೋಪಿಯನ್ನು‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

ಮೂರು ದಿನ ಮುನವಳ್ಳಿ ಬಂದ್‌

ನೇಹಾ ಹಿರೇಮಠ ಅವರ ಮೂಲವಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಗರ ಕೂಡ ಉದ್ವಿಗ್ನಗೊಂಡಿದೆ. ಇಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಗರ ಬಂದ್‌ಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಈ ನಡುವೆ, ಇಂದು ʼಲವ್‌ ಜಿಹಾದ್‌ ಕೊಲೆʼ ಎಂದು ಹೇಳುವ ಪೋಸ್ಟರ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ. ‌

ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಶವವನ್ನು ಕಿಮ್ಸ್ ಶವಾಗಾರದಲ್ಲಿ ಇಡಲಾಗಿದೆ. ಬಿಜೆಪಿ ಮುಖಂಡರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ್‌ ಜೋಶಿ, ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಇಲ್ಲಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಿಡ್ನಾಳದ ಬಸವನಗರದಲ್ಲಿರುವ ಕಾರ್ಪೊರೇಟರ್ ನಿರಂಜನ್ ಮನೆ ಬಳಿ ಜನರು ಹಾಗೂ ಸಂಬಂಧಿಕರು ಜಮಾಯಿಸುತ್ತಿದ್ದಾರೆ. ನಿರಂಜನರಿಗೆ ಸಾಂತ್ವನ ಹೇಳಲು ಮಾಜಿ ಮೇಯರ್ ಇರೇಶ್ ಅಂಚಟಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿ ಸ್ಥಳೀಯ ನಾಯಕರು ಆಗಮಿಸಿದ್ದಾರೆ.

ಏನಿದು ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌, ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

Continue Reading

ಬೆಂಗಳೂರು

Murder case : ಬೆಂಗಳೂರಲ್ಲಿ ರಕ್ತದೋಕುಳಿ; ಪ್ರತ್ಯೇಕ ಕಡೆಗಳಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ

Murder case : ಬೆಂಗಳೂರಿನ ಪ್ರತ್ಯೇಕ ಕಡೆಗಳಲ್ಲಿ (Bengaluru News) ಯುವಕರಿಬ್ಬರು ಬರ್ಬರವಾಗಿ ಕೊಲೆಯಾಗಿದ್ದಾರೆ. ಹಲಸೂರು ವ್ಯಾಪ್ತಿಯಲ್ಲಿ ಕರಗ ನಡೆಯುತ್ತಿದ್ದಾಗಲೇ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದರೆ, ಇತ್ತ ಹೊರಮಾವು ಸಮೀಪ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ನಡೆಸಿದ್ದಾರೆ.

VISTARANEWS.COM


on

By

Murder Case
ಸತೀಶ್ ಹತ್ಯೆಯಾದವರು
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧಿ ಕೃತ್ಯಗಳು ಹೆಚ್ಚಾಗುತ್ತಿವೆ. ಕಾನೂನು ಹಾಗೂ ಪೊಲೀಸರ ಭಯವಿಲ್ಲದೇ ನಡುರಸ್ತೆಯಲ್ಲೇ ರಕ್ತದೋಕುಳಿ ಹರಿಸುತ್ತಿದ್ದಾರೆ. ಸದ್ಯ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಲ್ಲಕ್ಕಿ ವೇಳೆ ಯುವಕನ ಬರ್ಬರ (Murder Case) ಕೊಲೆಯಾಗಿದೆ.

ಸತೀಶ್ (32) ಹತ್ಯೆಯಾದವನು. ನಿನ್ನೆ ಗುರುವಾರ ರಾತ್ರಿ ಕರಗ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಸತೀಶ್‌ನನ್ನು ಅಟ್ಟಾಡಿಸಿ ಕೊಂದಿದ್ದಾರೆ. ಸಿಮೆಂಟ್‌ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸತೀಶ್ ಶಿವಾಜಿನಗರದ ನಿವಾಸಿ ಎಂದು ತಿಳಿದು ಬಂದಿದೆ.

ಸದ್ಯ ಸತೀಶ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ. ಕೊಲೆ ಮಾಡಿದ ಆರೋಪಿಗಳಿಗೆ ಹುಡುಕಾಟವನ್ನು ನಡೆಸಿದ್ದಾರೆ.

ಇದನ್ನೂ ಓದಿ: Drowned: ನೀರಿನ ಸಂಪ್‌ನಲ್ಲಿ ಮುಳುಗಿ ತಾಯಿ- ಮಗು ಸಾವು, ಮುಚ್ಚಳ ಹಾಕದೆ ಬಿಟ್ಟಿದ್ದ ಮಾಲಿಕ

ಕೌಟುಂಬಿಕ ಕಲಹಕ್ಕೆ ಬಿತ್ತು ಹೆಣ

ಬೆಂಗಳೂರಿನಲ್ಲಿ ಮತ್ತೊಬ್ಬ ಯುವಕನ ಕೊಲೆಯಾಗಿದೆ. ಬೆಂಗಳೂರಿನ ಹೊರಮಾವಿನಲ್ಲಿ ಹಂತಕರು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಿದ್ದಾರೆ. ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (28) ಕೊಲೆಯಾದ ಯುವಕ.

ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೀರ್ತಿ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಿಶೋರ್ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಕೀರ್ತಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಆರೋಪಿ ಕಿಶೋರ್, ಕೀರ್ತಿ ಸಂಬಂಧಿ ಮಹಿಳೆಯೊಬ್ಬಳ ಜತೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಹೀಗಾಗಿ ಕೀರ್ತಿ ಕಿಶೋರ್‌ಗೆ ವಾರ್ನ್ ಮಾಡಿದ್ದ. ಇದರಿಂದ ಹೆದರಿ ಹತ್ಯೆ ನಡೆಸಿರುವುದಾಗಿ ಕಿಶೋರ್ ಬಾಯ್ಬಿಟ್ಟಿದ್ದಾನೆ.

ಸದ್ಯ ಕೀರ್ತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Modi in Karnataka: ನಾಳೆ ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

Modi in Karnataka: ನಾಳೆ (ಏಪ್ರಿಲ್‌ 20) ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

VISTARANEWS.COM


on

Modi in Karnataka on April 20 Massive rallies in Chikkaballapura and Bengaluru
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆ ಘೋಷಣೆಯಾಗಿ ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಏಪ್ರಿಲ್ 20ರಂದು ಮೋದಿ ರಾಜ್ಯಕ್ಕೆ (Modi in Karnataka) ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮೋಡಿ ಮಾಡಲಿದ್ದಾರೆ.

ಮೈಸೂರಿನ ಬೃಹತ್‌ ಸಮಾವೇಶ ಹಾಗೂ ಮಂಗಳೂರಿನ ರೋಡ್‌ ಶೋ ಯಶಸ್ಸಿನ ನಂತರ ಪುನಃ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ!

ಏಪ್ರಿಲ್‌ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಬೃಹತ್‌ ರ‍್ಯಾಲಿ

ಶನಿವಾರ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪ್ರಚಾರ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೊಳಗೊಂಡಂತೆ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸಿಗುವುದೇ ಮೋದಿ ಬೂಸ್ಟ್‌!

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಅಭ್ಯರ್ಥಿಗಳ ನಡುವೆ ಟಫ್‌ ಫೈಟ್‌ ಏರ್ಪಟ್ಟಿದೆ. ಕಾರಣ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮತಗಳು ಕ್ರೋಡೀಕರಣಗೊಂಡರೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಅವರ ಗೆಲುವಿನ ಹಾದಿ ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್‌ ರಾತ್ರಿ – ಹಗಲು ಎನ್ನುವಂತೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಕ್ಷೇತ್ರದ ಗೆಲುವಿಗೆ ನಾನಾ ಕಸರತ್ತುಗಳನ್ನು, ರಣತಂತ್ರಗಳನ್ನು ಹೆಣೆಯುತ್ತಾ ಬರುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಸಹ ಬರಲಿದ್ದು, ಅವರು ಪಕ್ಷದ ಅಭ್ಯರ್ಥಿಯಾದ ಡಾ. ಸಿ.ಎನ್.‌ ಮಂಜುನಾಥ್‌ ಪರ ಏನು ಹೇಳಲಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಯಾವ ಬಾಂಬ್‌ ಎಸೆಯಲಿದ್ದಾರೆ? ಇದು ಮತದಾರರ ಮೇಲೆ ಬೀರುವ ಪರಿಣಾಮ ಏನು ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

ಮೈಸೂರು ಸಮಾವೇಶದಲ್ಲಿ ಗುಡುಗಿದ್ದ ಮೋದಿ!

ಮೈಸೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ, ಹಿಂದುತ್ವದ ವಿರುದ್ಧ ಆ ಪಕ್ಷ ಹಾಗೂ ಮಿತ್ರ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದರು. ಇನ್ನು ದೇಶದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿನ ಕಾಂಗ್ರೆಸ್‌ ಸರ್ಕಾರವು ಎಟಿಎಂ ಆಗಿದ್ದು, ನೂರಾರು ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್‌ 20 ರಂದು ನಡೆಯಲಿರುವ ಎರಡು ಸಮಾವೇಶಗಳಲ್ಲಿ ಮೋದಿ ಏನು ಮಾತನಾಡಲಿದ್ದಾರೆ? ಯಾವೆಲ್ಲ ಹೊಸ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Continue Reading
Advertisement
Assault Case
ಬೆಂಗಳೂರು33 seconds ago

Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

India’s Russian oil imports hit record high in February
ಪ್ರಮುಖ ಸುದ್ದಿ7 mins ago

Israel- Iran war: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭ; ಕಚ್ಚಾ ತೈಲ ಬೆಲೆ 4% ಏರಿಕೆ

Teja Sajja Hanuman Movie Feme Mirai announce
ಟಾಲಿವುಡ್17 mins ago

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Murder case Man stabbed to death 9 times for refusing to love
ಪ್ರಮುಖ ಸುದ್ದಿ26 mins ago

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Viral Video
ವೈರಲ್ ನ್ಯೂಸ್26 mins ago

Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

IPL 2024
ಕ್ರೀಡೆ27 mins ago

IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ

Murder Case
ಬೆಂಗಳೂರು52 mins ago

Murder case : ಬೆಂಗಳೂರಲ್ಲಿ ರಕ್ತದೋಕುಳಿ; ಪ್ರತ್ಯೇಕ ಕಡೆಗಳಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ

IPL 2024
ಕ್ರೀಡೆ59 mins ago

IPL 2024: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೋಹಿತ್​ ಶರ್ಮ

Lok Sabha Election 2024 Rajinikanth Kamal Haasan Dhanush Vijay Sethupathi vote in Chennai
ಕಾಲಿವುಡ್1 hour ago

Lok Sabha Election 2024: ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್​, ಧನುಷ್, ಕಮಲ್ ಹಾಸನ್, ವಿಜಯ್‌!

summer trip
ಪ್ರವಾಸ2 hours ago

Summer Tour: ಹಚ್ಚ ಹಸುರಿನ ಪ್ರಶಾಂತ ನಗರ ಶಿಲ್ಲಾಂಗ್; ಬೇಸಿಗೆ ಪ್ರವಾಸಕ್ಕೆ ಸೂಕ್ತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌