Site icon Vistara News

Chakravarty sulibele : ಇನ್ನು ಮುಂದೆ ಮೋದಿ ಹೆಸರಲ್ಲಿ ಮತ ಕೇಳಲ್ಲ ಎಂದ ಸೂಲಿಬೆಲೆ, ಯಾಕೆ?

Chakravarty sulibele Narendra Modi

ಯಾದಗಿರಿ: ಮುಂದಿನ ಚುನಾವಣೆಯಲ್ಲಿ ನಾನು ನರೇಂದ್ರ ಮೋದಿ (PM Narendra Modi) ಅವರ ಹೆಸರಿನಲ್ಲಿ ಮತ ಕೇಳಲು ಬರುವುದಿಲ್ಲ ಎಂದು ಹೇಳಿದ್ದಾರೆ ಯುವ ಬ್ರಿಗೇಡ್‌ ಸಂಸ್ಥಾಪಕ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty sulibele).

ಯಾದಗಿರಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದವರು. ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ‌ ಅವರಿಗೆ ವೋಟ್ ಕೊಡಿ ಅಂತ ಕೇಳಲು ಬರಲ್ಲ ಎಂದರು.

ಚಕ್ರವರ್ತಿ ಸೂಲಿಬೆಲೆ ಅವರು ಮೋದಿಯವರ ಪರಮ ಆರಾಧಕರು. ಅವರೇಕೆ ಹೀಗೆ ಹೇಳಿದರು ಎಂಬ ಪ್ರಶ್ನೆ ಕಾಡುತ್ತಿದ್ದರೆ, ಮುಂದಿನ ಬಾರಿ ಮೋದಿ ಹೆಸರಿನಲ್ಲಿ ಮತ ಯಾಕೆ ಕೇಳುವುದಿಲ್ಲ ಎನ್ನುವುದಕ್ಕೆ ಅವರೇ ವಿವರಣೆ ನೀಡಿದ್ದಾರೆ. ಮುಂದಿನ ಬಾರಿ ಎಂದರೆ ಅವರು ಹೇಳಿದ್ದು 2024ರ ಚುನಾವಣೆ ಅಲ್ಲ, 2029ರ ಲೋಕಸಭಾ ಚುನಾವಣೆ.

ʻʻಮುಂದಿನ ಬಾರಿ ಪ್ರಧಾನಿ ನರೇಂದ್ರ ಮೋದಿ‌ ಹೆಸರಿನಲ್ಲಿ ನಾನು ವೋಟ್ ಕೇಳಲ್ಲು ಬರಲ್ಲ. ಆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ಗೆ ವೋಟ್ ನೀಡಿ ಅಂತ ಬರ್ತೀನಿʼʼ ಎಂದರು.

ʻʻಆಗ ಯೋಗಿ ಪ್ರಧಾನಿ ಆಗಬೇಕಾದರೆ ಈ ಬಾರಿ ಮೋದಿ ಪ್ರಧಾನಿ ಆಗಬೇಕು ಅನ್ನೋದು ಮರೆಯುವಂತಿಲ್ಲ. ನಾವೆಲ್ಲರೂ ಸೇರಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡೋಣ ಆಶಿಸುತ್ತೇನೆ. ಮೇ 15ಕ್ಕೆ ಪ್ರಧಾನಿ ಮೋದಿ‌ ಮತ್ತೊಮ್ಮೆ ಪ್ರಧಾನಿ ಆಗಬೇಕು. ʻʻಮೈ ನರೇಂದ್ರ ದಾಮೋದರ್ ದಾಸ್ʼ ಅಂತ ಮೋದಿ ಅವರು ಹೇಳುವುದನ್ನು ನಾವು ಮತ್ತೊಮ್ಮೆ ಕೇಳಬೇಕು. ಅವಾಗ ನಮ್ಮ ಪ್ರಯತ್ನ ಸಾರ್ಥಕ ಅಗುತ್ತದೆ ಎಂದ ಸೂಲಿಬೆಲೆ.

ಇದನ್ನೂ ಓದಿ: Chaitra Kundapura : ಚೈತ್ರಾ ವಂಚನೆ ಸಿ.ಟಿ. ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಹೇಳಿದಾಗ ಪ್ರತಿಕ್ರಿಯೆ ಏನಿತ್ತು?

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮುಸ್ಲಿಮರು ಚಿಗುರಿದ್ದಾರೆ

ʻʻಕಾಂಗ್ರೆಸ್ ಸರ್ಕಾರಕ್ಕೆ ಬಂದ ಬಳಿಕ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಸೂಲಿಬೆಲೆ, ʻʻಸಿದ್ದರಾಮಯ್ಯನವರ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿರಲಿಲ್ಲ. ಈ ಹಿಂದಿನ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಾವು ನೋಡಿದ್ದೇವೆ. ಹಿಂದೂ ಕಾರ್ಯಕರ್ತರ ಹತ್ಯೆ ಅಷ್ಟೇ ಅಲ್ಲ ದನಗಳ ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಾಕಿಕೊಂಡು ಮೃತಪಟ್ಟವರಿಗೆ ಹತ್ತತ್ತು ಲಕ್ಷ ಪರಿಹಾರ ಕೊಟ್ಟಿದ್ದು ನೆನಪಿದೆ. ಸಿದ್ರಾಮಯ್ಯರ ಸರ್ಕಾರ ಬಂದ ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ದಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ಇಲ್ಲʼʼ ಎಂದು ಹೇಳಿದರು ಚಕ್ರವರ್ತಿ ಸೂಲಿಬೆಲೆ.

ʻʻಸಿದ್ರಾಮಯ್ಯನವರು ಮುಸ್ಲಿಂರ ಓಲೈಕೆ, ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಅಲ್ಲಾನ ಕೃಪೆಯಿಂದ ಈ ಸರ್ಕಾರ ಬಂದಿದೆ ಅಂತ ಗೃಹ ಸಚಿವರೇ ಹೇಳಿದ್ದಾರೆ. ಇದು ಹಿಂದುಗಳಿಗೆ ಮಾಡಿದ ದ್ರೋಹವಾಗಿದೆ. ಸಿದ್ದರಾಮಯ್ಯ, ಸರ್ಕಾರ ಹಿಂದೂಗಳಿಗೆ ಮಾಡುತ್ತಿರುವ ದ್ರೋಹ‌ಕ್ಕೆ ಸರಿಯಾದ ಶಾಸ್ತಿ ಅನುಭವಿಸುತ್ತದೆʼʼ ಎಂದರು.

ಗ್ಯಾರಂಟಿ ಯೋಜನೆ ಜಾರಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಸರ್ಕಾರದ ಅವಧಿ ಮುಗಿಯುವ ವೇಳೆ ರಾಜ್ಯ 25 ವರ್ಷ ಹಿಂದೆ ಹೋಗುತ್ತದೆ ಎಂದರು.

Exit mobile version