ಯಾದಗಿರಿ: ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಯಾದಗಿರಿ (Yadagiri News) ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ರೈತ ಶಾಂತಪ್ಪ ಉಪ್ಪಾರ್ (35) ಮೃತ ದುರ್ದೈವಿ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಾಂತಪ್ಪ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಶಾಂತಪ್ಪ ಸುಮಾರು 2 ಲಕ್ಷ ರೂಪಾಯಿವರೆಗೂ ಕೈಸಾಲ ಮಾಡಿಕೊಂಡಿದ್ದರು. ತಂದೆ ಹೆಸರಿನಲ್ಲಿ 4 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಬೆಳೆದ ತೊಗರಿ ಬೆಳೆ ಕೂಡ ಹಾನಿಯಾಗಿತ್ತು. ಸಾಲ ಪಾವತಿ ಮಾಡಲು ಎರಡು ಎತ್ತುಗಳನ್ನು ಕೂಡ ಮಾರಾಟ ಮಾಡಿದ್ದರು.
ಆದರೆ ಸಾಲಗಾರರ ಕಾಟಕ್ಕೆ ಬೇಸತ್ತು ಶಾಂತಪ್ಪ ಮನೆಯಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Honey Bees Attack : ಸಾತೊಡ್ಡಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ 30ಕ್ಕೂ ಹೆಚ್ಚು ಪ್ರವಾಸಿಗರ ಮೇಲೆ ಜೇನು ದಾಳಿ
ಲಿವ್ ಇನ್ ಸಂಗಾತಿಯನ್ನು ಕೊಂದು, ಮಗನಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಮುಂಬೈ: ಲಿವ್ ಇನ್ ರಿಲೇಷನ್‌ಶಿಪ್ (Live In Relationship) ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಗೆ ಲಿವ್ ಇನ್ ರಿಲೇಷನ್‌ಶಿಪ್‌ಅನ್ನೂ ಜಾರಿಗೆ ತಂದು, ಲಿವ್ ಇನ್‌ನಲ್ಲಿರುವವರ ನೋಂದಣಿ ಸೇರಿ ಹಲವು ನಿಯಮ ರೂಪಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಲಿವ್ ಇನ್ ಪಾರ್ಟ್‌ನರ್‌ಗಳ (Live Partner) ಕೊಲೆ, ದೌರ್ಜನ್ಯ, ಹಿಂಸಾಚಾರ ಸೇರಿ ಅಪರಾಧ ಪ್ರಕರಣಗಳು ಹೆಚ್ಚಾದ ಕಾರಣ ಇಂತಹ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ (Maharashtra) ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದು, ಬಳಿಕ ತನ್ನ 3 ವರ್ಷದ ಮಗುವಿಗೆ ವಿಷವುಣಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಶನಿವಾರ ವ್ಯಕ್ತಿಯು ಇಂತಹದ್ದೊಂದು ಕೃತ್ಯ ಎಸಗಿದ್ದಾನೆ. ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿಯಲ್ಲಿರುವ ಗೋಲ್ಡನ್ ಕೀ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಸಚಿನ್ ವಿನೋದ್ ಕುಮಾರ್ ರಾವತ್ (29) ಹಾಗೂ ಆತನ ಮೂರು ವರ್ಷದ ಮಗ ಯುಗ್ ಎಂಬಾತನ ಶವ ಪತ್ತೆಯಾಗಿದೆ. ನಜ್ನಿನ್ ಎಂಬ ಮಹಿಳೆಗೆ ಸುತ್ತಿಗೆಯಿಂದ ಹೊಡೆದು, ಮಗನಿಗೆ ವಿಷವುಣಿಸಿ, ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯಪ್ರದೇಶ ಮೂಲದ ಸಚಿನ್ ವಿನೋದ್ ಕುಮಾರ್ ರಾವತ್ ಎಂಬಾತನು ಮಧ್ಯಪ್ರದೇಶ ಮೂಲದವನಾಗಿದ್ದಾನೆ. ಈತನು ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ನಜ್ನಿನ್ ಜತೆ ಸಚಿನ್ ವಿನೋದ್ ಕುಮಾರ್ ರಾವತ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರಲ್ಲಿ ಜಗಳವಾಗಿತ್ತು. ಹಾಗಾಗಿಯೇ ಲಿವ್ ಇನ್ ಸಂಗಾತಿ ಹಾಗೂ ಮಗನನ್ನು ಕೊಂದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಕೋಲ್ಕೊತಾದಲ್ಲಿ ಮಹಿಳೆಯು ಲಿವ್ ಇನ್ ರಿಲೇಷನ್‌ನಲ್ಲಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆಗೈದಿದ್ದಳು. ಸಾರ್ಥಕ್ ದಾಸ್ (30) ಹತ್ಯೆಗೀಡಾಗಿದ್ದರು. ಸಂಗಾತಿ ಪೌಲ್ (32) ಎಂಬ ಮಹಿಳೆಯೇ ಹತ್ಯೆಗೈದಿದ್ದಳು. ಸಾರ್ಥಕ್ ದಾಸ್ ಹಾಗೂ ಸಂಗಾತಿ ಪೌಲ್ ಅವರು ಕೆಲ ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಕೋಲ್ಕೊತಾದ ಮಧುಗಢ ಪ್ರದೇಶದ ಮಧುಬನಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇದ್ದರು. ಆದರೆ, ಕೆಲ ದಿನಗಳಿಂದ ಇಬ್ಬರ ಮಧ್ಯೆಯೂ ಹೆಚ್ಚು ಜಗಳ ಆಗುತ್ತಿದ್ದವು. ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಇದೇ ಕಾರಣಕ್ಕೆ ಸಾರ್ಥಕ್ ದಾಸ್ ಅವರನ್ನು ಸಂಗಾತಿ ಪೌಲ್ ಚಾಕು ಇರಿದು ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ