Site icon Vistara News

Tippu Controversy : ಟಿಪ್ಪು ವಿಷಯಕ್ಕೆ ಬಂದ್ರೆ ತಲೆ ತೆಗೀತೀನಿ; ಪ್ರಚೋದನಾತ್ಮಕ ಸ್ಟೇಟಸ್‌ ಹಾಕಿದ ಕಿಡಿಗೇಡಿ ಮುಸ್ಲಿಂ ಯುವಕ

provocative status

ಯಾದಗಿರಿ: ಗೊಣ್ಣೆ ಸುರಿಸಿಕೊಂಡಿರೋ ಮಕ್ಕಳೆಲ್ಲ ಟಿಪ್ಪು (Tippu Controversy) ಬಗ್ಗೆ ಭಾರಿ ಮಾತಾಡ್ತಾವೆ.. ಇನ್ನು ಮುಂದೆನೂ ಹೀಗೇನೇ ಮಾತಾಡಿದ್ರೆ ತಲೆ ತೆಗೀತೇನೆ- ಎನ್ನುವ ಸಾರಾಂಶದಲ್ಲಿ ವಾಟ್ಸ್‌ ಆಪ್‌ ಸ್ಟೇಟಸ್‌ (Whatapp Status) ಹಾಕುವ ಮೂಲಕ ಯುವಕನೊಬ್ಬ ಬಿಜೆಪಿ ನಾಯಕರನ್ನು (BJP Leaders) ನಿಂದಿಸಿದ್ದಾನೆ.

ಯಾದಗಿರಿ ಜಿಲ್ಲೆಯ (Yadagiri News) ವಡಗೇರಾ ತಾಲೂಕಿನ ಅರ್ಜುನಗಿ ಗ್ರಾಮದ ಮೊಹಮ್ಮದ್‌ ಶಬ್ಬೀರ್‌ ಅಹ್ಮದ್‌ ಎಂಬಾತನೇ ಈ ರೀತಿ ಸ್ಟೇಟಸ್‌ ಹಾಕಿಕೊಂಡವನು. ಈತನ ಸ್ಟೇಟಸ್‌ ಈಗ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಫೋಟೊಗಳನ್ನು ಹಾಕಿ ಅವರನ್ನೆಲ್ಲ ಚಿಲ್ಲರೆ ವ್ಯಕ್ತಿಗಳು ಎಂದಿರುವ ಈ ಯುವಕ, ಇವರೆಲ್ಲ ಗೊಣ್ಣೆ ಸುರಿಸುವ ಜನಗಳು ಟಿಪ್ಪು ಸುಲ್ತಾನ್‌ ಬಗ್ಗೆ ಮಾತಾಡ್ತಾರೆ ಎಂದಿದ್ದಾನೆ. ಇನ್ನು ಮುಂದೆ ಟಿಪ್ಪು ವಿಜಯಕ್ಕೆ ಬಂದರೆ ತಲೆ ತೆಗೀತೀನಿ ಎಂದು ಹೇಳಿದ್ದಾನೆ.

ಬಿಜೆಪಿ ನಾಯಕರನ್ನು ಅಪಮಾನಿಸುವ ಈ ಸ್ಟೇಟಸ್‌ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಆರೋಪಿ ಶಬ್ಬೀರ್‌ನನ್ನು ಬಂಧಿಸಬೇಕು, ಹಿರಿಯ ನಾಯಕರನ್ನು ಈ ರೀತಿಯಾಗಿ ನಿಂದಿಸಿದ ಯುವಕನಿಗೆ ಬುದ್ಧಿ ಕಲಿಸಬೇಕು ಎಂದು ಕೋರಿ ಪೊಲೀಸರಿಗೆ ದೂರು ನೀಡಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸ್ಟೇಟಸ್ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ವಡಗೇರಾ ಪೊಲೀಸರು ಆತನ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹೀಗಾಗಿ ಆತನಿಗೆ ಮಾತ್ರವಲ್ಲ, ಅದನ್ನು ಹಂಚಿಕೊಂಡ ಇತರರ ಮೇಲೂ ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Jai Shree Ram : ಜೈ ಶ್ರೀರಾಮ್‌ ಎಂದ ಮುಸ್ಲಿಂ ಜೋಡಿಯನ್ನು ಸೀಳಿ ಹಾಕ್ತೇನೆ ಎಂದವ ಸಿಕ್ಕಿಬಿದ್ದ; ಅವನೊಬ್ಬ ಆಟೋ ಚಾಲಕ!

ಜೈ ಶ್ರೀರಾಮ್‌ ಎಂದಿದ್ದ ಜೋಡಿಗೂ ನಿಂದನೆ ಮಾಡಲಾಗಿತ್ತು

ಈ ನಡುವೆ ಬೆಂಗಳೂರಿನ ರಿಕ್ಷಾ ಚಾಲಕನೊಬ್ಬ ಇತ್ತೀಚೆಗೆ ಜೈ ಶ್ರೀರಾಂ ಎಂದು ಘೋಷಣೆ ಕೂಗಿದ ಮುಸ್ಲಿಂ ಜೋಡಿಗೆ ಬೆದರಿಕೆ ಹಾಕಿದ್ದು ಸುದ್ದಿಯಾಗಿತ್ತು. ಟೋಪಿ ಧರಿಸಿದ್ದ ಯುವಕ ಮತ್ತು ಬುರ್ಖಾ ಧರಿಸಿದ್ದ ಯುವತಿ ಜತೆಯಾಗಿ ಜೈ ಶ್ರೀರಾಂ ಎಂದು ಘೋಷಣೆ ಕೂಗುವ ವಿಡಿಯೊ ಒಂದು ಓಡಾಡಿತ್ತು. ಇದರ ವಿರುದ್ಧ ಯುವಕನೊಬ್ಬ ಕತ್ತನ್ನೇ ಸೀಳಿ ಹಾಕುವುದಾಗಿ ಹೇಳಿದ್ದ. ಆತ ಬೆಂಗಳೂರಿನವನು ಎಂಬ ವಿಷಯ ತಿಳಿದ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಪ್ರಚೋದನಾತ್ಮಕ ಮತ್ತು ಅಪಮಾನಕಾರಿ ಪೋಸ್ಟ್‌ಗಳನ್ನು ಹಾಕುವ ಚಾಳಿ ಜಾಸ್ತಿಯಾಗಿದ್ದು, ಇದರ ವಿರುದ್ಧ ಕಠಿಣ ಕ್ರಮದ ಅವಶ್ಯಕತೆಯನ್ನು ಸರ್ಕಾರವೂ ಮನಗಂಡಿದೆ. ಜಾಲತಾಣದಲ್ಲಿ ಸುಳ್ಳು ಸುದ್ದಿ, ತಪ್ಪು ಮಾಹಿತಿ, ಧಾರ್ಮಿಕ ಮನೋಭಾವನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ಪೋಸ್ಟ್‌ ಹಾಕಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಜತೆಗೆ ಫ್ಯಾಕ್ಟ್‌ ಚೆಕ್‌ಗಾಗಿ ಒಂದು ತಂಡವನ್ನೇ ನಿಯೋಜಿಸಿದೆ. ಸರ್ಕಾರ ಈ ವ್ಯವಸ್ಥೆಯನ್ನು ಹಿಂದು ಸಮಾಜ, ಬಿಜೆಪಿ ನಾಯಕರನ್ನು ಅಪಮಾನಿಸುವ ವ್ಯಕ್ತಿಗಳನ್ನು ಶಿಕ್ಷಿಸಲು ಕೂಡಾ ಬಳಕೆಯಾಗಲಿ ಎಂದು ಮನವಿ ಮಾಡಲಾಗಿದೆ.

Exit mobile version