ಮೈಸೂರು : ವಿಶ್ವವಿಖ್ಯಾತ ದಸರಾ ಮಹೋತ್ಸವ (Mysore) ಅಂಗವಾಗಿ ಗಜಪಯಣ ಪೂಜಾ ಪ್ರಕ್ರಿಯೆಗಳು ವೀರನ ಹೊಸಹಳ್ಳಿಯಲ್ಲಿ ಆರಂಭಗೊಂಡಿದೆ. ಅರಣ್ಯ ಸಚಿವ ಉಮೇಶ್ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಪೂಜೆ ನೆರವೇರಿತು. ಗಜಪಡೆಗಳಿಗೆ ಪೂಜೆ ಸಲ್ಲಿಸುವ ವೇಳೆ ಪ್ರತಿಯೊಬ್ಬರೂ ಚಪ್ಪಲಿ, ಶೂ ಬಿಟ್ಟು ಪೂಜೆ ಮಾಡಿದರೆ, ಸಚಿವ ಉಮೇಶ್ ಕತ್ತಿ ಮಾತ್ರ ಶೂ ಧರಿಸಿದ್ದು ವಿವಾದಾಸ್ಪದವಾಯಿತು.
57 ವರ್ಷದ ಅಭಿಮನ್ಯು ,38 ವರ್ಷದ ಮಹೇಂದ್ರ, 63 ವರ್ಷದ ಅರ್ಜುನ, 22 ವರ್ಷದ ಭೀಮ, 44 ವರ್ಷದ ಧನಂಜಯ, ಕಾವೇರಿ, ಚೈತ್ರಾ, 39 ವರ್ಷದ ಗೋಪಾಲಸ್ವಾಮಿ, ಲಕ್ಷ್ಮಿ ಆನೆಗಳಿಗೆ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ನೇರವೇರಿದೆ. ನಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಪುಷ್ಪಾರ್ಚನೆ ಆಗಿದ್ದು, ಆನೆಗಳಿಗೆ ಮೋದಕ, ಕರ್ಜಿಕಾಯಿ, ಹೋಳಿಗೆ, ಚಕ್ಕುಲಿ ಕಬ್ಬು, ಬೆಲ್ಲವನ್ನು ಅತಿಥಿಗಳು ತಿನ್ನಿಸಿದರು.
ಇದನ್ನೂ ಓದಿ | Train Time | ಮೈಸೂರು-ಬೆಂಗಳೂರು ರೈಲುಗಳ ಸಂಚಾರ ಪುನರಾರಂಭ
ಇದನ್ನೂ ಓದಿ | ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೊಡಗಿನಿಂದ ಗಜಪಯಣ ಆರಂಭ
ಶಾಸಕರಾದ ಎಚ್.ಪಿ.ಮಂಜುನಾಥ್, ಸಿ.ಎನ್.ಮಂಜೇಗೌಡ, ಮೇಯರ್ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.