ಯಾದಗಿರಿ: ಜಿಲ್ಲೆಯ ಕೆಲವು ಕಡೆ ಉತ್ತಮ (Rain News) ಮಳೆಯಾಗುತ್ತಿದ್ದು, ಸುರಪುರ ತಾಲೂಕಿನಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುವಾಗ ನಿಂಗಪ್ಪ ಸಂಗವಾರ ಎಂಬುವವರ ಪತ್ನಿ ನಂದಮ್ಮ (44) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅದೇ ರೀತಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ದೇವತ್ಕಲ್ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಮಲ್ಲಿಕಾರ್ಜುನ ಎಂಬುವವರ ಪುತ್ರ ರಾಜು (33) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಇದನ್ನೂ ಓದಿ | Child marriage| 16ರ ಬಾಲಕಿಗೆ 52 ವರ್ಷದ ಗಂಡ! ಬಂಧಿಸಲು ಹೋದಾಗ ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯುರಿಟಿ ಗಾರ್ಡ್!