Site icon Vistara News

Accident | ಬೈಕುಗಳ ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು

bike accident death

ಯಾದಗಿರಿ: ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಪಘಾತ ಸ್ಥಳದಲ್ಲಿ ಮೃತದೇಹಗಳು ರಕ್ತದೋಕುಳಿಯಲ್ಲಿ ಚದುರಿಬಿದ್ದಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಬಳಿ ನಿನ್ನೆ ತಡರಾತ್ರಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಕುರಿಗಾಹಿಗಳಾದ ಕೋಟೆಗುಡ್ಡದ ಗ್ರಾಮದ ಬಾಲಪ್ಪ (55), ಜಟ್ಟೆಪ್ಪ (60) ಹಾಗೂ ತರಕಾರಿ ವ್ಯಾಪಾರಿ ಕೊಡೇಕಲ್ ಗ್ರಾಮದ ಪರಸಪ್ಪ (45) ಸಾವಿಗೀಡಾಗಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Lorry Fire | ವೇಗವಾಗಿ ಚಲಿಸುತ್ತಿದ್ದಾಗಲೇ ಟೈರ್‌ ಬ್ಲಾಸ್ಟ್‌; ಡಿಕ್ಕಿಯ ರಭಸಕ್ಕೆ ಧಗ ಧಗನೆ ಹೊತ್ತಿ ಉರಿದ ಲಾರಿ

Exit mobile version