Site icon Vistara News

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

Death Threat to Modi threatens to kill PM Nrendra Modi and Yogi Adityanath and Nasir Brother Khaja apologises

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಜೀವ ಬೆದರಿಕೆ (Death Threat to Modi) ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸುರಪುರ ಠಾಣೆ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಈಗ ಅಣ್ಣ ಮಾಡಿರುವ ತಪ್ಪಿಗೆ ತಮ್ಮ ಕ್ಷಮೆ ಕೋರಿದ್ದಾನೆ.

ಅತ್ತ ಅಣ್ಣನಾದವನು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ. ಇತ್ತ ಕಿರಿಯ ಸಹೋದರ ಖಾಜಾ ಪಿಎಂ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯ ನಾಥ್‌ ಅಭಿಮಾನಿಯಾಗಿದ್ದಾರೆ. ಅವರು ಸುರಪುರದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ.

ಅಣ್ಣನ ಪರವಾಗಿ ಕ್ಷಮಾಪಣೆ ಕೋರಿದ ಖಾಜಾ; ಇಲ್ಲಿದೆ ಆಡಿಯೊ!

ಆಡಿಯೊದಲ್ಲಿ ಕ್ಷಮೆ ಕೇಳಿದ ಖಾಜಾ

ಅಣ್ಣ ಮಾಡಿರುವ ತಪ್ಪಿಗೆ ತಮ್ಮ ಖಾಜಾ ಕ್ಷಮೆ ಕೋರಿದ್ದು, ಈ ಬಗ್ಗೆ ಆಡಿಯೊವನ್ನು ಹರಿಬಿಟ್ಟಿದ್ದಾರೆ. “ನಮ್ಮ ಅಣ್ಣ ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ನಾನು ಆತನನ್ನು ಕರೆಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ರಾಜನಾಥ್‌ ಸಿಂಗ್ ಅವರಿಗೆ ಕ್ಷಮೆ ಕೋರುತ್ತೇನೆ. ನಮ್ಮ ಅಣ್ಣ ಕುಡಿದ ಮತ್ತಿನಲ್ಲಿ ಈ ತರಹ ಮಾತನಾಡಿದ್ದಾನೆ. ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರುತ್ತೇನೆ” ಎಂದು ಹೇಳಿದ್ದಾರೆ.

ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸುರಪುರ ಠಾಣೆ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಮೊಹಮ್ಮದ್ ರಸೂಲ್ ಕಡ್ದಾರೆ (45) ಬಂಧಿತ ಆರೋಪಿಯಾಗಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆ ನಿವಾಸಿಯಾಗಿರುವ ರಸೂಲ್ ಹೈದರಾಬಾದ್​ನಲ್ಲಿ ಕೂಲಿ ಕೆಸಲ ಮಾಡಿಕೊಂಡಿದ್ದ. ಈಗ ಕೈಯಲ್ಲಿ ತಲ್ವಾರ್ ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದ. ಈಗ ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ರಸೂಲ್‌ ಹೇಳಿದ್ದೇನು?

ಕೈಯಲ್ಲಿ ತಲ್ವಾರ್ ಹಿಡಿದಿದ್ದ ರಸೂಲ್‌ ಕಡ್ಡಾರೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ನಿಂದನೆ ಮಾಡಿದ್ದಾನೆ. “ಕಾಂಗ್ರೆಸ್ ಹೀಗೆಲ್ಲ ಆಡಳಿತ ಮಾಡಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಿದ್ದೇನೆ ಎಂದು ನಾಟಕ ಮಾಡುತ್ತಿದ್ದಿಯಾ? ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮಂತಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಕ್ಷ ಬಿಟ್ಟು ನನ್ನ ಜತೆ ಜಗಳಕ್ಕೆ ಬಾ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರಗಳು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್​” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಫೇಸ್​ಬುಕ್​ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದ್ದ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

ರಸೂಲ್​ ಈ ವಿಡಿಯೊವನ್ನು ಅಪ್ಲೋಡ್‌ ಮಾಡುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ವಿಡಿಯೊ ಕಂಡ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶರಣು ನಾಯಕ ಸುರುಪುರ ಎಂಬುವವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?

ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದೇನೆಂದ ರಸೂಲ್!

ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಸೂಲ್‌ ಪತ್ತೆಗೆ ಮುಂದಾಗಿದ್ದರು. ಸೋಮವಾರ (ಮಾ. 4) ರಂದು ರಸೂಲ್​ ಯಾದಗಿರಿಗೆ ಬಂದಿದ್ದ. ಈ ವಿಚಾರ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣ ನಡೆಸಿ ಆತನನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ತಾನು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ರಸೂಲ್‌ ತಪ್ಪೊಪ್ಪಿಕೊಂಡಿದ್ದಾನೆ.

Exit mobile version